ಸಿಎಸ್ ಆರ್ ಅನುದಾನ ಬಳಸಿಕೊಂಡು ಶಾಲೆ ನಿರ್ಮಾಣ

Contributed bysathyabudikote@gmail.com|Vijaya Karnataka

ಬಂಗಾರಪೇಟೆಯಲ್ಲಿ ಎನ್‌ಟಿಜಿಎಂ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು. ಟಾಟಾ ಕಂಪನಿಯ ಸಿಎಸ್‌ಆರ್‌ ಅನುದಾನ ಮತ್ತು ಸರ್ಕಾರದ ಅನುದಾನ ಸೇರಿ 3.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಮುಂದಿನ 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ.

new school construction funded by csr remarks by elected legislator

ವಿಕ ಸುದ್ದಿಲೋಕ ಬಂಗಾರಪೇಟೆ

ಸರಕಾರ ಹಾಗೂ ಟಾಟಾ ಕಂಪನಿಯ ಸಿಎಸ್ ಆರ್ ಅನುದಾನವನ್ನು ಬಳಸಿಕೊಂಡು 3.50 ಕೋಟಿ ವೆಚ್ಚದಲ್ಲಿಎನ್ ಟಿಜಿಎಂ ಶಾಲೆಯ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತದೆ ಎಂದು ಶಾಸಕ ಎಸ್ .ಎನ್ .ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಎನ್ ಟಿಜಿಎಂ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಇಷ್ಟು ವರ್ಷಗಳು ನಾವು ಸರಕಾರಿ ಜಾಗದಲ್ಲಿಸರಕಾರಿ ಹಣದಲ್ಲೇ ಶಾಲಾ ಕಾಲೇಜುಗಳ ಕಟ್ಟಡಗಳನ್ನು ನಿರ್ಮಿಸುತ್ತಿದ್ದೆವು. ಆದರೆ ಇವತ್ತು ದಾನಿಗಳು ನೀಡಿರುವ ಜಾಗದಲ್ಲಿಖಾಸಗಿ ಕಂಪನಿಯ ಆರ್ಥಿಕ ನೆರವಿನೊಂದಿಗೆ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸುತ್ತಿರುವುದು ಸಂತಸ ತಂದಿದೆ ಎಂದರು.

ಪಟ್ಟಣದ ಎಸ್ ವಿಆರ್ ಮಣಿ ಕುಟುಂಬದವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಶಾಲೆ ನಿರ್ಮಿಸಲು ಜಾಗವನ್ನು ದಾನ ಮಾಡಿ, ಅವರೇ ಶಾಲೆ ಕಟ್ಟಿಸಿಕೊಟ್ಟಿದ್ದರು. ಅದು ಬಹಳಷ್ಟು ವರ್ಷಗಳ ಕಾಲ ಎಸ್ ವಿಆರ್ ಶಾಲೆ ಅಂತಲೇ ಮುಂದುವರಿಯುತ್ತಿತ್ತು. ಕ್ರಮೇಣವಾಗಿ ಅದನ್ನು ಎನ್ ಟಿಜಿಎಂ ಶಾಲೆ ಅಂತ ಹೇಳಿ ನಾವು ಬದಲಾಯಿಸಿಕೊಂಡು ಸರಕಾರದಿಂದ ಶಾಲೆ ನಡೆಸುತ್ತಾ ಬರುತ್ತಿದ್ದೆವು. ಶಾಲಾ ಕಟ್ಟಡ ಬಹಳ ಶಿಥಿಲವಾಗಿದ್ದರಿಂದ ಹೆಚ್ಚು ಮಳೆ ಬಿದ್ದ ಸಮಯದಲ್ಲಿಕಟ್ಟಡದ ಒಂದು ಭಾಗ ಕುಸಿದಿತ್ತು. ಆದ್ದರಿಂದ ಮಕ್ಕಳನ್ನು ಹಾಗೂ ಶಾಲೆಯನ್ನು ಸ್ಥಳಾಂತರ ಮಾಡಲಾಗಿತ್ತು.

ದಾನಿಗಳು ಮೀಸಲಿಟ್ಟ ಜಾಗದಲ್ಲಿಎನ್ ಟಿಜಿಎಂ ಶಾಲೆಯ ಕಟ್ಟಡವನ್ನು ನಿರ್ಮಾಣ ಮಾಡಬೇಕು ಎನ್ನುವುದು ನಮ್ಮೆಲ್ಲರ ಕನಸು ಮತ್ತು ಆಶಯ ಆಗಿತ್ತು. ಈ ನಿಟ್ಟಿನಲ್ಲಿಟಾಟಾ ಕಂಪನಿಯ 2.50 ಕೋಟಿ ಸಿಎಸ್ ಆರ್ ಅನುದಾನ ಬಳಸಿಕೊಂಡು ಸರಕಾರದ 1 ಕೋಟಿಯೊಂದಿಗೆ ಒಟ್ಟು 3.50 ಕೋಟಿ ವೆಚ್ಚದಲ್ಲಿಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದ್ದು, ಮುಂದಿನ 8 ತಿಂಗಳಲ್ಲಿಕಾಮಗಾರಿ ಪೂರ್ಣಗೊಳಸಲಾಗುತ್ತದೆ ಎಂದರು.

ಈ ವೇಳೆ ಟಾಟಾ ಕಂಪನಿಯ ಸಂತೋಷ್ , ನಿಹಾರಿಕಾ, ಬಿಇಒ ಶಶಿಕಲಾ, ಶ್ರೀಲತಾ, ಎಸ್ .ವಿ.ನಾರಾಯಣಸ್ವಾಮಿ ಆಂಜನೇಯಗೌಡ, ಮುನಿನಾರಾಯಣಪ್ಪ, ಕೆ.ಜಿ.ಶ್ರೀನಿವಾಸ್ ಮುಂತಾದವರು ಹಾಜರಿದ್ದರು.

9 ಬಂಗಾರಪೇಟೆ: ಪಟ್ಟಣದಲ್ಲಿಎನ್ ಟಿಜಿಎಂ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಶಾಸಕ ಎಸ್ .ಎನ್ .ನಾರಾಯಣಸ್ವಾಮಿ ಮಾತನಾಡಿದರು.