ಗೃಹಲಕ್ಷಿತ್ರ್ಮ ಕಂತು ಬಿಡುಗಡೆ

Contributed byrudraiah4084@gmail.com|Vijaya Karnataka

ಚಿಕ್ಕಮಗಳೂರಿನಲ್ಲಿ ಗೃಹಲಕ್ಷ್ಮಿ ಯೋಜನೆಯ 27ನೇ ಕಂತು ಬಿಡುಗಡೆಯಾಗಿದೆ. ಜಿಲ್ಲೆಯ 2,62,252 ಯಜಮಾನಿಯರ ಖಾತೆಗೆ 52.45 ಕೋಟಿ ರೂ. ಜಮಾ ಆಗಿದೆ. ಆಗಸ್ಟ್ 2023 ರಿಂದ ಈವರೆಗೆ 1,372 ಕೋಟಿ ರೂ. ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದೆ. ಈ ಹಣದಿಂದ ಮಹಿಳೆಯರು ಕುಟುಂಬ ನಿರ್ವಹಣೆ ಮತ್ತು ಸ್ವಯಂ ಉದ್ಯೋಗಕ್ಕೆ ಬಳಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅಭಿನಂದಿಸಲಾಗಿದೆ.

release of 27th installment of grihalakshmi scheme 5245 crore deposited to beneficiaries

ಗೃಹಲಕ್ಷಿತ್ರ್ಮ ಕಂತು ಬಿಡುಗಡೆ

ವಿಕ ಸುದ್ದಿಲೋಕ ಚಿಕ್ಕಮಗಳೂರು

ರಾಜ್ಯ ಸರಕಾರದ ಮಹಾತ್ಮಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿಒಂದಾದ ಗೃಹಲಕ್ಷ್ಮಿ ಯೋಜನೆಯ 27ನೇ ಕಂತು ಮಾ.11ರಂದು ಬಿಡುಗಡೆಯಾಗಿದೆ ಎಂದು ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಮೂಲಕ ಜಿಲ್ಲೆಯ 2,62,252 ಯಜಮಾನಿಯರಿಗೆ ಮಾಸಿಕ 2 ಸಾವಿರದಂತೆ ಒಟ್ಟು 52.45 ಕೋಟಿ ರೂ. ಅವರ ಖಾತೆಗೆ ನೇರವಾಗಿ ಜಮಾ ಆಗಿದೆ ಎಂದಿದ್ದಾರೆ. ಯೋಜನೆಯು ಆಗಸ್ಟ್ 2023ರಲ್ಲಿಆರಂಭಗೊಂಡಿದ್ದು ಈವರೆಗೆ ಜಿಲ್ಲೆಗೆ 1,372 ಕೋಟಿ ರೂ.ಗಳನ್ನು ರಾಜ್ಯ ಸರಕಾರ ನೀಡಿದೆ.

ಈ ಯೋಜನೆಯ ಹಣವನ್ನು ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗಾಗಿ ಬಳಕೆ ಮಾಡುವುದರೊಂದಿಗೆ ಸ್ವಯಂ ಉದ್ಯೋಗಗಳನ್ನು ರೂಪಿಸಿಕೊಂಡಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕ್ಕರ್ ಅವರನ್ನು ಶಿವಾನಂದಸ್ವಾಮಿ ಅಭಿನಂದಿಸಿದ್ದಾರೆ.