ನಂದಿನಿ ನಧಿಕಲಿ ತುಪ್ಪ ಪಧಿತ್ತೆಧಿಗೆ ಬಂದಿಧಿದೆ ಕ್ಯೂಆರ್ ಕೋಡ್

Contributed bydjtrupti@gmail.com|Vijaya Karnataka

ಕೆಎಂಎಫ್‌ ಈಗ ನಂದಿನಿ ತುಪ್ಪದ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ತುಪ್ಪದ ಬಾಟಲಿಗಳು ಮತ್ತು ಪ್ಯಾಕೆಟ್‌ಗಳ ಮೇಲೆ ಕ್ಯೂಆರ್‌ ಕೋಡ್‌ ಅಳವಡಿಸಲಾಗುತ್ತಿದೆ. ಇದನ್ನು ಸ್ಕ್ಯಾನ್‌ ಮಾಡಿದರೆ ತುಪ್ಪದ ಉತ್ಪಾದನೆ, ಮಾರಾಟದ ವಿವರಗಳು ಗ್ರಾಹಕರ ಮೊಬೈಲ್‌ಗೆ ಬರಲಿದೆ. ಇದರಿಂದ ಅಸಲಿ ಮತ್ತು ನಕಲಿ ತುಪ್ಪವನ್ನು ಸುಲಭವಾಗಿ ಗುರುತಿಸಬಹುದು. ಇದು ಗ್ರಾಹಕರಿಗೆ ಗುಣಮಟ್ಟದ ಖಾತ್ರಿ ನೀಡಲಿದೆ.

nandini ghee qr code an easy way to identify fake products

ಶಾಂತಮೂರ್ತಿ ಬೆಂಗಳೂರು sha್ಞಠಿha.aಃಠಿಜಿಞಛಿsಟ್ಛಜ್ಞಿdಜಿa.್ಚಟಞ ನಂದಿನಿ ನಕಲಿ ತುಪ್ಪ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೆಎಂಎಫ್ , ಕ್ಯೂಆರ್ ಕೋಡ್ ಅಸ್ತ್ರ ಪ್ರಯೋಗಿಸುತ್ತಿದೆ. ತುಪ್ಪದ ಬಾಟಲಿಗಳು, ಪ್ಯಾಕೇಟ್ ಗಳ ಮೇಲೆ ಕ್ಯೂಆರ್ ಕೋಡ್ ಮುದ್ರಿಸುವ ಮೂಲಕ ಗ್ರಾಹಕರಿಗೆ ಗುಣಮಟ್ಟದ ಖಾತ್ರಿ ನೀಡುತ್ತಿದೆ. ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ ಹೆಸರಿನಲ್ಲಿನಕಲಿ ತುಪ್ಪದ ಮಾರಾಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಈ ಕ್ರಮ ಕೈಗೊಳ್ಳಲಾಗಿದೆ. ನಂದಿನಿ ತುಪ್ಪ ದ ಉತ್ಪನ್ನದ ಮೇಲೆ ಮುದ್ರಿಸಲಾಗಿರುವ ಕ್ಯೂಆರ್ ಕೋಡ್ ಸ್ಕ್ಯಾ ನ್ ಮಾಡಿದರೆ ಗ್ರಾಹಕರ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಜತೆಗೆ ತುಪ್ಪದ ಕುರಿತು ಮಾಹಿತಿ ಲಭ್ಯವಾಗಲಿದೆ. ತುಪ್ಪವನ್ನು ಯಾವ ಘಟಕದಲ್ಲಿಉತ್ಪಾದಿಸಲಾಯಿತು. ಯಾವ ಮಳಿಗೆಗೆ ಮಾರಾಟ ಮಾಡಲಾಗಿದೆ. ಅದನ್ನು ತಯಾರಿಸಿದ ವರ್ಷ, ತಿಂಗಳಿನ ವಿವರ ದೊರಕಲಿದೆ. ಇದರಿಂದ ಗ್ರಾಹಕರು ಅಸಲಿ ಯಾವುದು, ನಕಲಿ ಯಾವುದು ಎಂಬುದನ್ನು ತಿಳಿಯಲು ಅನುಕೂಲವಾಗಲಿದೆ. ಇತ್ತೀಚೆಗಷ್ಟೇ ನಂದಿನಿ ತುಪ್ಪದ ಹೆಸರಿನಲ್ಲಿನಕಲಿ ತುಪ್ಪವನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇಧಿದಿಸಿದ್ದ ಕೆಎಂಎಫ್ , ನಕಲಿ ತುಪ್ಪ ಮಾರಾಟಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಂಡಿದೆ. ನಕಲಿ ತುಪ್ಪ ಮಾರಾಟದ ಬಗ್ಗೆ ಪದೇಪದೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿತುಪ್ಪದ ಗುಣಮಟ್ಟ ಹಾಗೂ ಅಸಲಿತನ ಪತ್ತೆಗೆ ಕ್ಯೂಆರ್ ಕೋಡ್ ಅಳವಡಿಸಲು ಕೆಎಂಎಫ್ ಚಿಂತನೆ ನಡೆಸಿತ್ತು. ಈ ಸಂಬಂಧ ಆಹಾರ ಇಲಾಖೆಯೊಂದಿಗೆ ಚರ್ಚಿಸಿ, ಸರಕಾರದ ಅನುಮತಿ ಪಡೆದ ಬಳಿಕ ಸುರಕ್ಷಾ ಕ್ರಮದ ಭಾಗವಾಗಿ ತುಪ್ಪದ ಪ್ಯಾಕೆಟ್ , ಬಾಟಲಿಗಳ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ. ಅಸಲಿ ತುಪ್ಪದ ಪ್ಯಾಕೇಟ್ , ಬಾಟಲಿಗಳ ಮೇಲೆ ಮುದ್ರಿತವಾಗಿರುವ ಕ್ಯೂಆರ್ ಕೋಡ್ ಸ್ಕ್ಯಾ ನ್ ಮಾಡಿದಾಗ ಮಾಹಿತಿ ಲಭ್ಯವಾಗಲಿದ್ದು, ಇದರಿಂದ ಗ್ರಾಹಕರು ತಾವು ಖರೀದಿಸಿದ ನಂದಿನಿ ತುಪ್ಪ ಅಸಲಿಯೋ, ನಕಲಿಯೋ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.