ನೂತನ ಉಪಾಧ್ಯಕ್ಷರಾಗಿ ಬಿ.ಎನ್ .ಕಾಶಿ ಆಯ್ಕೆ

Contributed byvinu1273@gmail.com|Vijaya Karnataka

ನಂಜರಾಯಪಟ್ಟಣ ಸಹಕಾರ ಸಂಘದಲ್ಲಿ ಬಿ.ಎನ್‌.ಕಾಶಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಬಿ.ಸಿ.ಮುರಳಿಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರ ಹಸ್ತಾಂತರ ನಡೆಯಿತು. ಒಪ್ಪಂದದಂತೆ ಮುಂದಿನ ಎರಡೂವರೆ ವರ್ಷ ಕಾಶಿ ಅವರು ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲತೀಶ್‌ ರೈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

bn kashi elected as new vice president official handover by the president

ವಿಕ ಸುದ್ದಿಲೋಕ ಕುಶಾಲನಗರ

ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಬಿ.ಎನ್ .ಕಾಶಿ ಆಯ್ಕೆಯಾದರು.

ಸಂಘದ ಅಧ್ಯಕ್ಷರಾದ ಬಿ.ಸಿ.ಮುರಳಿಮಾದಯ್ಯ ಅವರ ಅಧ್ಯಕ್ಷತೆಯಲ್ಲಿಸಂಘದ ಕಚೇರಿಯಲ್ಲಿನಡೆದ ಆಯ್ಕೆ ಪ್ರಕ್ರಿಯೆಯಲ್ಲಿಒಡಂಬಡಿಕೆ ಪ್ರಕಾರ ಹಾಲಿ ಉಪಾಧ್ಯಕ್ಷೆ ಎಸ್ .ಬಿ.ಅನಿತಾ ಅವರಿಂದ ಕಾಶಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಮಾಡಿಕೊಂಡಿದ್ದ ಒಪ್ಪಂದ ಪ್ರಕಾರ ಮುಂದಿನ ಎರಡೂವರೆ ವರ್ಷ ಅವಧಿಗೆ ಕಾಶಿ ಅವರು ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿ.ಸಿ.ಮುರಳಿಮಾದಯ್ಯ ಅವರು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲತೀಶ್ ರೈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಈ ಸಂದರ್ಭ ಸಂಘದ ನಿರ್ದೇಶಕರಾದ ಆರ್ .ಕೆ.ಚಂದ್ರ, ಧನಪಾಲ್ , ದಾದಪ್ಪ, ಕಾರ್ಯಪ್ಪ, ಉದಯಕುಮಾರ್ , ಪಂಚಾಕ್ಷರಿ ಎನ್ .ಸಿ, ಕೆ.ಕೆ.ಲೀಲಾವತಿ ಸೇರಿದಂತೆ ಸಿಬ್ಬಂದಿ ಇದ್ದರು.

13 ಕೆಯುಎಸ್ 01 ಚಿತ್ರದಲ್ಲಿ

ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಬಿ.ಎನ್ .ಕಾಶಿ ಆಯ್ಕೆಯಾದರು.