ವಿಕ ಸುದ್ದಿಲೋಕ ಕಾರವಾರ
ಕಾರವಾರ ನಗರದಲ್ಲಿಅನಧಿಕೃತವಾಗಿ ತೆರೆದ ಗೂಡಂಗಡಿ ಮತ್ತು ಅನುಮತಿಗಿಂತ ಹೆಚ್ಚಿನ ಪ್ರದೇಶವನ್ನು ಆವರಿಸಿಕೊಂಡು ಗೂಡಂಗಡಿಗಳ ಮೇಲೆ ಬುಧವಾರ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಅನಧಿಕೃತ ಎರಡು ಗೂಡಂಗಡಿಗಳನ್ನು ತೆರವು ಮಾಡಿದ್ದಾರೆ. ಅನುಮತಿಗಿಂತ ಹೆಚ್ಚಿನ ಪ್ರದೇಶವನ್ನು ಆವರಿಸಿಕೊಂಡು ಪೆಟ್ಟಿಗೆ ಇಟ್ಟುಕೊಂಡಿದ್ದ 15 ಅಂಗಡಿಗಳ ಪೆಟ್ಟಿಗೆಗಳನ್ನು ತೆರವು ಮಾಡಿದ್ದಾರೆ. ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದ ನಗರಸಭೆ ಅಧಿಕಾರಿಗಳು ರಸ್ತೆ ಮೇಲೆ ಇಟ್ಟಿದ್ದ ಫ್ರಿಜ್ , ಹೆಚ್ಚುವರಿ ಅಂಗಡಿಗಳನ್ನು ಜೆಸಿಬಿ ಬಳಸಿ ಒಂದೊಂದಾಗಿ ತೆಗೆದು ನಗರಸಭೆ ವಾಹನದಲ್ಲಿಸಾಗಿಸಿದರು.
ಗೂಡಂಗಡಿ ವ್ಯಾಪಾರಿಗಳಿಗೆ ನಗರಸಭೆಯಿಂದ ಅಧಿಕೃತ ಅನುಮತಿ ನೀಡಲಾಗುತ್ತದೆ. ಕೆಲವರು ಅನುಮತಿ ಇಲ್ಲದೆ ರಸ್ತೆ ಫುಟ್ ಪಾತ್ ಮೇಲೆ ಅಂಗಡಿ ತೆರೆದುಕೊಂಡಿದ್ದರು. ಇನ್ನು ಕೆಲವರು ಫುಟ್ ಪಾತ್ ಜಾಗದಲ್ಲಿಜನ ಓಡಾಡುವುದಕ್ಕೂ ಆಗದಷ್ಟು ಪ್ರದೇಶವನ್ನು ಆವರಿಸಿಕೊಂಡಿದ್ದರು. ರಸ್ತೆಯ ಭಾಗವನ್ನೂ ಅತಿಕ್ರಮಿಸಿಕೊಂಡಿದ್ದರಿಂದ ನಗರಸಭೆಗೆ ದೂರುಗಳು ಸಲ್ಲಿಕೆಯಾಗಿದ್ದವು. ಆ ಹಿನ್ನೆಲೆಯಲ್ಲಿಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ನಗರದ ಎಂ.ಜಿ. ರಸ್ತೆ, ಪಿಕಳೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿಯಮ ಮೀರಿದ ಗೂಡಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ರೀತಿ ಫುಟ್ ಪಾತ್ , ಪಾರ್ಕಿಂಗ್ ಪ್ರದೇಶವನ್ನು ಆಕ್ರಮಿಸಿಕೊಂಡ ಇತರ ಗೂಡಂಗಡಿಗಳ ಮೇಲೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಫೋಟೊ
18ಪ್ರಮೋದ2,3
ಕಾರವಾರದಲ್ಲಿನಿಯಮ ಮೀರಿದ ಗೂಡಂಗಡಿಗಳನ್ನು ತೆರವು ಮಾಡಲಾಯಿತು.

