ಮಹಿಳೆಯರಿಗೆ ಶಿಕ್ಷಣ ಅತಿ ಅವಶ್ಯ

Contributed bylakshmanagh1997@gmail.com|Vijaya Karnataka

ಗಂಗಾವತಿ ನಗರಸಭೆ ಕಚೇರಿಯಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಮಹಿಳೆಯರಿಗೆ ಶಿಕ್ಷಣ ಅತ್ಯಗತ್ಯ ಎಂದು ನಿರ್ದೇಶಕಿ ವಿಜಯಲಕ್ಷ್ಮಿ ಹೇಳಿದರು. ಹೆಣ್ಣು ಮಕ್ಕಳು ಓದುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಆರೋಗ್ಯ ನಿರೀಕ್ಷಕಿ ಶೋಭಾ ತಿಳಿಸಿದರು. ಸಮಾನತೆಗಾಗಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ದಿನ ಇದಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.

education provides continuous development for women

ಮಹಿಳೆಯರಿಗೆ ಶಿಕ್ಷಣ ಅತಿ ಅವಶ್ಯ

ಮಹಿಳಾ ದಿನಾಚರಣೆಗೆ ಚಾಲನೆ

ವಿಕ ಸುದ್ದಿ ಲೋಕ ಗಂಗಾವತಿ

‘‘ಸಮಾಜದಲ್ಲಿಆದರ್ಶವಾಗಿ ಬದುಕಬೇಕೆಂದರೆ ಮಹಿಳೆಯರಿಗೆ ಶಿಕ್ಷಣ ಅತಿ ಮುಖ್ಯವಾಗಿದೆ,’’ ಎಂದು ನಗರಸಭೆ ಸ್ವಸಹಾಯ ಸಂಘದ ನಿರ್ದೇಶಕಿ ವಿಜಯಲಕ್ಷ್ಮಿ ಹೇಳಿದರು

ನಗರದ ನಗರಸಭೆ ಕಚೇರಿಯಲ್ಲಿ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದಿಂದ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘‘ಸಮಾನತೆಗಾಗಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ದಿನವಾಗಿದೆ,’’ ಎಂದರು.

ಹಿರಿಯ ಆರೋಗ್ಯ ನಿರೀಕ್ಷಕಿ ಶೋಭಾ ಮಾತನಾಡಿ, ‘‘ಹೆಣ್ಣು ಮಕ್ಕಳು ಓದುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಬೇಕು,’’ ಎಂದರು.

ಕಾಂತಮ್ಮ, ಪೌರಕಾರ್ಮಿಕರಾದ ಮಾಯಮ್ಮ, ಕಾಂತಮ್ಮ,ಕಿರಿಯ ಎಂಜಿನಿಯರ್ ಆಸ್ಮಾ , ಮಲ್ಲಮ್ಮ, ಅಶ್ವಿನಿ ಇದ್ದರು.

==

ಫೋಟೋ

13Ãñಣ01: ಗಂಗಾವತಿ ನಗರಸಭೆ ಕಚೇರಿಯಲ್ಲಿಶುಕ್ರವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.