ರೈಲ್ವೆ ಇಧಿಲಾಖೆ ಅನುಮತಿಗೆ ಕಾಧಿಯುಧಿತ್ತಿದೆ ಹುಡಾ

Contributed byprakashvkhsn@gmail.com|Vijaya Karnataka

ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಬಡಾವಣೆಗೆ ನೀರು ಒದಗಿಸಲು ರೈಲ್ವೆ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ. ಮೂರು ತಿಂಗಳಾದರೂ ಅನುಮತಿ ದೊರೆತಿಲ್ಲ. ಇದರಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರು ಕಾಯುತ್ತಿದ್ದಾರೆ. ಒಂದು ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ರೈಲ್ವೆ ಹಳಿ ಪಕ್ಕದಲ್ಲಿ ಪೈಪ್‌ಲೈನ್ ಅಳವಡಿಸಲು ಅನುಮತಿ ಅಗತ್ಯವಾಗಿದೆ. ರೈತರು ತಮ್ಮ ನಿವೇಶನಕ್ಕಾಗಿ ಒತ್ತಾಯಿಸುತ್ತಿದ್ದಾರೆ.

why the railway permission for registration is delayed

ರೈಲ್ವೆ ಇಧಿಲಾಖೆ ಅನುಮತಿಗೆ ಕಾಧಿಯುಧಿತ್ತಿದೆ ಹುಡಾ

- ನೀರು ಪೂರೈಕೆ ವ್ಯಧಿವಧಿಸ್ಥೆಧಿಯಾಧಿದರೆ ನಿವೇಶನ ಹಂಚಿಧಿಕೆ ಸುಧಿಗಧಿಮ| ವಿಳಂಬಕ್ಕೆ ಆಕಾಂಕ್ಷಿಗಳ ಆಕ್ರೋಶ

ಪ್ರಕಾಶ್ ಜಿ. ಹಾಸನ

ಘ್ಕಿP್ಟakash.ಜಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಹೊಸದಾಗಿ ನಿರ್ಮಿಸುತ್ತಿರುವ ಬಡಾವಣೆಗೆ ನೀರು ಪೂರೈಸಲು ರೈಲ್ವೆ ಮಾರ್ಗದ ಪಕ್ಕದಲ್ಲೇ ಪೈಪ್ ಅಳವಡಿಸಧಿಬೇಧಿಕಿದೆ. ಹೀಧಿಗಾಗಿ ಅನುಮತಿ ನೀಡುವಂತೆ ರೈಲ್ವೆ ಇಧಿಲಾಧಿಖೆಗೆ ಕೋರಧಿಲಾಧಿಗಿದೆ. ಮೂರು ತಿಂಗಧಿಳಾಧಿದರೂ ಅಧಿವಧಿರಿಂದ ಅಧಿನುಧಿಮತಿ ಬಂದಿಧಿಲ್ಲಧಿವಾಧಿದ್ದಧಿರಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳು ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಧಿಶ್ನಿಧಿಸುಧಿತ್ತಿಧಿದ್ದಾರೆ.

ಪ್ರಾಧಿಕಾರ ಬೂವನಹಳ್ಳಿ, ಕೆಂಚಟ್ಟಹಳ್ಳಿ, ಗೇಕರಹಳ್ಳಿ, ಸಮುದ್ರವಳ್ಳಿ ಗ್ರಾಮಗಳ ವಿವಿಧ ಸರ್ವೆ ನಂಬರ್ ಗೆ ಒಟ್ಟು 1145.32 ಎಕರೆ ಜಮೀನಿನಲ್ಲಿಭೂ ಮಾಲೀಕರು ಮತ್ತು ಪ್ರಾಧಿಕಾರದ ಸಹಭಾಗಿತ್ವದಲ್ಲಿ(ಶೇ. 50:50) ಉದ್ದೇಶಿತ ಬಡಾವಣೆ ನಿರ್ಮಾಣಕ್ಕೆ 2021ರಿಂದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಂಡು ಮುನ್ನಡೆದಿದೆ.

ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿಟೆಂಡರ್ ಕರೆದು ಈಗಾಗಲೇ ರಸ್ತೆ, ಚರಂಡಿ, ವಿದ್ಯುತ್ ಕಂಬಗಳ ಅಳವಡಿಕೆ ಮತ್ತಿತರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ನೀರಿನ ಸೌಲಭ್ಯ ಕಲ್ಪಿಸದೆ ನಿವೇಶನ ವಿತರಣೆ ಮಾಡಿದರೆ ಮನೆ ಕಟ್ಟುವುದಾದರೂ ಹೇಗೆ ಎಂಬ ಕಾರಣದಿಂದ ಹೇಮಾವತಿ ನದಿ ನೀರು ಪೂರೈಸಲು ಮುಂದಾಗಿದೆ.

