ನಾಳೆ ಸಮಾವೇಶ

Contributed bymanjunathsalic@gmail.com|Vijaya Karnataka

ರಾಯಚೂರಿನಲ್ಲಿ ಮಾ.15ರಂದು ಟಿಪ್ಪು ಸುಲ್ತಾನ್‌ ಗಾರ್ಡನ್‌ನಲ್ಲಿ 'ಬಹುಜನ ದಿವಸ್‌' ಜಾಗೃತಿ ಸಮಾವೇಶ ನಡೆಯಲಿದೆ. ಮಾನ್ಯವಾರ್‌ದಾದಾ ಸಾಹೇಬ್‌ ಕಾನ್ಸಿರಾಂಜೀ ಅವರ ಜಯಂತಿ ನಿಮಿತ್ತ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ ನಾನಾ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಬಸವರಾಜ ಭಂಡಾರಿ ಈ ಮಾಹಿತಿ ನೀಡಿದರು.

bahujan divas awareness rally tomorrow

ನಾಳೆ ಸಮಾವೇಶ

ರಾಯಚೂರು: ‘‘ಮಾನ್ಯವಾರ್ ದಾದಾ ಸಾಹೇಬ್ ಕಾನ್ಸಿರಾಂಜೀ ಅವರ ಜಯಂತಿ ನಿಮಿತ್ತ ನಗರದ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿಮಾ.15ರಂದು ಬೆಳಗ್ಗೆ 10:30ಕ್ಕೆ ‘ ಬಹುಜನ ದಿವಸ್ ’ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ,’’ ಎಂದು ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಬಸವರಾಜ ಭಂಡಾರಿ ಹೇಳಿದರು. ನಗರದಲ್ಲಿಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘‘ದೇಶದಲ್ಲಿರುವ ನಾನಾ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ,’’ ಎಂದರು. ಎಂ.ಆರ್ .ಭೇರಿ, ಬುಡಪ್ಪ ಮನ್ಸಲಾಪುರ, ಜಾವೀದ್ ಖಾನ್ ಇತರರು ಇದ್ದರು.