ಶರಾವತಿ ಪಂಪ್ ್ಡ ಸ್ಟೋರೇಜ್ ಗೆ ಅನುಮತಿ ಬೇಡವೆಂದ ತಜ್ಞರ ಸಮಿತಿ
ಬಿಇಎಸ್ ಎಸ್ ನಲ್ಲಿದೆ ಎಸ್ ಪಿಎಸ್ ಗೆ ಪರ್ಯಾಯ
ಸಂತೋಷ್ ಕಾಚಿನಕಟ್ಟೆ ಶಿವಮೊಗ್ಗ
್ಝakshಞಜಿka್ಞಠಿhak್ಠಞa್ಟ.ಚಿಟ್ಟaಜಿahಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಪರಿಸರ ಹಾನಿ ತಡೆಗಟ್ಟುವ ಉದ್ದೇಶದಿಂದ ಮುಂದುವರಿದ ರಾಷ್ಟ್ರಗಳು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿಸುಧಾರಿತ ಮತ್ತು ಮುಂದುವರಿದ ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ(ಬ್ಯಾಟರಿ ಎನರ್ಜಿ ಸೇವಿಂಗ್ ಸಿಸ್ಟಮ್ )ಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡರೆ ರಾಜ್ಯ ಸರಕಾರ ಬಿಇಎಸ್ ಎಸ್ ಗೆ 3,400 ಕೋಟಿ ರೂ.ಗಳನ್ನು ವಿನಿಯೋಗಿಸಲು ನಿರ್ಧರಿಸಿದೆ.
ನವೀಕರಿಸಬಹುದಾದ ಮತ್ತು ಬದಲಿ ಇಂಧನ ಮೂಲಗಳ ಸಮರ್ಥ ಬಳಕೆಗೆ ಅವಕಾಶ ಇದ್ದರೂ ರಾಜ್ಯ ಸರಕಾರ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ10,240ಕೋಟಿ ರೂ. ವೆಚ್ಚದಲ್ಲಿಶರಾವತಿ ಪಂಪ್ ್ಡ ಸ್ಟೋರೇಜ್ ಯೋಜನೆಗೆ ಮುಂದಾಗಿತ್ತು. ಇದಕ್ಕೆ ಸ್ಥಳೀಯರಲ್ಲದೆ ಪರಿಸರವಾದಿಗಳು ಮತ್ತು ತಜ್ಞರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.
ಪರಿಸರ ಹಾನಿ ಬದಲು ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ(ಬಿಇಎಸ್ ಎಸ್ ) ಯೋಜನೆ ಅನುಷ್ಠಾನಗೊಳಿಸಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ಇದರ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲೂ2025ನೇ ಸೆಪ್ಟೆಂಬರ್ 6ರಂದು ‘ಬ್ಯಾಟರಿ ಬಿಟ್ಟು ಪಂಪ್ ್ಡ ಸ್ಟೋರೇಜ್ ಏಕೆ?’ ಎಂಬ ಶೀರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಕಟಿಸಲಾಗಿತ್ತು. ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರು 2026-27ನೇ ಸಾಲಿನಲ್ಲಿಮೊದಲ ಬಾರಿಗೆ ಹುಲಿಯೂರು, ಪಾವಗಡ ಮತ್ತು ಕುಷ್ಟಗಿ ಸಬ್ ಸ್ಟೇಷನ್ ಗಳಲ್ಲಿಬೃಹತ್ 2000 ಮೆ.ವ್ಯಾ. ಸಾಮರ್ಥ್ಯದ ಬಿಇಎಸ್ ಎಸ್ ಅಳವಡಿಸಲಾಗುವುದು ಎಂದು ಬಜೆಟ್ ನಲ್ಲಿಘೋಷಿಸಿದ್ದಾರೆ.
