ಪ್ರಧಾನ ಮಂತ್ರಿ ಶಿಶುಕ್ಷು ಮೇಳ ಕಾರ್ಯಕ್ರಮ| ಜಿಲ್ಲಾಕೌಶಲಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಸಲಹೆ
ವಿಕ ಸುದ್ದಿಲೋಕ ಮುಳಬಾಗಲು
ಯುವಕರಿಗೆ ಕೌಶಲ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಪ್ರಧಾನ ಮಂತ್ರಿ ನ್ಯಾಷÜನಲ್ ಅಪ್ರೆಂಟಿಸ್ ಶಿಪ್ ಮೇಳ ಎಂಬ ಮಹತ್ವದ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕೆಂದು ಜಿಲ್ಲಾಕೌಶಲಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಹೇಳಿದರು.
ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಏರ್ಪಡಿಸಿದ್ದ ಪ್ರಧಾನ ಮಂತ್ರಿ ಶಿಶುಕ್ಷು ಮೇಳ ಉದ್ಘಾಟಿಸಿ ಮಾತನಾಡಿದರು. ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿವ್ಯಾಸಂಗವನ್ನು ಮಾಡುತ್ತಿರುವ ಯುವಕರಿಗಾಗಿ ಭಾರತ ಸರಕಾರದ ವತಿಯಿಂದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಕುರಿತು ಆಯಾ ತಾಲೂಕು ಮಟ್ಟದಲ್ಲಿಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನವನ್ನು ಪಡೆಯಲು ಮುಂದಾಗಬೇಕೆಂದು ಸಲಹೆ ನೀಡಿದರು.
ಮುಳಬಾಗಿಲಿನ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಎಂ.ಶಿವಾನಂದ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಕೇವಲ ಪುಸ್ತಕ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಉದ್ಯೋಗ ಪಡೆಯಲು ಪ್ರಾಯೋಗಿಕ ಅನುಭವ ಮತ್ತು ಕೌಶಲಗಳು ಅತ್ಯಂತ ಮುಖ್ಯ. ಈ ಅಗತ್ಯವನ್ನು ಪೂರೈಸಲು ಅಪ್ರೆಂಟಿಸ್ ಶಿಪ್ ಕಾರ್ಯಕ್ರಮಗಳು ಬಹಳ ಸಹಾಯಕವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ತರಬೇತುದಾರ ಮಾರ್ಗದರ್ಶನದಲ್ಲಿತಮ್ಮ ಮುಂದಿನ ನಿರ್ಣಯವನ್ನು ತೆಗೆದುಕೊಂಡರೆ ಉತ್ತಮವಾದ ಸ್ಥಾನಮಾನವನ್ನು ಹೊಂದಲು ಅವಕಾಶ ಇರುತ್ತದೆ ಎಂದರು.
ಪ್ರಧಾನ ಮಂತ್ರಿ ಅಪ್ರೆಂಟಿಸ್ ಶಿಪ್ ಮೇಳದ ಮೂಲಕ ವಿದ್ಯಾರ್ಥಿಗಳು ಮತ್ತು ಉದ್ಯೋಗ ಹುಡುಕುತ್ತಿರುವ ಯುವಕರು ನಾನಾ ಕಂಪನಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಬಹುದು. ಇಲ್ಲಿಅವರು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿತರಬೇತಿ ಪಡೆಯುವ ಅವಕಾಶವನ್ನು ಪಡೆಯುತ್ತಾರೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಎಂದರೆ ಕಲಿಯುತ್ತಲೇ ಸಂಪಾದಿಸಿ ಎಂಬ ವ್ಯವಸ್ಥೆ. ಅಂದರೆ ತರಬೇತಿ ಪಡೆಯುವಾಗಲೇ ವಿದ್ಯಾರ್ಥಿಗಳಿಗೆ ಮಾಸಿಕ ಭತ್ಯೆ ದೊರೆಯುತ್ತದೆ. ಇದರಿಂದ ಯುವಕರು ತಮ್ಮ ಕೌಶಲವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಆರ್ಥಿಕವಾಗಿ ಸಹಾಯವನ್ನು ಕೂಡ ಪಡೆಯುತ್ತಾರೆ ಎಂದರು.
ಈ ಮೇಳದ ಮೂಲಕ ಯುವಕರಿಗೆ ಉತ್ತಮ ಭವಿಷ್ಯ ನಿರ್ಮಿಸಲು ದಾರಿ ಸಿಗುತ್ತದೆ. ಜತೆಗೆ ದೇಶದ ಕೈಗಾರಿಕೆಗಳಿಗೆ ಕೌಶಲ ಹೊಂದಿದ ಕಾರ್ಮಿಕರು ದೊರೆಯುತ್ತಾರೆ. ಇದು ನಮ್ಮ ದೇಶದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ. ಯುವಕರು ಇಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ಕೌಶಲವನ್ನು ಅಭಿವೃದ್ಧಿಪಡಿಸಿ ಉತ್ತಮ ಉದ್ಯೋಗವನ್ನು ಪಡೆಯಬೇಕು ಎಂದರು.
ತಾಲೂಕಿನಲ್ಲಿ250 ಮಂದಿ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಶಿಶುಕ್ಷು ಮೇಳಕ್ಕೆ ಹೆಸರನ್ನು ನೊಂದಾಯಿಸಿಕೊಂಡಿದ್ದರು. ವಿವಿಧ ಕಂಪನಿಯ 6 ಮಂದಿ ಅಧಿಕಾರಿಗಳು ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.
ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯ ತರಬೇತಿ ಅಧಿಕಾರಿ ಕೃಷ್ಣೇಗೌಡ, ಕಿರಿಯ ತರಬೇತಿದಾರರಾದ ಕೆ.ಟಿ.ನಾರಾಯಣಪ್ಪ, ಸುಕನ್ಯಾ, ಎನ್ .ಕೃಷ್ಣಪ್ಪ, ಕೆ.ಎನ್ .ತಿಪ್ಪಯ್ಯ, ಬೈರೇಗೌಡ, ಮಧುಸೂದನ್ , ಪ್ರದೀಪ್ , ಧನಂಜಯ, ಲಕ್ಷ್ಮೇ, ಚೈತ್ರ, ಆಶಾ, ರಘುನಾಥ್ , ಎಂ.ಐ.ಟಿ.ಸಿ ಪ್ರಾಂಶುಪಾಲ ಗೋವಿಂದಪ್ಪ, ಶತಶೃಂಗ ಪ್ರಾಂಶುಪಾಲೆ ನಾಗವೇಣಿ ಹಾಜರಿದ್ದರು.
10ಎಂಬಿಎಲ್ ಫೋಟೊ 1 ಮುಳಬಾಗಲು ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಏರ್ಪಡಿಸಿದ್ದ ಪ್ರಧಾನ ಮಂತ್ರಿ ಶಿಶುಕ್ಷು ಮೇಳ ಕಾರ್ಯಕ್ರಮವನ್ನು ಜಿಲ್ಲಾಕೌಶಲಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಉದ್ಘಾಟಿಸಿದರು.

