ವಿಟ್ಲ: ದಲಿತ್ ಸೇವಾ ಸಮಿತಿ ಮಾಸಿಕ ಸಭೆ

Contributed byganeshaprasadapandelu@gmail.com|Vijaya Karnataka

ವಿಟ್ಲದಲ್ಲಿ ದಲಿತ್‌ ಸೇವಾ ಸಮಿತಿಯ ಮಾಸಿಕ ಸಭೆ ನಡೆಯಿತು. ಜಿಲ್ಲಾಧ್ಯಕ್ಷ ಗೋಪಾಲ್‌ ಕೆ. ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಅಳಿಕೆ ಶ್ರೀ ಸತ್ಯಸಾಯಿ ಶಾಲೆಯ ಶಿಕ್ಷಕ ಆನಂದ ನಾಯ್ಕ ಮಲಾರ್‌ ಅವರು ಮಕ್ಕಳಿಗೆ 100 ಬರೆಯುವ ಪುಸ್ತಕದ ಮೌಲ್ಯ ನೀಡುವುದಾಗಿ ತಿಳಿಸಿದರು. ಮುಂದಿನ ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿಯಂದು ಸಮವಸ್ತ್ರ ಧರಿಸಿ ಹಾಜರಾಗಲು ಸದಸ್ಯರಿಗೆ ಸೂಚಿಸಲಾಯಿತು.

dalit service committee meeting in vitla discussing dr ambedkar jayanti activities

ವಿಕ ಸುದ್ದಿಲೋಕ ವಿಟ್ಲ

ದ.ಕ. ಜಿಲ್ಲಾದಲಿತ್ ಸೇವಾ ಸಮಿತಿಯ ಮಾಸಿಕ ಸಭೆ ಭಾನುವಾರ ವಿಟ್ಲದ ಅಧ್ಯಾಪಕರ ಸಭಾಭವನದಲ್ಲಿಜಿಲ್ಲಾಧ್ಯಕ್ಷ ಗೋಪಾಲ್ ಕೆ. ನೇರಳಕಟ್ಟೆ ಅಧ್ಯಕ್ಷತೆಯಲ್ಲಿನಡೆಯಿತು.

ಸಭೆಯಲ್ಲಿಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಮುಂದಿನ ತಿಂಗಳು ನಡೆಯುವ ಡಾ. ಬಿ.ಆರ್ . ಅಂಬೇಡ್ಕರ್ ಜಯಂತಿಯಂದು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಮವಸ್ತ್ರ ಧರಿಸಿ ಹಾಜರಿರುವಂತೆ ಕೋರಿದರು. ಅಂದು ನಡೆಯುವ ಕಾರ್ಯಕ್ರಮಕ್ಕೆ ಸಂಘದ ಸದಸ್ಯರಿಗೆ ಜವಾಬ್ದಾರಿ ಹಂಚಲಾಯಿತು. ಮುಖ್ಯ ಅತಿಥಿ ಅಳಿಕೆ ಶ್ರೀ ಸತ್ಯಸಾಯಿ ಶಾಲೆಯ ಶಿಕ್ಷಕ ಆನಂದ ನಾಯ್ಕ ಮಲಾರ್ , ಅಂದು ಮಕ್ಕಳಿಗೆ 100 ಬರೆಯುವ ಪುಸ್ತಕದ ಮೌಲ್ಯವನ್ನು ನೀಡು ವುದಾಗಿ ತಿಳಿಸಿದರು.

1703ವಿಟಿಎಲ್ ದಲಿತ್

ಸಭೆಯಲ್ಲಿಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿದರು.