ಮಠದಲ್ಲಿವಚನ ಕಲ್ಯಾಣ ಮಹೋತ್ಸವ

Contributed bymaheshmadahalli.vk@gmail.com|Vijaya Karnataka

ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಮಠದಲ್ಲಿ ವಚನ ಕಲ್ಯಾಣ ಮಹೋತ್ಸವ ನಡೆಯಿತು. ಕೇರಳದ ಸಂಗಮೇಶ ಮತ್ತು ಶ್ರೀರಂಗಪಟ್ಟಣದ ಐಶ್ವರ್ಯ ಸರಳ ವಿವಾಹದ ಮೂಲಕ ಒಂದಾದರು. ಇಮ್ಮಡಿ ಉದ್ದಾನ ಸ್ವಾಮೀಜಿ ವಿವಾಹ ನೆರವೇರಿಸಿದರು. ಶರಣರ ತತ್ವದಂತೆ ಜೀವನ ನಡೆಸಲು ಜೋಡಿಗೆ ಸಲಹೆ ನೀಡಲಾಯಿತು. ಇದು ಎರಡು ರಾಜ್ಯಗಳನ್ನು ಬೆಸೆಯುವ ವಿಶೇಷ ಕಾರ್ಯಕ್ರಮವಾಯಿತು. ಹೆಚ್ಚಿನವರು ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಲಾಯಿತು.

vachana kalyana mahotsava at mooduguru math 118th year celebration

ಮಠದಲ್ಲಿವಚನ ಕಲ್ಯಾಣ ಮಹೋತ್ಸವ

- ಕೇರಳ, ಶ್ರೀರಂಗಪಟ್ಟಣ ಜೋಡಿಯಿಂದ ಸರಳ ವಿವಾಹ

ವಿಕ ಸುದ್ದಿಲೋಕ ಗುಂಡ್ಲುಪೇಟೆ (ಚಾಮರಾಜನಗರ)

ತಾಲೂಕಿನ ಮೂಡುಗೂರು ಮಠದಲ್ಲಿಕೇರಳ ಮತ್ತು ಶ್ರೀರಂಗಪಟ್ಟಣದ ಜೋಡಿ ವಚನ ಕಲ್ಯಾಣದ ಮಹೋತ್ಸವದ ಮೂಲಕ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಮಠದ ಆವರಣದಲ್ಲಿಕೇರಳದ ಆಂಡೂರಿನ ಕನ್ನಡಿಗ ದಂಪತಿ ಮಾಚಪ್ಪ-ರೇಣುಕಾ ಪುತ್ರ ಸಂಗಮೇಶ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಪ್ಪಾಜಿ-ರೇಖಾ ದಂಪತಿ ಪುತ್ರಿ ಐಶ್ವರ್ಯಳ ವಚನ ಕಲ್ಯಾಣ ಮಹೋತ್ಸವವನ್ನು ಇಮ್ಮಡಿ ಉದ್ದಾನ ಸ್ವಾಮೀಜಿ ನೆರವೇರಿಸಿದರು.

ನಂತರ ಮಾತನಾಡಿ ಧರ್ಮಗುರು ಬಸವಣ್ಣ, ‘‘ಶರಣರು ಸಮ್ಮತಿಸಿದ ಮಾರ್ಗದಂತೆ ನಡೆವ ವಚನ ಕಲ್ಯಾಣ ಮಹೋತ್ಸವದಲ್ಲಿಗುರು ಲಿಂಗ ಜಂಗಮ ಸಾಕ್ಷಿಯಾಗಿ ಸತಿಪತಿಗಳಾಗಿದ್ದೀರಿ. ಶರಣ ತತ್ವದಂತೆ ಜೀವನ ನಡೆಸಿ. ಸಂಪತ್ತು ಎಂದು ಕರೆಸಿಕೊಳ್ಳುವ ಸಮಯವನ್ನು ಜೀವನದಲ್ಲಿಯಾವುದೇ ಕಾರಣಕ್ಕೂ ಅಪಮೌಲ್ಯಗೊಳಿಸಬೇಡಿ,’’ ಎಂದು ಸಲಹೆ ನೀಡಿದರು.

‘‘ವಚನ ಕಲ್ಯಾಣ ಕಾರ್ಯಕ್ರಮವಾದ ಕಾರಣ ಎರಡು ಕುಟುಂಬಗಳ ಸದಸ್ಯರು, ಸ್ನೇಹಿತರು, ಬಂಧು ಬಳಗವಷ್ಟೆ ಭಾಗವಹಿಸಿ ಸಂಭ್ರಮಿಸಲು ಸಾಧ್ಯವಾಗಿದೆ. ಎರಡು ಮನ, ಎರಡು ಮನೆ, ಎರಡು ಊರು ಸೇರುವುದು ಸಾಮಾನ್ಯವಾಗಿರುತ್ತದೆ. ಆದರೆ, ವಚನ ಕಲ್ಯಾಣ ಎರಡು ರಾಜ್ಯಗಳನ್ನು ಸೇರಿಸಿಕೊಂಡಿರುವುದು ವಿಶೇಷÜ,’’ ಎಂದರು.

‘‘ನಮ್ಮ ಮಠದಲ್ಲಿನಡೆಯುತ್ತಿರುವ ಒಂಭತ್ತನೆಯ ವಚನ ಕಲ್ಯಾಣ ಇದಾಗಿದ್ದು, ಇನ್ನೂ ಹೆಚ್ಚಿನ ಮಂದಿ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು,’’ ಎಂದು ಸಲಹೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಶೈಲಕುಮಾರ್ , ಕುಮಚಹಳ್ಳಿ ಗುರುಮಲ್ಲೇಶ್ವರ ಭಜನಾ ಸಂಘದವರು, ಹೂರದಹಳ್ಳಿಪರಮೇಶ್ವರಪ್ಪ, ಬಲಚವಾಡಿ ಬಿಕ್ಷದ ಮಠದ ಶ್ರೀಗಳು ಹಾಜರಿದ್ದರು.

ಸಿಎಚ್ ಎನ್ 13ಜಿಪಿಟಿ3

ಚಾಮರಾಜನಗರ ಜಿಲ್ಲೆಗುಂಡ್ಲುಪೇಟೆ ತಾಲೂಕಿನ ಮೂಡುಗೂರಿನ ಮಠದ ಇಮ್ಮಡಿ ಉದ್ದಾನಸ್ವಾಮೀಜಿ ಸಮ್ಮುಖದಲ್ಲಿವಚನ ಕಲ್ಯಾಣ ಮಹೋತ್ಸವ ಸರಳವಾಗಿ ನಡೆಯಿತು.