‘ಶರಾವತಿ ಪಂಪ್ ್ಡ ಸ್ಟೋರೇಜ್ ಯೋಜನೆಯಿಂದಾಗಿ ದೇಶದ ಪರಿಸರ ಸಮಗ್ರತೆಗೆ ಅಪಾರ ಹಾನಿಯಾಗುವ ಸಾಧ್ಯತೆಯಿದೆ. ಜತೆಗೆ ರಾಷ್ಟ್ರೀಯ ಆರ್ಥಿಕತೆಯ ದೀರ್ಘಕಾಲೀನ ಸುಸ್ಥಿರತೆ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ. ಈ ಯೋಜನೆಯಿಂದ ಭಾರಿ ಲಾಭವೇನೂ ಆಗುವುದಿಲ್ಲ. ಬದಲಿಗೆ ಇದರಿಂದಾಗುವ ಪ್ರತಿಕೂಲ ಪರಿಣಾಮ ಘೋರವಾದುದು. ಹೀಗಾಗಿ ಈ ಯೋಜನೆಗೆ ಅನುಮತಿ ಬೇಡ’ ಎಂದು ಕೇಂದ್ರ ಸರಕಾರಕ್ಕೆ ತಜ್ಞರ ತಂಡ ಶಿಫಾರಸ್ಸು ಮಾಡಿದೆ.
ಇದರ ಬೆನ್ನಿಗೆ ಬಜೆಟ್ ನಲ್ಲಿಸಿದ್ದರಾಮಯ್ಯ ಅವರು ಬಿಇಎಸ್ ಎಸ್ ಯೋಜನೆಗೆ ಅನುದಾನ ಘೋಷಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶರಾವತಿ ಕಣಿವೆಯಲ್ಲಿಪಂಪ್ ್ಡ ಸ್ಟೋರೇಜ್ ಬದಲಿಗೆ ಅದರ ಅರ್ಧಕ್ಕಿಂತ ಕಡಿಮೆ ವೆಚ್ಚದಲ್ಲಿಬಿಇಎಸ್ ಎಸ್ ಯೋಜನೆ ಅನುಷ್ಠಾನಗೊಳಿಸಬಹುದು. ಅದಕ್ಕೆ ಶಿವಮೊಗ್ಗ ಎಂಆರ್ ಎಸ್ ನಲ್ಲಿಬೇಕಾದ ವ್ಯವಸ್ಥೆ ಮತ್ತು ಜಾಗವೂ ಇದೆ.
ಏನಿದು ಬಿಇಎಸ್ ಎಸ್ :
ನಮ್ಮಲ್ಲಿಜಲ, ಸೌರ, ಪವನ, ಅನಿಲ ಶಕ್ತಿಯನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಬೇಡಿಕೆ ಅನುಸಾರ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಏಕೆಂದರೆ ನಮ್ಮಲ್ಲಿಬೇಡಿಕೆಗಿಂತ ಅಧಿಕ ವಿದ್ಯುತ್ ಉತ್ಪಾದಿಸಿದಲ್ಲಿಸಂಗ್ರಹ ಮಾಡುವ ವ್ಯವಸ್ಥೆ ಇಲ್ಲ. ಹೀಗಾಗಿ ಜಲಾಶಯಗಳು ತುಂಬಿ ಹರಿಯುತ್ತಿದ್ದರೂ, ಸೂರ್ಯನ ಬೆಳಕು ಮತ್ತು ಗಾಳಿ ಅಧಿಕ ಇದ್ದರೂ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯವಾಗುವುದಿಲ್ಲ. ಮನೆಗಳಲ್ಲಿವಿದ್ಯುತ್ ಇರುವಾಗ ಸಂಗ್ರಹಿಸಿ, ವಿದ್ಯುತ್ ಕಡಿತವಾದಾಗ ಬಳಕೆ ಮಾಡುವಂತಹ ಯುಪಿಎಸ್ ವ್ಯವಸ್ಥೆ ಮಾದರಿಯೆ ಬಿಇಎಸ್ ಎಸ್ .
