ಲಿಂಗಸುಗೂರು- 50 ಬೆಡ್ ಆಸ್ಪತ್ರೆ ಕಾಮಗಾರಿ ಆರಂಭಕ್ಕೆ ಒತ್ತಾಯ

Contributed bymkhussain.lgs@gmail.com|Vijaya Karnataka

ಲಿಂಗಸುಗೂರು ಪಟ್ಟಣಕ್ಕೆ ಮಂಜೂರಾದ 50 ಬೆಡ್‌ಗಳ ತೀವ್ರ ನಿಗಾ ಘಟಕ ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸುವಂತೆ ಜಾಂಬವ ಯುವಸೇನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕರಡಕಲ್‌ ಹೊರವಲಯದಲ್ಲಿ ಗುರುತಿಸಲಾದ 6 ಎಕರೆ ಜಮೀನಿನಲ್ಲಿಯೇ ನೂತನ ಕಟ್ಟಡ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಹಳೆಯ ಆಸ್ಪತ್ರೆಯಲ್ಲಿ ನಿರ್ಮಾಣ ಪ್ರಯತ್ನ ತಡೆಯಬೇಕು. ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೂ ಆಗ್ರಹಿಸಿದ್ದಾರೆ.

demand for commencement of 50 bed hospital construction in lingasugur

50 ಬೆಡ್ ಆಸ್ಪತ್ರೆ ಕಾಮಗಾರಿ ಆರಂಭಕ್ಕೆ ಒತ್ತಾಯ

ಲಿಂಗಸುಗೂರು: ‘‘ಪಟ್ಟಣಕ್ಕೆ ಮಂಜೂರಾಗಿರುವ 50 ಬೆಡ್ ಗಳ ತೀವ್ರ ನಿಗಾ ಘಟಕ ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸಬೇಕು,’’ ಎಂದು ಜಾಂಬವ ಯುವಸೇನೆ ಕಾರ್ಯಕರ್ತರು ಒತ್ತಾಯಿಸಿದರು.

ಎಸಿ ಕಚೇರಿ ಅಧಿಕಾರಿ ಧ್ರುವ ದೇಶಪಾಂಡೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ಅವರು, ‘‘ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದಲ್ಲಿ 6 ಎಕರೆ ಜಮೀನನ್ನು ಈಗಾಗಲೇ ಆಸ್ಪತ್ರೆಗೆ ಗುರುತಿಸಲಾಗಿದೆ. ಅಲ್ಲಿಯೇ ನೂತನ ಕಟ್ಟಡ ನಿರ್ಮಿಸಬೇಕು. ಹಳೆಯ ಆಸ್ಪತ್ರೆಯ ಮೇಲ್ಚಾವಣಿಯಲ್ಲಿಕಟ್ಟಡ ನಿರ್ಮಾಣ ಪ್ರಯತ್ನ ನಡೆಯುತ್ತಿದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದ್ದು, ಇದನ್ನು ತಡೆಯಬೇಕು. ನಿಗದಿತ ಸ್ಥಳದಲ್ಲಿಯೇ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ ಆರಂಭಿಸಬೇಕು. ಅಲ್ಲದೇ, ಈಗಾಗಲೇ ಕಾಮಗಾರಿ ಪೂರ್ತಿಯಾಗಿರುವ ನೂತನ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟಿಸಬೇಕು,’’ ಎಂದು ಎಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ಶಶಿಕುಮಾರ ಜಾಂಬವ, ಕರ್ನಾಟಕ ಬಹುಜನ ಚಳವಳಿ ಅಧ್ಯಕ್ಷ ಅಮರೇಶ ಗೋಸ್ಲೆ, ದಲಿತ ಸೇನೆ ಅಧ್ಯಕ್ಷ ಬಸವರಾಜ ಗೋಸ್ಲೆ, ಮಲ್ಲಿಕಾರ್ಜುನ ಸರ್ಜಾಪುರ ಸೇರಿ ಇತರರಿದ್ದರು.

---

10ಆರ್ ಸಿಎಚ್ ಎಲ್ ಎನ್ ಜಿ-3:

ಆಸ್ಪತ್ರೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಜಾಂಬವ ಯುವಸೇನೆ ಕಾರ್ಯಕರ್ತರು ಲಿಂಗಸುಗೂರು ಎಸಿ ಕಚೇರಿ ಅಧಿಕಾರಿ ಧ್ರುವ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.