‘ಧಿ‘ಹೊಸಕೊಪ್ಪಲು ಕೈಗಾರಿಕಾ ಪ್ರದೇಶದ ಟ್ಯಾಂಕ್ ನಿಂದ ಎಸ್ ಬಿಜಿ ಬಡಾವಣೆಗೆ ಪೈಪ್ ಲೈನ್ ಅಳವಡಿಸಬೇಕಿದ್ದು, ರೈಲ್ವೆ ಹಳಿ ಪಕ್ಕದಲ್ಲೇ ಹಾದುಹೋಗಬೇಕಿರುವ ಹಿನ್ನೆಲೆಯಲ್ಲಿರೈಲ್ವೆ ಇಲಾಖೆ ನಿಯಮಾನುಸಾರ ರೈಲ್ವೆ ಮಿಲ್ಸೆನಿಯನ್ಸ್ ಕಲೆಕ್ಷನ್ ಶುಲ್ಕ 5,57,263 ರೂ. ಹಾಗೂ 11,030, ಪ್ಲಾನ್ ಸರ್ವೆ ಶುಲ್ಕ 9626 ರೂ.ಗಳನ್ನು 2026ರ ಜ. 7ರಂದು ಪಾವತಿಸಧಿಲಾಧಿಗಿದೆ. ನಿವೃತ್ತ ರೈಲ್ವೆ ಎಂಜಿನಿಯರ್ ಅಧಿವಧಿರನ್ನು ಅನುಮತಿ ಪ್ರಕ್ರಿಯೆಗಾಗಿ ನಿಯೋಜಿಸಧಿಲಾಧಿಗಿಧಿದೆ’’ ಎನ್ನುತ್ತಾರೆ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ.

ಅರ್ಜಿದಾರರಿಂದ 60 ಕೋಟಿ

ಪ್ರಾಧಿಕಾರ ಬಡಾವಣೆ ಅಭಿವೃದ್ಧಿಗೆ ಮುನ್ನವೇ ಒಟ್ಟು 15ರಿಂದ 16 ಸಾವಿರ ನಿವೇಶನಕ್ಕಾಗಿ 2021ರಲ್ಲಿಡಿಮ್ಯಾಂಡ್ ಸರ್ವೆ ಎಂದು ಅರ್ಜಿ ಆಹ್ವಾನಿಸಿದಾಗ 57 ಸಾವಿರ ಅರ್ಜಿಯೊಂದಿಗೆ ಮುಂಗಡವಾಗಿ 60 ಕೋಟಿ ರೂ.ಗಳನ್ನು ಅರ್ಜಿದಾರರು ಪಾವತಿಸಿದ್ದಾಧಿರೆ. 2022ರಲ್ಲಿಅರ್ಜಿ ಸಲ್ಲಿಸಿದವರು ನಿವೇಶನದ ಮೌಲ್ಯಕ್ಕೆ ಅನುಗುಣವಾಗಿ ಶೇ. 3ರಿಂದ 10ರಷ್ಟು ಹಣವನ್ನು ಪಾವತಿಸಿದಲ್ಲಿಮಾತ್ರ ಲಾಟರಿ ಆಯ್ಕೆಗೆ ಪರಿಗಣಿಸಲಾಗುವುದು ಎಂದು ಪ್ರಾಧಿಕಾರ ಷರತ್ತು ವಿಧಿಸಿದ ಬಳಿಕ 28 ಸಾವಿರ ನಿವೇಶನ ಆಕಾಂಕ್ಷಿಗಳು ಹಣ ಪಾವತಿಸಿ ನಿವೇಶನಕ್ಕಾಗಿ ಕಾಯ್ದು ಕುಳಿತಿದ್ದಾರೆ.

