ವಿಷ್ಣು ಕುಮಾರ್ ವಿ. ಬೂದಿಕೋಟೆ ಗ್ರಾಮದ ಸುತ್ತಲೂ ಸುಂದರವಾದ ಕೋಟೆ. ಕೋಟೆಯ ಮೇಲೆ ನಿಂತು ನೋಡಿದರೆ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ. ಇತಿಹಾಸದ ಕಥೆಯೊಂ ದನ್ನು ಹೇಳುತ್ತಿರುವಂತೆ ಕಾಣುವ ಸ್ಮಾರಕಗಳು. ಇವೆಲ್ಲಕಾಣಸಿಗುವುದು ಹೈದರಾಲಿ ಜನ್ಮಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಗಾರಪೇಟೆ ತಾಲೂಕಿನ ಬೂದಿಕೋಟೆಯಲ್ಲಿ. ಮೈಸೂರು ರಾಜ್ಯವನ್ನಾಳಿದ ಹೈದರಾಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿಕ್ರಿ.ಶ. 1721ರಲ್ಲಿಜನಿಸಿದ. ಶ್ರೀರಂಗಪಟ್ಟಣ ವನ್ನು ತನ್ನ ರಾಜಧಾನಿಯನ್ನಾಗಿ ಮಾಡಿ ಕೊಂಡ ಹೈದರಾಲಿ ಮೊದಲು ಮೈಸೂರು ರಾಜರಿಗೆ ಸಾಮಂತನಾಗಿದ್ದ. ಬೃಹತ್ತಾದ ಕೋಟೆಗಳು, ಕಲ್ಯಾಣಿ ಹಾಗೂ ಆಗಿನ ಕಾಲ ದಲ್ಲಿನಿರ್ಮಾಣವಾಗಿರುವ ದೇವಾಲಯ ಗಳು ಈ ಊರಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಇದನ್ನು ಒಂದು ಪ್ರವಾಸಿಕೇಂದ್ರವಾಗಿ ಅಭಿವೃದ್ಧಿಪಡಿಸುವಲ್ಲಿಮಾತ್ರ ವೈಫಲ್ಯ ಕಾಣುತ್ತಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ಸ್ಥಳವನ್ನು ‘ರಾಷ್ಟ್ರೀಯ ಮಹತ್ವದ ಸ್ಮಾರಕ’ ಎಂದು ಘೋಷಿಸಿದೆ. ಕೋಟೆಯ ಸುತ್ತ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಸೂಚಿಸಿ, ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇರುವುದಿಲ್ಲಎಂದೂ ಬರೆಯಲಾಗಿದೆ. ಆದರೆ ಇದೆಲ್ಲವೂ ನಾಮಫಲಕಕ್ಕೆ ಮಾತ್ರ ಸೀಮಿತ ವಾಗಿದೆ. ಕೋಟೆ ಅಂಚಿನಲ್ಲಿಯೇ ಕಟ್ಟಡ ಗಳನ್ನು ನಿರ್ಮಿಸಲಾಗಿದ್ದು, ಮನೆ, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಗತವೈಭವ ಬಿಂಬಿಸುವ ಇಲ್ಲಿನ ಅವಶೇಷ ಗಳು ಮರೆಯಾಗುತ್ತಿವೆ ಎಂಬುದು ಇತಿಹಾಸ ಪ್ರಿಯರ ಆರೋಪ. ಕೋಟೆ ಪ್ರವೇಶ ದ್ವಾರದಲ್ಲಿ‘ಹೈದರಾಲಿ ಹುಟ್ಟಿದ ಸ್ಥಳ’ 1720ರಿಂದ 1782ರವರಿಗೆ ಹೈದರಾಲಿ ಇಲ್ಲಿಆಳ್ವಿಕೆ ನಡೆಸಿದರು ಎಂಬ ಕಲ್ಲಿನ ಫಲಕ ನಿಲ್ಲಿಸಲಾಗಿದೆ. ಒಳಗೆ ಪುರಾತನ ಕಾಲದ ವೇಣುಗೋಪಾಲ ಹಾಗೂ ಸುಗ್ರೀವ ಗುಡಿಗಳಿವೆ. ಒಂದು ಕೊಳವೂ ಇದೆ. ಮಧ್ಯದಲ್ಲಿಹೈದರಾಲಿ ಹುಟ್ಟಿದ ಸ್ಥಳ ಎಂಬ ಸ್ಮಾರಕ ಶಿಲೆ ಇಡಲಾಗಿದ್ದು, ಸುತ್ತ ಸುಮಾರು 5 ಅಡಿ ಗೋಡೆ ಕಟ್ಟಿ ಕಬ್ಬಿಣದ ಬಾಗಿಲು ಅಳವಡಿಸಲಾಗಿದೆ. ಕೋಟೆಯೊಳಗೆ ಸ್ಮಾರಕ ನಿರ್ಮಿಸಿ ಪ್ರವಾಸಿ ಕೇಂದ್ರವಾಗಿ ಮಾರ್ಪಡಿಸುವ ಬಗ್ಗೆ ಸರಕಾರಕ್ಕೆ ಹಲವು ಬಾರಿ ಪ್ರವಾಸಿಗರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಮತ್ತು ವರ್ಷದ ಹಿಂದೆ ವಕ್ಫ್ ಬೋರ್ಡ್ ಅವರ ಗಮನಕ್ಕೂ ತರಲಾಗಿದೆ. ಯಾವುದೇ ಪ್ರಯೋಜನ ವಾಗಿಲ್ಲಎನ್ನುವುದು ಗ್ರಾಮಸ್ಥರ ದೂರು. ಐತಿಹಾಸಿಕ ಮಹತ್ವ ಇರುವ ಈ ಪ್ರದೇಶದಲ್ಲಿದೇಶಿಯ ಹಾಗೂ ವಿದೇಶಿ ಪ್ರವಾಸಿಗರೂ ಬರುತ್ತಾರೆ. ಆದರೆ, ಇಲ್ಲಿಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯದಂಥ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲ.ಬೂದಿಕೋಟೆಯ ಆವರಣದಲ್ಲಿರುವ ವೇಣುಗೋಪಾಲ ದೇವಾಲಯವು ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧೀನದಲ್ಲಿದೆ. ಆದರೆ, ಅಲ್ಲೂಅಭಿವೃದ್ಧಿ ಕಾರ್ಯಗಳಾಗಿಲ್ಲ.ಇತಿಹಾಸಕ್ಕೆ ಸಾಕ್ಷೀಭೂತವಾಗಿ ನಿಲ್ಲುವ ಸ್ಮಾರಕಗಳನ್ನು ಉಳಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ.

