(ವಿಕ ಎಐ ಲೋಕ)

Contributed byKeerthi Kolgar|Vijaya Karnataka

ಚಾಟ್‌ಜಿಪಿಟಿ ಯಂತಹ ಜೆನ್‌-ಎಐ ತಂತ್ರಜ್ಞಾನವು ಈಗ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಆಫೀಸಿನಲ್ಲಿ ಇಬ್ಬರು ಹುಡುಗಿಯರ ಸಂಭಾಷಣೆಯಿಂದ ಪ್ರೇರಿತರಾದ ಲೇಖಕರು, ಎಐ ಬಳಸಿ ತರಕಾರಿಗಳನ್ನು ಅಗ್ಗವಾಗಿ ಪಡೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಯಾವುದೇ ಆ್ಯಪ್‌ಗೆ ಹೋಗದೆ, ನೇರವಾಗಿ ಚಾಟ್‌ಬಾಟ್‌ ಮೂಲಕ ಉತ್ತಮ ಆಫರ್‌ಗಳೊಂದಿಗೆ ಉತ್ಪನ್ನಗಳನ್ನು ಆರ್ಡರ್‌ ಮಾಡಬಹುದು. ಇದರಿಂದ ಮನೆಯಲ್ಲೇ ಕುಳಿತು ಜನಸಂದಣಿಯಲ್ಲಿ ಸಿಲುಕದೆ, ಅಗ್ಗದ ಮತ್ತು ಉತ್ತಮ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗಿದೆ.

its time to ask ai for vegetable purchases
ಒಂದು ದಿನ ಕಚೇರಿಯ ವರಾಂಡದಲ್ಲಿ ನಡೆಯುತ್ತಿದ್ದಾಗ ಇಬ್ಬರು ಹುಡುಗಿಯರ ಮಾತುಕತೆ ನನ್ನ ಗಮನ ಸೆಳೆಯಿತು. ಒಬ್ಬರು, "ತರಕಾರಿ ಯಾವ ಆ್ಯಪ್‌ನಲ್ಲಿ ಅಗ್ಗವಾಗಿ ಸಿಗುತ್ತೆ?" ಎಂದು ಕೇಳಿದಾಗ, ಇನ್ನೊಬ್ಬರು, "ಅದು ಸಿಂಪಲ್ ಮಾರಾಯ್ತಿ. ಚಾಟ್‌ಜಿಪಿಟಿಗೆ ಕೇಳು ಅದೇ ಹೇಳಿಬಿಡುತ್ತೆ!" ಎಂದು ಉತ್ತರಿಸಿದರು. ಈ ಮಾತು ಕೇಳಿ ನನಗೆ ಅಚ್ಚರಿಯಾಯಿತು. ಜೆನ್‌-ಎಐ (Gen-AI) ಅನ್ನು ಇಷ್ಟು ಸುಲಭವಾಗಿ ಬಳಸಬಹುದೆಂದು ನಾನು ಯೋಚಿಸಿರಲಿಲ್ಲ.

ನಾನೂ ಒಮ್ಮೆ ಪ್ರಯೋಗ ಮಾಡಿ ನೋಡಿದೆ. ಚಾಟ್‌ಬಾಟ್‌ಗೆ ಕೇಳಿದಾಗ, ಅದು ಯಾವ ತರಕಾರಿ ಅಗ್ಗವಾಗಿದೆ, ಎಲ್ಲಿ ಆಫರ್ ಚೆನ್ನಾಗಿದೆ, ಯಾವ ಆಫರ್ ಕೋಡ್ ಇದೆ - ಇದೆಲ್ಲವನ್ನೂ ಹೇಳಿಬಿಟ್ಟಿತು. ಇದರಿಂದಾಗಿ, ನಾವು ಪ್ರತಿಯೊಂದು ಇ-ಕಾಮರ್ಸ್ ಆ್ಯಪ್‌ಗಳಿಗೆ ಹೋಗಿ ಬೆಲೆ ಹೋಲಿಸುವ ಬದಲು, ನೇರವಾಗಿ ಚಾಟ್‌ಬಾಟ್ ಬಳಸಿದರೆ ಸಾಕು. ಇದರಿಂದ ನಮಗೆ ಬೇಕಾದ ಅಗ್ಗದ ಉತ್ಪನ್ನಗಳನ್ನು ತ್ವರಿತವಾಗಿ ಆರ್ಡರ್ ಮಾಡಬಹುದು.
ಮನೆಯಿಂದ ಹೊರಗೆ ಹೋಗದೆ, ಮಾಲ್‌ಗಳಲ್ಲಿ ಜನಸಂದಣಿಯಲ್ಲಿ ಸಿಲುಕಿಕೊಳ್ಳದೆ, ಕೂತಲ್ಲೇ ಅಗ್ಗದ ಮತ್ತು ಉತ್ತಮ ಉತ್ಪನ್ನಗಳನ್ನು ಪಡೆಯಲು ಜೆನ್‌-ಎಐ ಸಹಾಯ ಮಾಡುತ್ತದೆ. ಇದು ನಿಜಕ್ಕೂ ಜೆನ್‌-ಎಐ ಪವರ್!

- ವಿಕ್ರಂ ಜೋಶಿ, ಎಐ ವಿಶ್ಲೇಷಕರು