(ಈ ಸುದ್ದಿಗೆ 200 ಸ್ಪಾನ್ಸರ್ ಕಾಪಿ ಇದೆ)
ವಿಕ ಸುದ್ದಿಲೋಕ ಚನ್ನಪಟ್ಟಣ: 1965ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ಹಾಲು ಒಕ್ಕೂಟ 60 ಕೋಟಿಗೂ ಅಧಿಕ ಲಾಭಗಳಿಸಿದ್ದು ಬಂದಂತಹ ಲಾಭಾಂಶವನ್ನು ಉತ್ಪಾದಕರು ಸೇರಿದಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಂಚಿಕೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಬಮೂಲ್ ನಿರ್ದೇಶಕ ಎಸ್ .ಲಿಂಗೇಶ್ ಕುಮಾರ್ ತಿಳಿಸಿದರು.
ಬಮೂಲ್ ಶಿಬಿರ ಕಚೇರಿಯಲ್ಲಿಕರೆಯಲಾಗಿದ್ದ ಪತ್ರಿಕಾಗೊಷ್ಠಿಯಲ್ಲಿಈ ಸಂಬಂಧ ಮಾಹಿತಿ ನೀಡಿದ ಅವರು ಕಳೆದ ಮೂರು ಬಾರಿ ನಿರ್ದೇಶಕನಾಗಿದ್ದ ನಾನು ಒಕ್ಕೂಟದಲ್ಲಿನ ಲಾಭಾಂಶವನ್ನು ಉತ್ಪಾದಕರಿಗಾಗಲಿ, ಲಾಭಗಳಿಸಲು ಶ್ರಮಿಸುವ ಸಿಬ್ಬಂದಿಗಾಗಲಿ ಹಂಚಿಕೆ ಮಾಡಿದ್ದನ್ನು ಕಂಡಿರಲಿಲ್ಲ, ನಮ್ಮ ಹೆಮ್ಮೆಯ ನಾಯಕರಾದ ಡಿ.ಕೆ. ಸುರೇಶ್
ಈ ವರ್ಷ ಬಂದ ಲಾಭಾಂಶವನ್ನೆಲ್ಲಾ ಪ್ರತಿಯೊಬ್ಬರಿಗೂ ಹಂಚಿಕೆ ಮಾಡುವ ಮೂಲಕ ಹೊಸ ಮುನ್ನುಡಿ ಬರೆದಿರುವುದಾಗಿ ತಿಳಿಸಿದರು.
ದೂರದೃಷ್ಟಿಯುಳ್ಳ ವ್ಯಕ್ತಿಗೆ ಅಧಿಕಾರ ಸಿಕ್ಕರೆ ಯಾವ ರೀತಿ ಜನಪರ ಕಾರ್ಯ ಮಾಡಬಹುದು ಎಂಬುದಕ್ಕೆ
ಸುರೇಶ್ ಸ್ಪಷ್ಟ ಉದಾಹರಣೆಯಾಗಿ ಕಾಣಿಸುತ್ತಾರೆ. ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನೂತನ ತಂತ್ರಜ್ಞಾನ ಅಳವಡಿಕೆ ಜತೆಗೆ ಸೋರಿಕೆ ತಪ್ಪಿಸಿದ ಕಾರಣ ಇಷ್ಟು ದೊಡ್ಡ ಪ್ರಮಾಣದಲ್ಲಿಲಾಭ ದೊರೆತಿದ್ದು, ಈ ಲಾಭವನ್ನು ಒಕ್ಕೂಟದ ಹಿತಕ್ಕೆ ಬಳಸಿಕೊಳ್ಳದೆ ಉತ್ಪಾದಕರ ಹಾಗೂ ಲಾಭಬರಲು ಕಾರಣೀಭೂತರಾದವರನ್ನು ಮರೆಯಬಾರದೆಂದು ಅವರಿಗೆ ಹಂಚಿಕೆ ಮಾಡಿರುವ ಡಿ.ಕೆ. ಸುರೇಶ್ ಅವರಿಗೆ ತಾಲೂಕಿನ ಜನತೆ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಚನ್ನಪಟ್ಟಣ ತಾಲೂಕು ಹಾಲು ಉತ್ಪಾದನೆಯಲ್ಲಿಪ್ರಥಮ ಸ್ಥಾನಗಳಿಸಿರುವ ಕಾರಣ ಸಹಜವಾಗಿ ಲಾಭಾಂಶ ಕೂಡ ಹೆಚ್ಚಿನ ಮೊತ್ತದಲ್ಲಿದೊರೆಯುತ್ತಿದ್ದು, ಸುಮಾರು 11.5 ಕೋಟಿಗೂ ಅಧಿಕ ಹಣ ಈ ತಿಂಗಳ ಅಂತ್ಯದಲ್ಲಿಎಲ್ಲರ ಕೈ ಸೇರಲಿದೆ ಎಂದು ಮಾಹಿತಿ ನೀಡಿದರು.
ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಹಾಗೂ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಮಾತನಾಡಿ, ಯಾವುದೇ ಒಕ್ಕೂಟ ಇದುವರೆಗೂ ಲಾಭ ಬಂದಿದೆ ಅದನ್ನು ಉತ್ಪಾದಕರಿಗೆ ಹಂಚೋಣ ವೆಂದು ಕೇಳಿದ್ದ ಉದಾಹರಣೆ ನಮ್ಮ ಮುಂದಿರಲಿಲ್ಲ. ಅಂತಹ ಸಮಯದಲ್ಲಿಪಾರದರ್ಶಕ ಆಡಳಿತದ ಜತೆಗೆ ಕ್ರೀಯಾಶೀಲರಾಗಿ ಒಕ್ಕೂಟವನ್ನು ಆರ್ಥಿಕ
ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಸುರೇಶ್ ಅವರ ಶ್ರಮವನ್ನು ನಾವೆಲ್ಲರು ಎಷ್ಟು ಹೊಗಳಿದರೂ ಸಾಲದೆಂದರು.
ಜಿಲ್ಲೆಯ ಜನರನ್ನು ಸಿಲ್ ್ಕ ಮತ್ತು ಮಿಲ್ ್ಕ ಎರಡೆ ಕೈ ಹಿಡಿದಿದ್ದು, ಇವೆರಡರ ಕಾರಣದಿಂದಾಗಿ ಜಿಲ್ಲೆಯ ಜನರ ಆರ್ಥಿಕ ಪ್ರಗತಿ ಸಾಧ್ಯವಾಗಿದ್ದು, ಸುರೇಶ್ ಅವರ ಕಾರಣದಿಂದಾಗಿ ಇಂದು ಉತ್ಪಾದಕರಿಗೆ ಹತ್ತು ಸಾವಿರದಿಂದ ಹಿಡಿದು, ಮೂರು ಲಕ್ಷದ ವರೆಗೂ ಲಾಭಾಂಶ ದೊರೆಯುತ್ತಿದ್ದು, ಇಂತಹ ಸುವರ್ಣಾವಕಾಶ ಕಲ್ಪಿಸಿದ ಡಿ.ಕೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು.
ಪತ್ರಿಕಾಗೊಷ್ಠಿಯಲ್ಲಿಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲವೇಗೌಡ, ಹಿರಿಯ ಮುಖಂಡ ವಂದಾರಗುಪ್ಪೆ ಚಂದ್ರು, ಗ್ಯಾರಂಟಿ ಸಮಿತಿ ಅಧ್ಯಕ್ಷ ರಂಗನಾಥ್ , ಸುನೀಲ್ , ನೌಕರರ ಸಂಘದ ಅಧ್ಯಕ್ಷ ಗರಕಹಳ್ಳಿ ಶಿವಕುಮಾರ್ , ಕಾರ್ಯದರ್ಶಿ ರವಿ,ಖಜಾಂಚಿ ಸುಳ್ಳೇರಿ ಕೃಷ್ಣ ಬಮೂಲ್ ಅಧಿಕಾರಿಗಳು ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಜರಿದ್ದರು.
ಬಾಕ್ಸ್ ..
ನೀರಾವರಿ ಕಾರಣ ಉತ್ಪಾದನೆ ಹೆಚ್ಚಳ...
ಚನ್ನಪಟ್ಟಣ ತಾಲೂಕು ಇಡೀ ಜಿಲ್ಲೆಗೆ ಹಾಲು ಉತ್ಪಾದನೆಯಲ್ಲಿಮೊದಲ ಸ್ಥಾನಗಳಿಸಿದ್ದು, ರಾಜ್ಯಕ್ಕೆ ಮೊದಲ ಸ್ಥಾನ ಗಳಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಶಾಸಕ ಯೋಗೇಶ್ವರ್ ಅವರ ನೀರಾವರಿ ಕಾರಣ ಹೈನೋದ್ಯಮ ಸಾಕಷ್ಟು
ಪ್ರಗತಿ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿಐದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ಇಡೀ ರಾಜ್ಯಕ್ಕೆ ನಂಬರ್ ಒನ್ ಸ್ಥಾನಗಳಿಸುವ ನಿಟ್ಟಿನಲ್ಲಿನಮ್ಮೆಲ್ಲಾಅಧಿಕಾರಿ ವರ್ಗ, ನೌಕರ ವರ್ಗ ಹಾಗೂ ಉತ್ಪಾದಕರು ಕೆಲಸ ಮಾಡುವುದಾಗಿ ಬಮೂಲ್ ನಿರ್ದೇಶಕರು ತಿಳಿಸಿದರು.
ಪೋಟೊ13ಸಿಪಿಟಿ1: ಬಮೂಲ್ ಶಿಬಿರ ಕಚೇರಿಯಲ್ಲಿಆಯೋಜಿಸಿದ್ದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ನಿರ್ದೇಶಕ ಲಿಂಗೇಶ್ ಕುಮಾರ್ ಮಾತನಾಡಿದರು.