ಪ್ರಾಧಿಕಾರದ ವತಿಯಿಂದ 15*24 ಅಳತೆಯ ನಿವೇಶನಕ್ಕೆ ಅಂದಾಜು ಮೌಲ್ಯ 44.93 ಲಕ್ಷಕ್ಕೆ ಅನುಗುಣವಾಗಿ ಪ್ರವರ್ಗ ಬಿ,ಸಿ ಹಾಗೂ ಸೇವೆ ಅವಧಿಯಲ್ಲಿಮೃತಪಟ್ಟ ರಕ್ಷಣಾ ಸಿಬ್ಬಂದಿಯ ಪತಿ, ಪತ್ನಿ ಮತ್ತು ಸ್ಥಳಾಂತರಿತ ರಕ್ಷಣಾ ಸಿಬ್ಬಂದಿ ಶೇ.3ರಷ್ಟು ಅಂದರೆ 1.34 ಲಕ್ಷ ಹಾಗೂ ಪ್ರವರ್ಗ ಎ,ಡಿ,ಇ,ಎಫ್ ,ಐ,ಎಚ್ ,ಐ ಶೇ. 10ರಷ್ಟು ಎಂದರೆ 4.49 ಲಕ್ಷ ರೂ. ಪಾವತಿಸಬೇಕು ಎಂಬ ಸೂಚನೆ ಅನ್ವಯ ನಾನಾ ಅಳತೆಯ ನಿವೇಶನಕ್ಕೆ 2.69 ಲಕ್ಷ, 1.68, 1.34 ಲಕ್ಷ, 67,403 ಹೀಗೆ ಮುಂಗಡ ಹಣದೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ಕೋಟ್ಯಂತರ ರೂ.ಪಡೆದಿರುವ ಪ್ರಾಧಿಕಾರ ನಿವೇಶನ ವಿತರಣೆ ಇಂದು, ನಾಳೆ ಎನ್ನುತ್ತಲೇ ಇದೆ ಎಂಬ ಅಸಮಾಧಾನವನ್ನು ವ್ಯಧಿಕ್ತಧಿಪಧಿಡಿಧಿಸುಧಿತ್ತಿಧಿರುವ ಜಧಿನರಲ್ಲಿಕೆಲವರು ಕಚೇರಿಗೆ ಬಂದು ಆಕ್ರೋಶ ಹೊರ ಹಾಕಿದ್ದಾರೆ.

ಲಾಟರಿ ಪ್ರಕ್ರಿಯೆ?

ಅರ್ಜಿ ಶುಲ್ಕದೊಂದಿಗೆ ಶೇ. 10ರಷ್ಟು ಮುಂಗಡ ಪಾವತಿಸಿದವರಿಗೆ ಮಾತ್ರ ಲಾಟರಿ ಪ್ರಕ್ರಿಯೆ ನಡೆಸಿ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಸರಕಾರದ ಇ ಗೌರ್ನೆನ್ಸ್ ನಿವೇಶನದಾರರನ್ನು ಆಯ್ಕೆ ಮಾಡಲು ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದು, ಅದು ಯಾವ ರೀತಿ ಆಯ್ಕೆ ಪ್ರಕ್ರಿಯೆ ನಡೆಸುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ಪ್ರಾಧಿಕಾರದ ಅಧಿಕಾರಿಗಳು, ಆಯುಕ್ತರಿಗೆ ತೋರಿಸಿ ಅಂತಿಮಗೊಳಿಸಿದ ನಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ನಿವೇಶನಕ್ಕೆ ರೈತರ ಪಟ್ಟು

ಶೇ.50ರ ಅನುಪಾತದಲ್ಲಿನಿವೇಶನ ದೊರೆಯುತ್ತದೆ ಎಂದು ಜಮೀನು ಕಳೆದುಕೊಂಡಿರುವ ರೈತರು ಮಕ್ಕಳ ವ್ಯಾಸಂಗ, ಮದುವೆ ಮತ್ತಿತರ ಶುಭಕಾರ್ಯಕ್ಕೆ ಸಾಲ ಮಾಡಿಕೊಂಡು ಕುಳಿತಿದ್ದಾರೆ. ನಮ್ಮ ನಿವೇಶನ ಕೊಡಿ ಮಾರಿಯಾದರೂ ಸಾಲ ತೀರಿಸಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

--ಕೋಧಿಟ್ ---

ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ರೈಲ್ವೆಗೆ ಹಣ ಪಾವತಿಸಿ ಅನುಮತಿಗೆ ಕಾಯುಧಿತ್ತಿದ್ದೇವೆ. ನಿವೇಶನ ಹಂಚಿಕೆ ಸಂಬಂಧ ಸಾಫ್ಟ್ ವೇರ್ ಅಭಿವೃದ್ಧಿಯಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಬೇಕು, ಸಾರ್ವಜನಿಕವಾಗಿ ಲಾಟರಿ ಪ್ರಕ್ರಿಯೆ ತೋರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಜಮೀನು ಕಳೆದುಕೊಂಡವರು, ನಿವೇಶನ ನಿರೀಕ್ಷೆಯಲ್ಲಿಇರುವವರು ಎಲ್ಲರ ಸಮಸ್ಯೆಯ ಅರಿವಿದೆ.

ಧಿ- ಪಟೇಲ್ ಶಿವಪ್ಪ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಹಾಸನ.