-ಉಚಿತ ಆರೋಗ್ಯ ತಪಸಣಾ ಶಿಬಿರ
ಆಧಿರೋಧಿಗ್ಯಧಿವಂತ ಮಧಿಹಿಧಿಳೆಧಿಯಧಿರಿಂದ ಸ್ವಸ್ಥ ಸಧಿಮಾಧಿಜ
ವಿಕ ಸುದ್ದಿಲೋಕ ಧಾರವಾಡ
ಅಸ್ವಸ್ಥ ಆಹಾರ, ಅನಿಯಮಿತ ಕೆಲಸದ ಒತ್ತಡ ಮಹಿಳೆಯರ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರುತ್ತಿದೆ. ಮಹಿಳೆ ಆರೋಗ್ಯಯುತವಾಗಿದ್ದರೆ ಮನೆ, ಕಾರ್ಯನಿರ್ವಹಿಸುತ್ತಿರುವ ಸ್ಥಳ ಮತ್ತು ಸಮಾಜವು ಸಹ ಆರೋಗ್ಯವಾಗಿರುತ್ತದೆ ಎಂದು ಜೆಎಸ್ ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್ ಎಸ್ ಉತ್ಸವ ಸಭಾಭವನದಲ್ಲಿಜನತಾ ಶಿಕ್ಷಣ ಸಮಿತಿ, ಆರ್ .ಬಿ ಪಾಟೀಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಧಿಟಿ ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಂಗವಾಗಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಸಣಾ ಶಿಬಿರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅಧಿವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿಹದಿಹರೆಯದಧಿವರಲ್ಲಿಅತಿ ಹೆಚ್ಚು ಕಂಡುಬರುತ್ತಿರುವ ರೋಗ ಕ್ಯಾನ್ಸರ್ . ಕ್ಯಾನ್ಸರ್ ಎಂದರೆ ದೇಹದ ಕೋಶಗಳು ನಿಯಂತ್ರಣವಿಲ್ಲದೆ ಹೆಚ್ಚಾಗಿ ಬೆಳೆಯುವ ಒಂದು ಗಂಭೀರ ರೋಗ. ಇದು ದೇಹದ ಯಾವುದಾದರೂ ಭಾಗದಲ್ಲಿಉಂಟಾಗಬಹುದು. ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರು ಈ ರೋಗದಿಂದ ಬಳಲುತ್ತಿದ್ದಾರೆ ಎಂದರು.
ಎಸ್ ಡಿಎಂ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯ ರಮೇಶಕುಮಾರ. ಆರ್ . ಮಾತನಾಡಿ, ಸ್ತ್ರೀಯರು ಮಾನಸಿಕ ಮತ್ತು ದೈಹಿಕವಾಗಿ ಸದೃಧಿಢರಾದರೇ ಮಾತ್ರ ಯಾವುದೇ ಕಾಯಿಲೆಗಳಿದ್ದರೂ ಬೇಗನೆ ಗುಣಮುಖರಾಗಬಹುದು. 35ನೇ ವಯಸ್ಸಿನ ನಂತರ ಹೆಣ್ಣು ಮಕ್ಕಳಲ್ಲಿಸ್ತನ ಕ್ಯಾನ್ಸರ್ ಮತ್ತು ಗರ್ಭಾಶಯದ ಕ್ಯಾನ್ಸರ್ ಅತಿ ಹೆಚ್ಚು ಕಂಡುಬರುತ್ತಿದ್ದು, ಪ್ರಾರಂಭದಲ್ಲೇ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ200 ಮಹಿಳಾ ಸಿಬ್ಬಂದಿಗಳಿಗೆ ಮೆಮೊಗ್ರಾಫಿ ಪರೀಕ್ಷೆ ಮಾಡಲಾಯಿತು. ಡಾ.ಉಮೇಶ ಹಳ್ಳಿಕೇರಿ, ಮಹಾವೀರ ಉಪಾದ್ಯೆ, ಅರಿಹಂತ ಪ್ರಸಾದ, ಸಂತಾನಿ ದಂಡಿನ, ಭಾರತಿ ಶಾನಭಾಗ, ರೇಣು ಪಾಟೀಲ್ , ವಿದ್ಯಾ ಕೊಲ್ಹಾಪುರೆ, ಸುಜಾತಾ ಕೊಂಬಳಿ, ಧನ್ವಂತರಿ ಹಿರೇಮಠ ಸೇರಿದಂತೆ ಇತರರು ಇದ್ದರು.
ಫೋಟೊ: 10ಮಹೇಶ6
ಧಾರವಾಡ ವಿದ್ಯಾಗಿರಿಯ ಜೆಎಸ್ ಎಸ್ ಉತ್ಸವ ಸಭಾಭವನದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಸಣಾ ಶಿಬಿರ ಮತ್ತು ಸಂವಾದ ಕಾರ್ಯಕ್ರಮದಲ್ಲಿಡಾ. ಅಜಿತ ಪ್ರಸಾದ ಮಾತನಾಡಿದರು.