ಕಡಿಮೆ ವೆಚ್ಚ:
ಪರಿಸರಕ್ಕೆ ಹಾನಿಯಾಗುವಂತಹ ಜಲಾಶಯ ನಿರ್ಮಾಣ ಅಥವಾ ಪಂಪ್ ್ಡ ಸ್ಟೋರೇಜ್ ನಂತಹ ಯೋಜನೆಗಳಿಗೆ ಹೋಲಿಕೆ ಮಾಡಿದಾಗ ಬಿಇಎಸ್ ಎಸ್ ನ ವೆಚ್ಚ ಬಹಳ ಕಡಿಮೆ. 2ಸಾವಿರ ಮೆ.ವ್ಯಾ. ಸಾಮರ್ಥ್ಯದ ಶರಾವತಿ ಪಂಪ್ ್ಡ ಸ್ಟೋರೇಜ್ ಗೆ ರಾಜ್ಯ ಸರಕಾರ 10,240 ಕೋಟಿ ರೂ. ವೆಚ್ಚ ಅಂದಾಜಿಸಿತ್ತು. ಹುಲಿಯೂರು, ಪಾವಗಡ ಮತ್ತು ಕುಷ್ಟಗಿಯಲ್ಲಿಸ್ಥಾಪಿಸಲು ಉದ್ದೇಶಿಸಿರುವ 2 ಸಾವಿರ ಮೆ.ವ್ಯಾ. ಸಾಮರ್ಥ್ಯದ ಬಿಇಎಸ್ ಎಸ್ ಯೋಜನೆಯ ಅಂದಾಜು ಮೊತ್ತ 3,400 ಕೋಟಿ ರೂ. ಮಾತ್ರ.
--------------
ಕೇಂದ್ರದ ನಿರ್ಧಾರ ಏನಾಗಬಹುದು
ಶರಾವತಿ ಪಂಪ್ ್ಡ ಸ್ಟೋರೇಜ್ ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ತಜ್ಞರ ತಂಡ ಅನುಮತಿ ನೀಡುವುದು ಬೇಡವೆಂದು ಶಿಫಾರಸ್ಸು ಮಾಡಿದ್ದರೂ ಅಂತಿಮ ನಿರ್ಧಾರ ಕೇಂದ್ರ ಸರಕಾರದ ಕೈಯಲ್ಲಿದೆ. ಅದಕ್ಕೆ ಮೊದಲು ತಜ್ಞರ ವರದಿಯು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಮುಂದಿನ ಸಭೆಯಲ್ಲಿಚರ್ಚೆಗೆ ಬರಲಿದೆ. ತಜ್ಞರ ವರದಿಯನ್ನು ಮಂಡಳಿಯ ಸ್ಥಾಯಿ ಸಮಿತಿಯು ಪರಾಮರ್ಶಿಸಿ ಕೇಂದ್ರ ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಿದೆ.
ಬದಲಾಗುವ ರಾಜಕೀಯ ಮತ್ತು ಸರಕಾರಗಳಿಂದಾಗಿ ನಿರ್ಧಾರಗಳೂ ಬದಲಾಗಬಹುದು. ಬಿಜೆಪಿ ಸರಕಾರದ ಅವಧಿಯಲ್ಲಿಪ್ರಸ್ತಾಪಿಸಲಾದ ಶರಾವತಿ ಪಂಪ್ ್ಡ ಸ್ಟೋರೇಜ್ ಯೋಜನೆಗೆ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ವಿರೋಧಿಸಿತ್ತು. ಅದೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಜನೆಯನ್ನು ಕೈಗೆತ್ತಿಕೊಂಡಾಗ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಮುಂದೆ ಸಹ ಇದು ತಿರುವು ಪಡೆದುಕೊಂಡಲ್ಲಿಅಚ್ಚರಿ ಇಲ್ಲ. ಆಗ ಕೇಂದ್ರ ಸರಕಾರದ ನಿರ್ಧಾರ ಸಹ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
------------------
ಪೋಟೊ
ವಿಕ ವರದಿ: 07ಎಸ್ ಎಂಜಿ50

