ವಿಕ ಸುದ್ದಿಲೋಕ ಬೆಳ್ತಂಗಡಿ
ರಮ್ಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ವೇಣೂರು ಆರಕ್ಷಕ ಠಾಣೆಯಲ್ಲಿ ಶನಿವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಠಾಣಾ ಉಪನಿರೀಕ್ಷಕ ಅಕ್ಷಯ ಡವಗಿ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸಿ ಶಾಂತಿ ಸೌಹಾರ್ದದಿಂದ ಹಬ್ಬವನ್ನು ಆಚರಿಸಿ. ಠಾಣಾ ವ್ಯಾಪ್ತಿಯಲ್ಲಿಇಲ್ಲಿಯವರೆಗೆ ಅತ್ಯಂತ ಶಾಂತಿಯಿಂದ ಹಬ್ಬ ಹರಿದಿನಗಳ ಆಚರಣೆಯ ಇತಿಹಾಸವಿದ್ದರೂ, ಮುಂಜಾಗ್ರತಾ ಕ್ರಮವಾಗಿ ಈ ಸಭೆ ಕರೆಯಲಾಗಿದೆ ಎಂದರು.
ಎಎಸ್ ಐ ವೆಂಕಟೇಶ್ ಮತ್ತು ಸಿಬ್ಬಂದಿ, ಪತ್ರಕರ್ತ ಎಚ್ . ಮಹಮ್ಮದ್ ವೇಣೂರು, ಪಡ್ಡಂದಡ್ಕ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಪೆರಿಂಜೆ ಮದ್ರಸ ಸಮಿತಿ ಅಧ್ಯಕ್ಷ ಅಶ್ರಫ್ ಗಾಂಧಿನಗರ, ಪುಲಾಬೆ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಲಿಯಬ್ಬ, ಕರಿಮಣೇಲು ಶಾಂತಿ ನಗರ ಮದ್ರಸ ಸಮಿತಿ ಅಧ್ಯಕ್ಷ ಪಿ.ಎಚ್ . ಅಶ್ರಫ್ , ಇಸ್ಮಾಯಿಲ್ ಉಳ್ತೂರು, ಕೆ.ಪಿ. ಬಸೀರ್ , ಪುತ್ತುಮೋನು ಕಾಶಿಪಟ್ಣ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ :15ಕೆಎನ್ ರಮ್ಜಾನ್
(ರಮ್ಜಾನ್ ಹಬ್ಬದ ಪ್ರಯುಕ್ತ ವೇಣೂರು ಆರಕ್ಷಕ ಠಾಣೆಯಲ್ಲಿಶಾಂತಿ ಸಭೆ ನಡೆಯಿತು.)

