9ಮಹೇಶ2
ಮಹಿಳೆಗೆ ಗೌರವ ಕೊಡಲು ಮಕ್ಕಳಿಗೆ ಕಲಿಸಿ
ವಿಕ ಸುದ್ದಿಲೋಕ ಧಾರವಾಡ
ನಗರದ ವಿದ್ಯಾಗಿರಿ ಲಕ್ಷ್ಮೀ ನಗರ ಮಹಿಳಾ ಮಂಡಲದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ ಕಾರ್ಯಕ್ರಮವನ್ನು ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಮನೆಯಲ್ಲಿಮೊದಲು ಪಾಲಕರು ಕಲಿಸಬೇಕು. ಇದರಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗಲು ಸಾಧ್ಯ ಎಂದರು.
ಹುಬ್ಬಳ್ಳಿ ಆರ್ ಎನ್ ಎಸ್ ಸುಜುಕಿ ಮೋಟರ್ಸ್ ಚೀಫ್ ಜನರಲ್ ಮ್ಯಾನೇಜರ್ ಅರ್ಚನಾ ಮಾತನಾಡಿ, ಆಟೋಮೊಬೈಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ವಿಭಾಗದಲ್ಲಿಇತ್ತೀಚೆಗೆ ಉತ್ತಮ ಅವಕಾಶಗಳು ಇವೆ. ಶ್ರದ್ಧೆ ಹಾಗೂ ಧೈರ್ಯ ದಿಂದ ಕೆಲಸ ಮಾಡಿದರೆ ಮಹಿಳೆಯರು ಉನ್ನತ ಮಟ್ಟಕ್ಕೆ ತಲುಪಬಹುದು ಎಂದರು.
ಅಧ್ಯಕ್ಷೆ ಶೋಭಾ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ ಜೀವನದಲ್ಲಿಮುಂದೆ ಬರಬೇಕೆಂದರು.ಸುಲೋಚನಾ ಮಾಲಿ ಪಾಟೀಲ್ ಮಾತನಾಡಿದರು.
ವಿಜಯ ಹೊಳೆನವರ್ , ಗಾಯತ್ರಿ ಬಿಕ್ಕನ್ನÜವರ್ , ಸುನಂದ ಲಕ್ಕಣ್ಣವರ್ ಇತರರು ಇದ್ದರು.
ಫೋಟೊ: 9ಮಹೇಶ2
ಧಾರವಾಡ ವಿದ್ಯಾಗಿರಿ ಲಕ್ಷ್ಮೀ ನಗರ ಮಹಿಳಾ ಮಂಡಲದಲ್ಲಿನಡೆದ ಮಹಿಳಾ ದಿನಾಚರಣೆಯನ್ನು ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸಿದರು.

