ಹಜ್ ಯಾತ್ರಿಕರ ಆರೋಗ್ಯ ತಪಾಸಣೆ

Contributed bymahammed.arif@timesgroup.com|Vijaya Karnataka

ಮಂಗಳೂರಿನಲ್ಲಿ 2026ರ ಹಜ್ ಯಾತ್ರೆಗೆ ತೆರಳುವವರ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವೆನ್ಲಾಕ್ ಆಸ್ಪತ್ರೆ ವೈದ್ಯರು ಹಾಗೂ ಇತರ ವೈದ್ಯರು ತಪಾಸಣೆ ನಡೆಸಿದರು. ಜಿಲ್ಲಾ ಹಜ್ ನಿರ್ವಹಣಾ ಸಮಿತಿ ವತಿಯಿಂದ ವೈದ್ಯರಿಗೆ ಸನ್ಮಾನಿಸಲಾಯಿತು. ಯಾತ್ರಿಕರ ಆರೋಗ್ಯ ಸುರಕ್ಷತೆಗೆ ಇದು ಮಹತ್ವದ ಹೆಜ್ಜೆಯಾಗಿದೆ.

conclusion of health checkup camp for hajj pilgrims in 2026

ವಿಕ ಸುದ್ದಿಲೋಕ ಮಂಗಳೂರು

2026ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವವರಿಗೆ ಒಂದು ವಾರದಿಂದ ನಡೆಯುತ್ತಿರುವ ಆರೋಗ್ಯ ತಪಾಸಣೆ ಶಿಬಿರ ಬುಧವಾರ ಸಮಾಪನಗೊಂಡಿತು.

ತಪಾಸಣೆ ನಡೆಸಿಕೊಟ್ಟ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಡಾ.ಶಿವಪ್ರಕಾಶ್ ಡಿ.ಎಸ್ ., ಜಿಲ್ಲಾಆರ್ ಸಿಎಚ್ ಅಧಿಕಾರಿ ಡಾ.ರಾಜೇಶ್ , ವೈದ್ಯಕೀಯ ತಪಾಸಣಾ ನೋಡೆಲ್ ಅಧಿಕಾರಿ ಡಾ.ಹಿಬ್ಝು ರ್ರಹ್ಮಾನ್ , ವೈದ್ಯರಾದ ಡಾ.ಬಾಷೀತ್ , ಡಾ.ಮನೀಶ್ , ಡಾ.ಅಶ್ವಿನ್ , ಯೆನೆಪೋಯ ಆಸ್ಪತ್ರೆ ವೈದ್ಯರಾದ ಡಾ.ಮೊಹಮ್ಮದ್ ಅಫ್ರಾದ್ ಮತ್ತಿತರರನ್ನು ಜಿಲ್ಲಾಹಜ್ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಸಿ.ಮಹಮೂದ್ ಸನ್ಮಾನಿಸಿದರು.

ಫಾರೂಕ್ ಕಿನ್ಯ, ಇಬ್ರಾಹಿಂ ಕೊಣಾಜೆ, ಇಸ್ಮಾಯಿಲ್ ಕೊಡಾಜೆ, ಪಕೀರಬ್ಬ ಮಾಸ್ಟರ್ , ಇಮ್ರಾನ್ ಅಡ್ಡೂರು, ಉಮರಬ್ಬ ಮಾಸ್ಟರ್ ಬೆಳ್ತಂಗಡಿ, ಅಬ್ದುಲ್ ರಶೀದ್ ಮತ್ತಿತರರು ಉಪಸ್ಥಿತರಿದ್ದರು.

ಹಜ್ ನಿರ್ವಹಣಾ ಸಮಿತಿ ಸದಸ್ಯ ಅಹ್ಮದ್ ಬಾವ ಪಡೀಲ್ ಸ್ವಾಗತಿಸಿದರು. ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಕೊಡಾಜೆ ಪ್ರಾಸ್ತಾವಿಕ ಮಾತನಾಡಿದರು.

ಫೊಟೊ-18ಎಂ-ಹಜ್ ಟೆಸ್ಟಿಂಗ್

ಮಂಗಳೂರಿನಲ್ಲಿಹಜ್ ಯಾತ್ರಿಕರ ಆರೋಗ್ಯ ತಪಾಸಣೆ ಮಾಡಿದ ವೈದ್ಯರನ್ನು ಸನ್ಮಾನಿಸಲಾಯಿತು.