ಕಡಲಾಮೆ ಮರಿ ರಕ್ಷಿಸಿದ ಸಮಾಜಸೇವಕ

Contributed byjohn.dsouza@timesofindia.com|Vijaya Karnataka

ಕುಂದಾಪುರ ಸಮೀಪದ ಕೋಡಿ ಕಡಲತೀರದಲ್ಲಿ ಅಲಿವ್‌ ರಿಡ್ಲೇ ಕಡಲಾಮೆ ಮರಿಗಳು ಮೊಟ್ಟೆಯಿಂದ ಹೊರಬಂದು ರಸ್ತೆಯತ್ತ ತೆರಳುತ್ತಿದ್ದವು. ಸ್ಥಳೀಯ ಸಮಾಜಸೇವಕ ಅರ್ಜುನ್‌ ಸಾಲಿಯಾನ್‌ ಕೂಡಲೇ ಕಾರ್ಯಪ್ರವೃತ್ತರಾಗಿ ಮರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ಕಡಲಿಗೆ ಬಿಟ್ಟರು. ಅಳಿವಿನಂಚಿನಲ್ಲಿರುವ ಈ ಜೀವಗಳನ್ನು ರಕ್ಷಿಸಿದ ಕಾರ್ಯ ಶ್ಲಾಘನೀಯವಾಗಿದೆ. ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಗಿತ್ತು.

indian social worker saves sea turtle hatchlings

ಕುಂದಾಪುರ : ಇಲ್ಲಿಗೆ ಸಮೀಪದ ಕೋಡಿ ಚಕ್ರಮ್ಮ ದೇವಳ ಎದುರಿನ ಕಡಲತೀರದಲ್ಲಿಮೊಟ್ಟೆಯಿಂದ ಹೊರಬಂದ ಅಲಿವ್ ರಿಡ್ಲೇ ಕಡಲಾಮೆ ಮರಿಗಳನ್ನು ಸ್ಥಳೀಯ ಸಮಾಜಸೇವಕ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಮೊಟ್ಟೆಯಿಂದ ಹೊರಬಂದ ಕಡಲಾಮೆ ಮರಿಗಳು ಬೆಳಕಿನ ಪ್ರಭಾವಕ್ಕೆ ಕಡಲಿಗೆ ತೆರಳುವ ದಿಕ್ಕು ಬದಲಾಯಿಸಿ ತೀರ ಸಮೀಪದ ಸಾರ್ವಜನಿಕ ರಸ್ತೆಯತ್ತ ಮುಖ ಮಾಡಿರುವುದನ್ನು ನೋಡಿದ ಸ್ಥಳೀಯರಾದ ಅರ್ಜುನ್ ಸಾಲಿಯಾನ್ ಕೂಡಲೆ ಕಾರ್ಯಪ್ರವೃತ್ತರಾಗಿ ಬಕೆಟ್ ನಲ್ಲಿಮರಿಗಳನ್ನು ಸುರಕ್ಷಿತವಾಗಿ ತುಂಬಿ ಸಂಗಡಿಗರೊಂದಿಗೆ ಸೇರಿಕೊಂಡು ಸುರಕ್ಷಿತವಾಗಿ ಕಡಲಿಗೆ ಬಿಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೋಟ್

ಅಳಿವಿನಂಚಿನಲ್ಲಿರುವ ಅಲಿವ್ ರಿಡ್ಲೇ ಕಡಲಾಮೆ ರಕ್ಷಣೆಗೆ ಸರಕಾರ ಕಾನೂನು ರೂಪಿಸಿದೆ. 42 ಮರಿಗಳು ಮೊಟ್ಟೆಯಿಂದ ಹೊರಬಂದು ಕಡಲಿಗೆ ಹೋಗುವ ಬದಲಾಗಿ ರಸ್ತೆಗೆ ಏರುತ್ತಿರುವುದನ್ನು ಕಂಡು ಅದನ್ನು ರಕ್ಷಿಸಿ ಕಡಲಿಗೆ ಮರಳಿಸಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ.

- ದಿನೇಶ್ ಸಾರಂಗ ಕಡಲಾಮೆ ಸಂರಕ್ಷಣೆ ಕಾರ್ಯಕರ್ತ

ಕೋಟ್ :

ಮೊಟ್ಟೆಯಿಂದ ಹೊರಬೀಳುವ ಹೊತ್ತಲ್ಲಿಅವುಗಳ ಮೇಲೆ ಬೆಳಕು ಹರಿದಿದ್ದು ಇದರಿಂದ ಬೆದರಿ ರಸ್ತೆಯತ್ತ ಮುಖ ಮಾಡಿದ್ದವು. ಇದನ್ನು ನೋಡಿ ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಎಲ್ಲಮರಿಗಳನ್ನು ರಸ್ತೆಗೆ ಬಾರದಂತೆ ತಡೆದು ಮರಳಿ ಕಡಲಿಗೆ ಬಿಡುವ ಕೆಲಸ ಮಾಡಿದ್ದೇವೆ.

- ಅರ್ಜುನ್ ಸಾಲಿಯಾನ್ ಚರ್ಚ್ರಸ್ತೆ ಕುಂದಾಪುಧಿರ

ಪೋಟೊ//13ಕೆ-ಕೆಡಿಎಂ1, 2/. ಕಡಲಾಮೆ ಮರಿಗಳ ರಕ್ಷಣೆ.

ಪೋಟೊ//13ಕೆ-ಕೆಡಿಎಂ3//. ಕಡಲು ಸೇರಿದ ಮರಿಗಳು.