ಸರಕಾರಿ ಶಾಲೆ ಉಳಿಸಲು ಕೈಜೋಡಿಸಿ

Contributed byrajendrarao.krn@gmail.com|Vijaya Karnataka

ಬ್ಯಾಡರಹಳ್ಳಿ ಭಾಸ್ಕರ್‌ ಅವರು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿವೆ ಎಂದರು. ಇಂತಹ ಶಾಲೆಗಳನ್ನು ಉಳಿಸಲು ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅಡಗನಹಳ್ಳಿ ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೀರಿನ ಬಾಟಲಿ ವಿತರಿಸಲಾಯಿತು. ಸರಕಾರಿ ಶಾಲೆಗಳು ಉತ್ತಮ ಸಂಸ್ಕಾರ ನೀಡುವ ಮೂಲಕ ಭವಿಷ್ಯದ ಸಮಾಜ ನಿರ್ಮಾಣಕ್ಕೆ ವೇದಿಕೆ ಒದಗಿಸುತ್ತಿವೆ ಎಂದು ಅವರು ಹೇಳಿದರು.

community support essential for government schools

ಸರಕಾರಿ ಶಾಲೆ ಉಳಿಸಲು ಕೈಜೋಡಿಸಿ

* ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಬ್ಯಾಡರಹಳ್ಳಿ ಭಾಸ್ಕರ್ ಮನವಿ

ವಿಕ ಸುದ್ದಿಲೋಕ ಕೃಷ್ಣರಾಜನಗರ

ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಇಂತಹ ಶಾಲೆಗನ್ನು ಉಳಿಸಿ ಬೆಳೆಸಲು ಜನರು ಸಹಕಾರ ನೀಡಿ ಎಂದು ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಬ್ಯಾಡರಹಳ್ಳಿ ಭಾಸ್ಕರ್ ಹೇಳಿದರು.

ತಾಲೂಕಿನ ಅಡಗನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಏರ್ಪಡಿಸಿದ್ದ ಶಾರದಾ ಪೂಜೆಯಲ್ಲಿಪಾಲ್ಗೊಂಡು ದಾನಿಗಳು ಮಕ್ಕಳಿಗೆ ಕೊಡುಗೆಯಾಗಿ ನೀಡಿದ ನೀರಿನ ಸ್ಟೀಲ್ ಬಾಟಲ್ ಗಳನ್ನು ವಿತರಣೆ ಮಾಡಿ ಮಾತನಾಡಿದರು.

‘‘ನಮ್ಮ ಶಾಲೆಯ ಹಲವು ವಿದ್ಯಾರ್ಥಿಗಳು ಹತ್ತು ಹಲವಾರು ಕಳೆದ ಹಲವಾರು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ತೇರ್ಗಡೆಯಾಗಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವುದೇ ಇದಕ್ಕೆ ಉದಾಹರಣೆಯಾಗಿದೆ,’’ ಎಂದರು.

‘‘ಇದುವರೆಗೆ ಸರಕಾರದ ಯೋಜನೆಗಳಲ್ಲದೆ ಹಲವು ಸಂಘ-ಸಂಸ್ಥೆಗಳು ಮತ್ತು ದಾನಿಗಳಿಂದ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕಗಳು, ಪಠ್ಯೇತರ ಸಾಮಗ್ರಿಗಳು ಸೇರಿದಂತೆ ಹಲವು ಕೊಡುಗೆಗಳ ಮೂಲಕ ಶಿಕ್ಷಣದೊಂದಿಗೆ ಭವಿಷ್ಯದಲ್ಲಿಮಕ್ಕಳು ಸಮಾಜದಲ್ಲಿಹೇಗೆ ನಡೆದುಕೊಳ್ಳಬೇಕು, ತಾನೂ ಹೇಗೆ ಸಮಾಜದಲ್ಲಿಕೊಡುಗೈ ದಾನಿಯಾಗಬೇಕು ಎಂಬ ಪರಿಕಲ್ಪನೆ ಮೂಡಿಸುವುದರೊಂದಿಗೆ ಉತ್ತಮ ಸಂಸ್ಕಾರ ಬೆಳೆಸುವ ಕೆಲಸ ಮಾಡಲಾಗಿದೆ. ಭವಿಷ್ಯದಲ್ಲಿಉತ್ತಮ ಸಮಾಜ ನಿರ್ಮಾಣಕ್ಕೆ ನಮ್ಮ ಶಾಲೆ ಪ್ರಾಥಮಿಕ ಹಂತದಿಂದಲೇ ಉತ್ತಮ ವೇದಿಕೆ ನಿರ್ಮಿಸಿದೆ,’’ ಎಂದರು.

ಕಾರ್ಯಕ್ರಮದಲ್ಲಿಸಹ ಶಿಕ್ಷಕಿ ತಹಮಿಯಾಬೇಗಂ, ಎಸ್ ಡಿಎಂಸಿ ಅಧ್ಯಕ್ಷ ಎ.ಸಿ. ಮಹೇಶ್ , ಉಪಾಧ್ಯಕ್ಷೆ ರಮ್ಯಾ, ಸದಸ್ಯೆ ಅರ್ಪಿತಾ, ಚಂದ್ರಕಲಾ, ಸುಜನಾ, ಮಾದಮ್ಮ, ಕಾವ್ಯಾ, ಸೌಮ್ಯ, ಸುಜಾತಾ, ಆರತಿ, ಲೋಕೇಶ್ , ಮಂಜುನಾಥ್ , ಸಾಕಮ್ಮ, ಮಾಲಮ್ಮ, ರಕ್ಷಿತಾ, ರಮ್ಯಾ, ಗ್ರಾ.ಪಂ. ಮಾಜಿ ಸದಸ್ಯೆ ರೇಖಾ, ಅಡುಗೆ ಸಿಬ್ಬಂದಿ ಭವಾನಿ, ವನಜಾಕ್ಷಿ, ಕುಡಿಯುವನೀರಿನ ಬಾಟಲ್ ನ ದಾನಿಗಳಾದ ನಾರಾಯಣಗೌಡ, ಗಿರಿಜಮ್ಮ, ಜಗದೀಶ್ , ಕಮಲಮ್ಮ ಮತ್ತಿತರರು ಹಾಗೂ ಪೋಷಕರು ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಎಂವೈಎಸ್ 13ಕೆಆರ್ ಎನ್ 2ಸಿ

ಕೃಷ್ಣರಾಜನಗರ ತಾಲೂಕು ಅಡಗನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನಡೆದ ಶಾರದಾ ಪೂಜೆ ಕಾರ್ಯಕ್ರಮದಲ್ಲಿಶಾಲಾ ಮಕ್ಕಳಿಗೆ ದಾನಿಗಳು ಕುಡಿಯುವ ನೀರಿನ ಸ್ಟೀಲ್ ಬಾಟಲ್ ಗಳನ್ನು ಕೊಡುಗೆಯಾಗಿ ನೀಡಿದರು.