(ಲೀಡ್ ) ಹೀಟ್ ವೇವ್ ಆತಂಕ, ಇರಲಿ ಮುನ್ನೆಚ್ಚರಿಕೆ

Contributed byshashidonihaklu@gmail.com|Vijaya Karnataka

ತುಮಕೂರು ಜಿಲ್ಲೆಯಲ್ಲಿ ಬಿಸಿಲು ಮತ್ತು ಬಿಸಿಗಾಳಿಯಿಂದ ಜನರು ತತ್ತರಿಸುತ್ತಿದ್ದಾರೆ. ಹೀಟ್ ವೇವ್ ಆತಂಕ ಎದುರಾಗಿದ್ದು, ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ನೆಚ್ಚರಿಕೆ ಮಾರ್ಗಸೂಚಿ ನೀಡಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನೀರು, ಹಣ್ಣು, ತಂಪು ಪಾನೀಯ ಸೇವನೆಗೆ ಒತ್ತು ನೀಡಬೇಕು. ಮಕ್ಕಳು, ಗರ್ಭಿಣಿಯರು, ವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

severe heat wave in tumakuru guidelines for the public

ಬಿಸಿಲು, ಬಿಸಿಗಾಳಿಯಿಂದ ತುಮಕೂರು ತತ್ತರ | ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ‘ಮಾರ್ಗಸೂಚಿ’

ವಿಕ ವಿಶೇಷ ತುಮಕೂರು

ಜಿಲ್ಲೆಯಲ್ಲಿಹೀಟ್ ವೇವ್ ಆತಂಕ ಶುರುವಾಗಿದೆ. ಬಿಸಿಲು, ಬಿಸಿಗಾಳಿಯಿಂದ ಜನ ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿವಿಪತ್ತು ನಿರ್ವಹಣಾ ಪ್ರಾಧಿಕಾರ ‘ಮುನ್ನೆಚ್ಚರಿಕೆಯ ಮಾರ್ಗಸೂಚಿ’ ನೀಡಿದೆ.

ತುಮಕೂರಲ್ಲಿಈಗಲೇ 30-35 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗುತ್ತಿದೆ. ಈ ಬಾರಿ ಬೇಸಿಗೆ ಅವಧಿಯಲ್ಲಿಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಹೀಟ್ ವೇವ್ (ಶಾಖದ ಅಲೆ) ಉಂಟಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಎದುರಾಗುವ ಸ್ಥಿತಿಯ ಸೂಚನೆಯನ್ನು ‘ಬಿಸಿಲು’ ನೀಡಿದೆ. ಈ ಹಿನ್ನೆಲೆಯಲ್ಲಿಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ‘ಬೇಸಿಗೆ ಎದುರಿಸಲು’ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಯಾರಿಕೆ ಇಲ್ಲದಿದ್ದರೂ ಹೆಚ್ಚಾಗಿ ನೀರು ಕುಡಿಯುವುದು , ಹಗುರವಾದ ಹಾಗೂ ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ.

ಬಿಸಿಲಿಗೆ ಹೊರಡುವಾಗ ಛತ್ರಿ, ಟೋಪಿ, ರಕ್ಷಣಾತ್ಮಕ ಕಣ್ಣಿನ ಕನ್ನಡಕಗಳನ್ನು ಬಳಸಬೇಕು. ಸಾಧ್ಯವಾದರೆ ದೂರ ಪ್ರಯಾಣವನ್ನು ರಾತ್ರಿ ವೇಳೆ ಮಾಡುವುದು ಉತ್ತಮ. ಹೊರಗೆ ಕೆಲಸ ಮಾಡುವವರು ತಲೆ, ಕುತ್ತಿಗೆ ಮತ್ತು ಮುಖವನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕು.

