ಕುಂದಾಪುರ: ಬೆಂಗಳೂರಿನ ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಮಾ.12 ಮತ್ತು 13ರಂದು ಪೀಪಲ್ , ಪ್ಲಾತ್ರ್ಯನೆಟ್ ಆ್ಯಂಡ್ ಪ್ರಾಪಿಟ್ ದಿ ನ್ಯೂ ಪಾರಾಡಿಗ್ಮಾ ಆಫ್ ಸಸ್ಟನೇಬಲ್ ಕಾಮರ್ಸ್ ವಿಷಯದ ಕುರಿತು ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿಇಲ್ಲಿನ ಫೋಥ್ಫೋರ್ ಕಸ್ ಸಂಸ್ಥೆಯ ಸಂಸ್ಥಾಪಕ, ನಿರ್ದೇಶಕ ವಿ.ಗೌತಮ್ ನಾವಡ ಮಾ.12ರಂದು ಪ್ರಾಪಿಟ್ ವಿದ್ ಪರ್ಪಸ್ ಸಸ್ಟನೇಬಲ್ ಗ್ರೋಥ್ ಇನ್ ಬ್ಯುಸಿನೆಸ್ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಅವರು 2012ರಿಂದ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿಕಾರ್ಯನಿರ್ವಹಿಸುತ್ತಿದ್ದು, 2015ರಲ್ಲಿಸ್ಥಾಪಿಸಿದ ಫೋಥ್ಫೋರ್ ಕಸ್ ಸಂಸ್ಥೆಯ ಮೂಲಕ ಭಾರತ ಸೇರಿದಂತೆ 8ಕ್ಕೂ ಹೆಚ್ಚು ದೇಶಗಳ 350ಕ್ಕೂ ಹೆಚ್ಚು ಸಂಸ್ಥೆಗಳಿಗೆ ವೆಬ್ ಮತ್ತು ಡಿಜಿಟಲ್ ಪರಿಹಾರಗಳನ್ನು ಒದಗಿಸಿದ್ದಾರೆ.
ಪೋಟೊ//11ಕೆ-ಜಿಟಿಎಂ//. ಗೌತಮ್ ನಾವಡ.

