ಮಯೂರ್ ಹೆಗಡೆ ಬೆಂಗಳೂರು
ಘ್ಕಿ ಞay್ಠ್ಟ.hಛಿಜdಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಗಂಭೀರ ಸ್ಥಿತಿಯಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಅವರ ಮನೆಗೆ ವೈದ್ಯರನ್ನು ಕಳಿಸಿ ಚಿಕಿತ್ಸೆ ನೀಡುವ ಸೇವೆಯನ್ನು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆರಂಭಿಸಿದ್ದು, ರಾಜ್ಯದಲ್ಲಿಇದೇ ಮೊದಲ ಬಾರಿಗೆ ಇಂತಹ ಕ್ರಮವನ್ನು ಸರಧಿಕಾರಿ ಆರೋಗ್ಯ ಸಂಸ್ಥೆ ಜಾರಿಗೊಳಿಸಿದಂತಾಗಿದೆ.
‘ನಿಮ್ಮ ಮನೆ, ನಿಮ್ಮ ಆಯ್ಕೆ, ನಮ್ಮ ಆರೈಕೆ’ ಘೋಷವಾಧಿಕ್ಯದಡಿ ಗೃಹ ಆಧಾರಿತ ಉಪಶಮನ ಆರೈಕೆಯನ್ನು ಕಳೆದ ವಾರದಿಂದ ಕಿದ್ವಾಯಿ ಜಾರಿಗೊಳಿಸಿದೆ. ಸಚಿವರು ಇನ್ನಷ್ಟೇ ಅಧಿಕೃತ ಚಾಲನೆ ನೀಡಲಿದ್ದಾರೆ. ಕ್ಯಾನ್ಸರ್ ಕೊನೆಯ ಹಂತದಲ್ಲಿರುವ, ಚಲಿಸಲು ಸಾಧ್ಯವಾಗದ, ಗಂಭೀರ ಅನಾರೋಗ್ಯ, ವೃದ್ಧಾಪ್ಯ ಅಥವಾ ಕುಟುಂಬಸ್ಥರ ನೆರವಿನ ಕೊರತೆಯಿಂದಾಗಿ ಆಸ್ಪತ್ರೆಗೆ ಆಗಾಗ್ಗೆ ಭೇಟಿ ನೀಡಲು ಸಾಧ್ಯವಾಗದ ರೋಗಿಗಳ ಚಿಕಿತ್ಸೆಗಾಗಿ ಈ ಕ್ರಮ ವಹಿಸಲಾಗಿದೆ.
ಗಂಭೀರ ದೀರ್ಘಕಾಲೀನ ರೋಗಿಗಳಿಗೆ ಕೇರಳ ಮಾದರಿಯಲ್ಲಿಮನೆ ಚಿಕಿತ್ಸೆ ಒದಗಿಸುವುದಾಗಿ ಸರಕಾರ ಬಜೆಟ್ ನಲ್ಲಿಘೋಷಿಸಿದೆ. ಆದರೆ, ಕಿದ್ವಾಯಿ ಅದಕ್ಕೂ ಮುನ್ನವೇ ಈ ಯೋಜನೆ ರೂಪಿಸಿ ಇದೀಗ ಕಾರ್ಯರೂಪಕ್ಕೆ ತಂದಿದೆ. ಸರಧಿಕಾರದ ವಿವಿಧ ಯೋಜನೆ, ಸಿಎಸ್ ಆರ್ ನೆರವಿಂದ ಈ ಯೋಜನೆ ರೂಪಿಸಲಾಗಿದೆ. ಖಾಸಗಿ ಆರೋಗ್ಯ ಸಂಸ್ಥೆಗಳು ಇಂತಹ ಚಿಕಿತ್ಸೆ ನೀಡುವುದುಂಟು. ಆದರೆ, ಸರಧಿಕಾರಿ ಆರೋಗ್ಯ ಸಂಸ್ಥೆಯೊಂದು ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು.
150 ರೋಗಿಗಳ ಗುರುತು:
‘ವಿಕ’ ಜತೆ ಮಾತನಾಡಿದ ಕಿದ್ವಾಯಿ ನಿರ್ದೇಶಕ ಡಾ. ಟಿ.ನವೀನ್ , ‘‘ ಆರಂಭಿಕ ಹಂತದಲ್ಲಿಕಿದ್ವಾಯಿ ಆಸ್ಪತ್ರೆಯನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಮುಧಿತ್ತಲಿನ 25 ಕಿ.ಮೀ. ವ್ಯಾಪ್ತಿಯಲ್ಲಿಈ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ಗಂಭೀರ ಪರಿಸ್ಥಿತಿಯ 150 ಕ್ಯಾನ್ಸರ್ ರೋಗಿಗಳನ್ನು ಗುರುತಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲು ಸದ್ಯಕ್ಕೆ ಎರಡು ಮೊಬೈಲ್ ವ್ಯಾನ್ ಗಳನ್ನು ನಿಯೋಜಿಸಿದ್ದೇವೆ. ಇದರಲ್ಲಿಇಬ್ಬರು ವೈದ್ಯರು, ಇಬ್ಬರು ನರ್ಸ್ , ಒಬ್ಬರು ಫಿಸಿಯೋಥೆರಪಿಸ್ಟ್ ಹಾಗೂ ಒಬ್ಬರು ಸಾಮಾಜಿಕ ಕಾರ್ಯಕರ್ತ ಇರಲಿದ್ದಾರೆ,’’ ಎಂದು ತಿಳಿಸಿದರು.
ಯಾವ ರೀತಿ ಚಿಕಿತ್ಸೆ
‘‘ತಂಡವು ರೋಗಿಗಳ ಮನೆಗಳಿಗೆ ಭೇಟಿ ನೀಡಿ ಅಗತ್ಯ ವೈದ್ಯಕೀಯ ಆರೈಕೆ ನೀಡಲಿದೆ. ಅಂದರೆ, ರೋಗಲಕ್ಷಣ ನಿರ್ವಹಣೆ, ಒಂದೇ ಕಡೆ ಇರುವುದರಿಂದ ಅವರಿಗಾಗುವ ಗಾಯಗಳಿಗೆ ಚಿಕಿತ್ಸೆ, ಮೂಗಿನ ಮೂಲಕ ಆಹಾರ ಪೂರೈಕೆ, ಸಮಾಲೋಚನೆ ಮತ್ತು ಆರೈಕೆದಾರರಿಗೆ ಮಾರ್ಗದರ್ಶನ ನೀಡುತ್ತದೆ. ಜತೆಗೆ, ಚಿಕಿತ್ಸೆಗೆ ಅಗತ್ಯವಿರುವ ಚಿಕ್ಕಪುಟ್ಟ ಉಪಕರಣವನ್ನು ನೀಡಲಾಗುತ್ತಿದೆ. ಈಗಾಗಲೇ 11 ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಲಾಗಿದೆ,’’ ಎಂದು ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಎಂ.ಕೆ. ಯದುರಾಜ್ ತಿಳಿಸಿದರು.
‘‘ತಂಡ ಮನೆಗೆ ಭೇಟಿ ನೀಡುವುದಕ್ಕೂ ಮುನ್ನ ಕಿದ್ವಾಯಿಯ ಟೆಲಿಮೆಡಿಸಿನ್ ವಿಭಾಗದಿಂದ ‘ನೆರವಿನ ಕರೆ’ ಮಾಡಿ ‘ವೈದ್ಯರು ಬರುತ್ತಿದ್ದೇವೆ, ಅಗತ್ಯತೆ ತಿಳಿಸಿ’ ಎಂದು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಜತೆಗೆ ಮನೆ ಭೇಟಿ ಬಳಿಕವೂ ಫಾಲೋಅಪ್ ಗಾಗಿ ವಿಡಿಯೋ ಕರೆ ಮಾಡಿ ರೋಗಿಯ ಸಂಬಂಧಿಯಿಂದ ಸದ್ಯದ ಸ್ಥಿತಿಗತಿ ಬಗ್ಗೆ ವಿವರ ಕಲೆಹಾಕಿ ವೈದ್ಯರ ಮೂಲಕ ಮಾರ್ಗದರ್ಶನ ಮಾಡಲಾಗುತ್ತಿದೆ,’’ ಎಂದು ವಿವರಿಸಿದರು.
ಸದ್ಯ ಕಿದ್ವಾಯಿ ಆಸ್ಪತ್ರೆಯಲ್ಲಿ870ಕ್ಕೂ ಅಧಿಕ ಹಾಸಿಗೆ ಸಾಮರ್ಥ್ಯವಿದೆ. ಪ್ರತಿ ದಿನ 800-1000 ಹೊಸ ಕ್ಯಾನ್ಸರ್ ರೋಗಿಗಳು ನೋಂದಣಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
---------------
ಕೋಟ್ ..
ಆಸ್ಪತ್ರೆಯ ಗಡಿ ದಾಟಿ ರೋಗಿಗೆ ಅವರ ಮನೆಯಲ್ಲೇ ಚಿಕಿತ್ಸೆ ಒದಗಿಸುವ ಕ್ರಮವನ್ನು ಕಿದ್ವಾಯಿ ಕೈಗೊಂಡಿದೆ. ಇದರಿಂದ ರೋಗಿಯಲ್ಲಿಭಯ ಕಡಿಮೆಯಾಗಿ ಕುಟುಂಬದವರಿಗೂ ನೆಮ್ಮದಿ ಸಿಗುತ್ತದೆ. ಮುಖ್ಯವಾಗಿ, ಕೊನೆಯ ಹಂತದವರೆಗೂ ಕ್ಯಾನ್ಸರ್ ರೋಗಿಯ ಮನೋಸ್ಥೈರ್ಯ ಕುಗ್ಗದಂತೆ, ಘನತೆಯಿಂದಲೇ ಕೊನೆ ದಿನಗಳನ್ನು ಮುಂದುವರಿಸಲು ಇಂತಹ ಸೇವೆ ಅಗತ್ಯ.
- ಡಾ. ಟಿ.ನವೀನ್ , ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ
-----
ಕೋಟ್
ನಮ್ಮವರನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ಅಸಾಧ್ಯವಾಗಿತ್ತು. ಕಿದ್ವಾಯಿ ವೈದ್ಯರು ಮನೆಗೇ ಬಂದು ಚಿಕಿತ್ಸೆ ನೀಡಿರುವುದು ನಮಗೆ ನಿರಾಳತೆ ತಂದಿದ್ದು, ಕುಟುಂಬಕ್ಕೆ ಬೆಂಬಲ ನೀಡಿದಂತಾಗಿದೆ.
-ಗಂಗಾ ರಾಮಯ್ಯ, ಕ್ಯಾನ್ಸರ್ ರೋಗಿಯ ಸಂಬಂಧಿ
-----
ಫೋಟೋ
ಕೋಟ್ ಫೋಟೋ - ಡಾ. ಟಿ.ನವೀನ್
ಗೃಹ ಆಧಾರಿತ ಉಪಶಮನ ಆರೈಕೆ ಮೀಸಲಾದ ವಾಹನ

