ಅರಾಭಿಕೊತ್ತನೂರು ಶಾಲೆಯಲ್ಲಿಶಾರದಾಪೂಜೆ

Contributed byragh.pkn@gmail.com|Vijaya Karnataka

ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾರದಾಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಿರಿಯ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯಲ್ಲಿ ಹಬ್ಬದೂಟ ಏರ್ಪಡಿಸಲಾಗಿತ್ತು.

celebration of sharada puja at arabikottanur school

ಮಕ್ಕಳಿಗೆ ಬೀಳ್ಕೊಡುಗೆ

ವಿಕ ಸುದ್ದಿಲೋಕ ಕೋಲಾರ

ಹೆತ್ತ ತಾಯಿ, ತಂದೆ, ಕಲಿಸಿದ ಗುರುವಿನ ಆಶಯಗಳನ್ನು ಈಡೇರಿಸುವ ಸಂಕಲ್ಪದೊಂದಿಗೆ ನೀವು ಬೆಳಗಿಸಿರುವ ಜ್ಯೋತಿ ನಿಮ್ಮ ಬದುಕಿನ ಅಂಧಕಾರ ಹೋಗಲಾಡಿಸಿ ನಿಮ್ಮಲ್ಲಿಶ್ರದ್ಧೆ ಓದಲು ಏಕಾಗ್ರತೆ ಮೂಡಿಸಲಿ, ನಿಮ್ಮ ಸಾಧನೆಗೆ ದಾರಿ ತೋರಲಿ ಎಂದು ಅರಾಭಿಕೊತ್ತನೂರು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ಕರೆ ನೀಡಿದರು.

ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಶಾರದಾ ಪೂಜೆ ಹಾಗೂ ದೀಪಗಳನ್ನು ಬೆಳಗುವ ಮೂಲಕ ಬದುಕಿನ ಕತ್ತಲು ಕಳೆದು ಬೆಳಕಿನಡೆಗೆ ಸಾಗುವ ದೀಪಗಳ ಬೆಳೆಗುವಿಕೆ ಕಾರ್ಯಕ್ರಮದಲ್ಲಿಪಾಲ್ಗೊಂಡು ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.18ರಿಂದ ಆರಂಭಗೊಳ್ಳುತ್ತಿದೆ. ಹಬ್ಬ, ಹರಿದಿನಗಳ ಆಸೆ ಬಿಡಿ, ಬದ್ದತೆಯಿಂದ ಓದಿ, ಶಿಕ್ಷಕರು ಹಬ್ಬ ಬಿಟ್ಟು ನಿಮಗಾಗಿ ಪ್ರತಿದಿನ ದೈನಂದಿನ ಶಾಲಾ ಸಮಯದ ಜತೆಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು, ನಿಮ್ಮನ್ನು ತೇರ್ಗಡೆಯ ಗಡಿ ದಾಟಿಸಿ, ನಿಮ್ಮ ಬದುಕು ಹಸನಾಗಲು ಶ್ರಮಿಸುತ್ತಿದ್ದಾರೆ, ಅವರ ಆಶಯಗಳಿಗೆ ಗೌರವ ನೀಡಿ ಎಂದರು.

ಹಿರಿಯ ಶಿಕ್ಷಕಿ ಸಿದ್ದೇಶ್ವರಿ ಮಾತನಾಡಿ, ನಿಮ್ಮ ತುಂಟಾಟ ನೋಡಿದ್ದೇವೆ, ನೀವು ತಪ್ಪು ಮಾಡಿದಾಗ ನಮ್ಮ ಮಕ್ಕಳನ್ನು ಸರಿದಾರಿಗೆ ತರುವ ಕೆಲಸ ಶಿಕ್ಷಕರು ಮಾಡಿದ್ದಾರೆ, ಪರೀಕ್ಷೆ 8 ದಿನ ಇದೆ, ಚೆನ್ನಾಗಿ ಓದಿ ಶಾಲೆಗೆ ಕೀರ್ತಿ ತನ್ನಿ ಎಂದರು.

