ವಿದ್ಯಾರ್ಥಿನಿಯರು ಸುರಕ್ಷತೆಗಾಗಿ ಕಾನೂನು ತಿಳಿಯಿರಿ
ವಿಕ ಸುದ್ದಿಲೋಕ ಭದ್ರಾವತಿ
ವಿದ್ಯಾರ್ಥಿನಿಯರು ಸುರಕ್ಷತೆಗಾಗಿ ಕಾನೂನು ಜಾಗೃತಿ ಮೂಡಿಸಿಕೊಳ್ಳುವ ಮೂಲಕ ಶ್ರದ್ಧೆಯಿಂದ ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ಕಾಗದ ನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಕವಿತಾ ಹೇಳಿದರು.
ಅವರು ಬಿಜೆಪಿ ನಗರ ಮತ್ತು ಗ್ರಾಮಾಂತರ ಮಹಿಳಾ ಮೋರ್ಚಾ ಘಟಕಗಳ ಸಂಯುಕ್ತಾಶ್ರಯದಲ್ಲಿಹಳೇನಗರದ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದರು.
ಪೋಷಕರಿಂದ ದೂರವಿರುವ ನೀವು ಕಷ್ಟಪಟ್ಟು ಓದಿ ಉತ್ತಮ ಸ್ಥಾನ, ಹುದ್ದೆಗಳನ್ನು ಹೊಂದಬೇಕು. ನಿಮಗೆ ದೈಹಿಕ ಮಾನಸಿಕವಾಗಿ ಕಿರುಕುಳ ಮತ್ತಿತರೆ ಸಮಸ್ಯೆಗಳಿದ್ದರೆ 112, ಸೈಬರ್ ವಂಚನೆಗೆ 1930ಕ್ಕೆ ಕರೆ ಮಾಡಿ. ಇಲ್ಲವೇ ಖುದ್ದಾಗಿ ಪೊಲೀಸ್ ಠಾಣೆಗೆ ದೂರು ನೀಡಿ, ಕಾನೂನು ಸದಾ ನಿಮ್ಮ ಜತೆಯಲ್ಲಿದೆ ಎಂದು ಆತ್ಮಸ್ಥೈರ್ಯ ತುಂಬಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷೆ ಅನ್ನಪೂರ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಘಟಕಾಧ್ಯಕ್ಷೆ ಶಕುಂತಲಾ ಪ್ರದೀಪ್ , ಹಾಸ್ಟೆಲ್ ವಾರ್ಡನ್ ಚಂದ್ರಕಲಾ, ಮಂಡಲ ಕಾರ್ಯದರ್ಶಿ ಕವಿತಾ ರಾವ್ , ಎಸ್ ಟಿ ಮೋರ್ಚಾ ಅಧ್ಯಕ್ಷೆ ನಾಗಮಣಿ, ಪ್ರಮುಖರಾದ ಶಶಿಕಲಾ, ಪದ್ಮಪ್ರಿಯ, ರುಕ್ಮಿಣಿ, ಜಯಶೀಲಾ, ಭಾಗ್ಯ, ಪ್ರತಿಮಾ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
9ಭದ್ರಾವತಿ2
ಭದ್ರಾವತಿ ಹಳೇನಗರದ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿಕಾಗದ ನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಕವಿತಾ ಮಾತನಾಡಿದರು.