ದೇಹವನ್ನು ತಂಪಾಗಿಡಲು ಲಸ್ಸಿ, ಶರಬತ್ , ನಿಂಬೆ ನೀರು, ಮಜ್ಜಿಗೆ ಮೊದಲಾದ ಮನೆಮದ್ದು ಪಾನೀಯಗಳನ್ನು ಸೇವಿಸುವುದು ಆರೋಗ್ಯಕರ ಎಂದು ಪ್ರಾಧಿಕಾರ ಮಾರ್ಗಸೂಚಿಯಲ್ಲಿಹೆಲ್ತ್ ಟಿಫ್ಸ್ ನೀಡಿದೆ.

ನೀರಿನಾಂಶದ ಪದಾರ್ಥ ಸೇವನೆ: ಹೆಚ್ಚಿನ ನೀರಿನ ಅಂಶ ಹೊಂದಿರುವ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್ , ಸೌತೆಕಾಯಿ ಹಾಗೂ ಎಳನೀರನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರಾಧಿಕಾರ ಸಲಹೆ ನೀಡಿದೆ.

ಇರಲಿ ಜಾಗೃತಿ: ಪ್ರಾಣಿ ಮತ್ತು ಪಕ್ಷಿಗಳನ್ನು ನೆರಳಿನಲ್ಲಿಇರಿಸಿ, ಅವುಗಳಿಗೆ ಸಾಕಷ್ಟು ಕುಡಿಯುವ ನೀರು ಒದಗಿಸಬೇಕು. ನವಜಾತ ಶಿಶುಗಳು, ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿಕೆಲಸ ಮಾಡುವವರು ಹಾಗೂ ಹೃದ್ರೋಗ ಮತ್ತು ರಕ್ತದೊತ್ತಡ ಸಮಸ್ಯೆ ಹೊಂದಿರುವವರು ವಿಶೇಷ ಜಾಗ್ರತೆ ವಹಿಸಬೇಕು. ಮೂರ್ಛೆ ಅಥವಾ ಅನಾರೋಗ್ಯ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.

ಬಾಕ್ಸ್

ಸಾರ್ವಜನಿಕರು ಏನು ಮಾಡಬೇಕು?

* ಬಿಸಿಲಿನ ಕುರಿತು ಮುನ್ಸೂಚನೆಗಳನ್ನು ಗಮನಿಸಿ

* ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ

* ತಿಳಿ ಬಣ್ಣದ ಹಗುರವಾದ ಹತ್ತಿ ಬಟ್ಟೆ ಧರಿಸಿ

* ಛತ್ರಿ, ಟೋಪಿ, ಕನ್ನಡಕ ಬಳಸಿ

* ಲಸ್ಸಿ, ಮಜ್ಜಿಗೆ, ನಿಂಬೆ ನೀರು ಸೇವಿಸಿ

* ಕಲ್ಲಂಗಡಿ, ಕರಬೂಜ ಮೊದಲಾದ ಹಣ್ಣುಗಳನ್ನು ಸೇವಿಸಿ

* ಪ್ರಾಣಿ-ಪಕ್ಷಿಗಳಿಗೆ ನೆರಳು ಮತ್ತು ನೀರು ಒದಗಿಸಿ

* ಮನೆಗಳಲ್ಲಿಪರದೆ, ಸನ್ ಶೇಡ್ ಬಳಸಿ ತಂಪಾಗಿರಿಸಿ

ಬಾಕ್ಸ್

ಏನು ಮಾಡಬಾರದು?

* ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ಬಿಸಿಲಿನಲ್ಲಿರುವ ವಾಹನಗಳಲ್ಲಿಬಿಡಬೇಡಿ

* ಮಧ್ಯಾಹ್ನ 12ರಿಂದ 3ರವರೆಗೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಿ

* ಕಪ್ಪು ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ

* ಆಲ್ಕೋಹಾಲ್ , ಹೆಚ್ಚು ಚಹಾ-ಕಾಫಿ, ತಂಪು ಪಾನೀಯಗಳನ್ನು ತಪ್ಪಿಸಿ

* ಹಳಸಿದ ಅಥವಾ ಅಸ್ವಚ್ಛ ಆಹಾರ ಸೇವಿಸಬೇಡಿ

* ಚಪ್ಪಲಿ ಇಲ್ಲದೆ ಬಿಸಿಲಿಗೆ ಹೊರಹೋಗುವುದು

ಬಾಕ್ಸ್

ಗಮನಿಸಿ

* ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಸಾಧ್ಯತೆ

* ಹೀಟ್ ವೇವ್ ನಿಂದ ಆರೋಗ್ಯ ಸಮಸ್ಯೆಗಳ ಆತಂಕ

* ನೀರು ಮತ್ತು ತಂಪು ಪಾನೀಯ ಸೇವನೆಗೆ ಒತ್ತು

* ಮಕ್ಕಳು, ಗರ್ಭಿಣಿಯರು, ವೃದ್ಧರ ಬಗ್ಗೆ ಇರಲಿ ವಿಶೇಷ ಕಾಳಜಿ

ಬಾಕ್ಸ್

ಹೀಟ್ ವೇವ್ ಲಕ್ಷಣಗಳು

* ತೀವ್ರದಾಹ, ದೌರ್ಬಲ್ಯ

* ತಲೆನೋವು, ತಲೆತಿರುಗು

* ವಾಕರಿಕೆ, ವಾಂತಿ

* ಹೆಚ್ಚು ಜ್ವರ, ಪ್ರಜ್ಞೆ ತಪ್ಪುವುದು

ಬಾಕ್ಸ್

ಪ್ರಥಮ ಚಿಕಿತ್ಸೆ

* ವ್ಯಕ್ತಿಯನ್ನು ತಕ್ಷಣ ನೆರಳಿನ ತಂಪಾದ ಸ್ಥಳಕ್ಕೆ ಕರೆದೊಯ್ಯಿರಿ

* ಒದ್ದೆಯಾದ ಬಟ್ಟೆಯಿಂದ ದೇಹ ತಂಪಾಗಿಸಿರಿ

* ನೀರು ಅಥವಾ ಒಆರ್ ಎಸ್ , ನಿಂಬೆ ಪಾನಕ ನೀಡಿ

* ತಂಪಾದ ಗಾಳಿಯ ವ್ಯವಸ್ಥೆ ಮಾಡಿರಿ

* ಸುಸ್ತು ಸೇರಿದಂತೆ ಹೀಟ್ ವೇವ್ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ

ಕೋಟ್ :

ಈ ವರ್ಷ ಬೇಸಿಗೆ ಅವಧಿಯಲ್ಲಿತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಹೀಟ್ ವೇವ್ ಸ್ಟೊ್ರೕಕ್ ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಈ ಹಿನ್ನೆಲೆಯಲ್ಲಿವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಲಹೆ ಮಾರ್ಗಸೂಚಿ ನೀಡಲಾಗಿದೆ. ಜನ ತಮ್ಮ ಆರೋಗ್ಯ ರಕ್ಷಣೆಗಾಗಿ ಇವುಗಳನ್ನು ಅನುಸರಿಸಬೇಕು. ಪ್ರಮುಖವಾಗಿ ಸಾಕಷ್ಟು ನೀರು ಕುಡಿಯಿರಿ. ಆರೋಗ್ಯ ಸಮಸ್ಯೆ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

- ಶುಭಾ ಕಲ್ಯಾಣ್ , ಜಿಲ್ಲಾಧಿಕಾರಿ ಮತ್ತು ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ

ಫೋಟೋ

13ಟಿಯುಎಂ1 : ಎಐ ಚಿತ್ರ

13ಟಿಯುಎಂ2 : ಶುಭಾ ಕಲ್ಯಾಣ್ , ಜಿಲ್ಲಾಧಿಕಾರಿ ಮತ್ತು ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