ಹಿರಿಯ ಶಿಕ್ಷಕ ಎಂ.ಆರ್ .ಗೋಪಾಲಕೃಷ್ಣ ಮಾತನಾಡಿ, ನೀವು ಇರುವ 14 ದಿನಗಳನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿ ನಿಮಿಷವೂ ವ್ಯರ್ಥವಾಗದಂತೆ ಓದಿದರೆ ಈಗಲೂ ಉತ್ತಮ ಸಾಧನೆ ಮಾಡಲು ಅಡ್ಡಿಯಿಲ್ಲಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಲೀಲಾ, ಶಾಲೆಯಿಂದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿಪ್ರತಿನಿಧಿಸಿ ಶಾಲೆಗೆ ಕೀರ್ತಿ ತಂದ ನಾಲ್ವರು ವಿದ್ಯಾರ್ಥಿಗಳಿಗೆ ಬಹುಮಾನ, ನೆನಪಿನ ಕಾಣಿಕೆ ವಿತರಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಶುಭ ಕೋರಿದರು.

10ನೇ ತರಗತಿ ವಿದ್ಯಾರ್ಥಿಗಳಾದ ನಟರಾಜ, ದೀಪ್ತಿ, ಮೌನಿಕಾ, ಅಂಜನಾದ್ರಿ ಮತ್ತಿತರರು ಶಾಲೆಯಲ್ಲಿಕಳೆದ ತಮ್ಮ ಮೂರು ವರ್ಷದ ಅನುಭವ ಹಂಚಿಕೊಂಡು ಶಿಕ್ಷಕರಿಗೆ ಧನ್ಯವಾದ ಸಲ್ಲಿಸಿದರು.

ಗ್ರಾ.ಪಂನಿಂದ ಬಹುಮಾನ: ಇದೇ ಸಂದರ್ಭದಲ್ಲಿಇಡೀ ವರ್ಷ ವಿವಿಧ ಸ್ಪರ್ಧೆಗಳಲ್ಲಿವಿಜೇತರಾದ ಮಕ್ಕಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಲಿನಿ ಬಹುಮಾನಗಳ ಕೊಡುಗೆಯನ್ನು ಪಂಚಾಯಿತಿ ವತಿಯಿಂದ ನೀಡಿ ಸಹಕಾರ ನೀಡಿದರು. ಶಾಲೆಯ ಎಲ್ಲಾಮಕ್ಕಳಿಗೆ ಹಬ್ಬದೂಟ ಬಡಿಸಿ ಶಾರದಾ ಪೂಜೆ ಸಂಭ್ರಮಕ್ಕೆ ಶಿಕ್ಷಕರು ಶ್ರಮಿಸಿದರು.

ಈ ಸಂದರ್ಭದಲ್ಲಿಎಸ್ ಡಿಎಂಸಿ ನಿಕಟಪೂರ್ವ ಅಧ್ಯಕ್ಷ ಎ.ಮಹೇಂದ್ರ, ಶಿಕ್ಷಕರಾದ ಸುಗುಣಾ, ಭವಾನಿ, ಶ್ವೇತಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ, ನಿವೃತ್ತ ಶಿಕ್ಷಕಿ ಫರೀದಾ, ಸುಗುಣ ಬಿಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ಅರ್ಬಾಜ್ , ಶಿವರಾಜ್ , ಚಂದನ, ಧರ್ಮಯೋಗಿ, ಶಾಲೆಯ ಅಡುಗೆ ಸಿಬ್ಬಂದಿ ನೇತ್ರಾವತಿ, ಜಮುನಾ, ಪವಿತ್ರ ಮತ್ತಿತರರು ಉಪಸ್ಥಿತರಿದ್ದರು.

=

ಫೋಟೋಕ್ಯಾಪ್ಷನ್ : ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸರಕಾರಿ ಪ್ರೌಢಶಾಲೆಯಲ್ಲಿಶಾರದಾಪೂಜೆ ನಡೆಸಿ, ಮಕ್ಕಳಿಗೆ ಪರೀಕ್ಷಾ ಪ್ರವೇಶಪತ್ರ ವಿತರಿಸಲಾಯಿತು. (9ಕೆಪಿಎಚ್ 2)