ದೇಶದ ಅಭಿವೃದ್ಧಿಗೆ ಜನಗಣತಿ ಅಡಿಪಾಯ

Contributed byBASAVARAJU KG|Vijaya Karnataka

ದೇಶದ ಅಭಿವೃದ್ಧಿಗೆ ಜನಗಣತಿ ಅತ್ಯಂತ ಪ್ರಮುಖವಾಗಿದೆ. ಸುಮಾರು 14 ವರ್ಷಗಳ ನಂತರ ನಡೆಯಲಿರುವ ಈ ಗಣತಿಯು ವಿಕಸಿತ ಭಾರತದ ಕನಸನ್ನು ನನಸು ಮಾಡಲಿದೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಅನುದಾನವು ಜನಸಂಖ್ಯೆಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಬಾರಿ ಡಿಜಿಟಲ್ ಜನಗಣತಿ ನಡೆಯಲಿದ್ದು, ಸ್ಮಾರ್ಟ್‌ಫೋನ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಏಪ್ರಿಲ್ 1 ರಿಂದ 15 ರವರೆಗೆ ಸಾರ್ವಜನಿಕರು ಆನ್‌ಲೈನ್ ಮೂಲಕ ಸ್ವಯಂ ಮಾಹಿತಿ ದಾಖಲಿಸಬಹುದು. ಏಪ್ರಿಲ್ 16 ರಿಂದ ಮೇ 15 ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ವಿವರ ಸಂಗ್ರಹಿಸಲಿದ್ದಾರೆ.

census the foundation for making india prosperous by 2047
ದೇಶದ ಅಭಿವೃದ್ಧಿಗೆ ಜನಗಣತಿ ಅಡಿಪಾಯ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

ದಾವಣಗೆರೆ: ಸುಮಾರು 14 ವರ್ಷಗಳ ಬಳಿಕ ದೇಶದಲ್ಲಿ ನಡೆಯಲಿರುವ ಜನಗಣತಿಯು 'ವಿಕಸಿತ ಭಾರತ-2047' ಕನಸನ್ನು ನನಸು ಮಾಡಲು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು. ದಾವಣಗೆರೆಯಲ್ಲಿ ನಡೆದ ಮೂರು ದಿನಗಳ ಜನಗಣತಿ ಕ್ಷೇತ್ರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಅನುದಾನವು ಜನಸಂಖ್ಯೆಯ ಆಧಾರದ ಮೇಲೆ ನಿರ್ಧರಿತವಾಗುವುದರಿಂದ ನಿಖರವಾದ ಮಾಹಿತಿ ಸಂಗ್ರಹ ಅತ್ಯಗತ್ಯ ಎಂದರು. ಜಪಾನ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಭಾರತದಲ್ಲಿ ಯುವಶಕ್ತಿ ಹೇರಳವಾಗಿದೆ. ಈ ಯುವಜನತೆಗೆ ಪೂರಕವಾದ ಉದ್ಯೋಗ ಮತ್ತು ಯೋಜನೆಗಳನ್ನು ರೂಪಿಸಲು ಜನಗಣತಿಯ 33 ಪ್ರಶ್ನೆಗಳಿಗೆ ನಿಖರ ಉತ್ತರ ಪಡೆಯುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.
ಈ ಬಾರಿ ಜನಗಣತಿಯು ಸಂಪೂರ್ಣ ಡಿಜಿಟಲ್ ಆಗಿ ನಡೆಯಲಿದ್ದು, ಕಾಗದ ರಹಿತ ಗಣತಿಗಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಲಾಗುತ್ತದೆ. ಏಪ್ರಿಲ್ 1 ರಿಂದ 15 ರವರೆಗೆ ಸಾರ್ವಜನಿಕರು ಆನ್‌ಲೈನ್ ಮೂಲಕ ಸ್ವಯಂ ಮಾಹಿತಿ ದಾಖಲಿಸಬಹುದು. ಏಪ್ರಿಲ್ 16 ರಿಂದ ಮೇ 15 ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ 33 ಪ್ರಶ್ನೆಗಳ ಮೂಲಕ ವಿವರ ಸಂಗ್ರಹಿಸಲಿದ್ದಾರೆ. 2027ರ ಫೆಬ್ರವರಿಯಲ್ಲಿ ಗಣತಿ ಪ್ರಕ್ರಿಯೆ ಪೂರ್ಣಗೊಂಡು, ಮಾರ್ಚ್ 1 ರಂದು ಕೇಂದ್ರ ಸರ್ಕಾರ ಅಧಿಕೃತ ವರದಿ ಬಿಡುಗಡೆ ಮಾಡಲಿದೆ ಎಂದು ಮುಖ್ಯ ತರಬೇತಿದಾರ ಮರಳುಸಿದ್ದೇಶ್ವರ ವಿವರಿಸಿದರು. ಗಣತಿದಾರರು ಸ್ಮಾರ್ಟ್‌ಫೋನ್‌ ಸಿಎಂಎಂಎಸ್‌ ಪೋರ್ಟಲ್‌ ಮತ್ತು ಎಚ್‌ಎಲ್‌ಒ ಲಾಗಿನ್‌ ಬಳಸಿ ಮಾಹಿತಿ ದಾಖಲಿಸಲಿದ್ದಾರೆ. ಕಟ್ಟಡದ ಸ್ಥಿತಿ, ನಿವಾಸಿಗಳ ಸೌಲಭ್ಯಗಳು ಹಾಗೂ ಆರ್ಥಿಕ-ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಪ್ರಕ್ರಿಯೆಯಲ್ಲಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜನಗಣತಿ ನೋಡಲ್‌ ಅಧಿಕಾರಿ ವಿವೇಕ್‌, ಜಿಲ್ಲಾಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಂತೇಶ್‌ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.