ಶಾಲೆಗೆ ಕಂಪ್ಯೂಟರ್ , ಕ್ರೀಡಾ ಸಾಮಗ್ರಿ ವಿತರಣೆ

Contributed byJagadeesha.neechadi@gmail.com|Vijaya Karnataka

ತ್ಯಾಗರ್ತಿಡಾ.ಬಿ.ಆರ್‌. ಅಂಬೇಡ್ಕರ್‌ ಆದರ್ಶಗಳನ್ನು ಸ್ಮರಿಸಿ, ಗೌತಮಪುರ ಮತ್ತು ಕೆ.ಹೊಸಕೊಪ್ಪ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್‌ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ಯೂನಿಯನ್‌ ಬ್ಯಾಂಕ್‌ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಆದಿಜಾಂಬವ ರಾಜ್ಯ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಲಾಯಿತು. ಪುಸ್ತಕ ಓದುವ ಹವ್ಯಾಸ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿ ಎಂದರು.

distribution of computers and sports material to schools on dr br ambedkar jayanti

ವಿಕ ಸುದ್ದಿಲೋಕ ತ್ಯಾಗರ್ತಿ

ಡಾ.ಬಿ.ಆರ್ . ಅಂಬೇಡ್ಕರ್ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ. ಅವರ ಆದರ್ಶಗಳನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಳ್ಳಬೇಕೆಂದು ಶಿವಮೊಗ್ಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರೀಜನಲ್ ಚೀಫ್ ಮ್ಯಾನೇಜರ್ ಸುರೇಶ್ ಹೇಳಿದರು.

ಡಾ.ಬಿ.ಆರ್ . ಅಂಬೇಡ್ಕರ್ 135ನೇ ಜಯಂತ್ಯುತ್ಸವ ಅಂಗವಾಗಿ ಗೌತಮಪುರ ಮತ್ತು ಕೆ.ಹೊಸಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಮತ್ತು ಡಾ.ಬಿ.ಆರ್ .ಅಂಬೇಡ್ಕರ್ ಆದಿಜಾಂಬವ ರಾಜ್ಯ ಸಮಿತಿ ಸಹಯೋಗದೊಂದಿಗೆ ಕಂಪ್ಯೂಟರ್ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಚಿಕ್ಕಂದಿನಿಂದಲೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು.

ಶಿವಮೊಗ್ಗದ ಡಾ.ಬಿ.ಆರ್ .ಅಂಬೇಡ್ಕರ್ ಆದಿಜಾಂಬವ ರಾಜ್ಯ ಸಮಿತಿ ಅಧ್ಯಕ್ಷ ಎನ್ .ಪ್ರಕಾಶ್ ಮಾತನಾಡಿ, ನಮ್ಮ ಸಂಘಟನೆಯು ಕಳೆದ 25 ವರ್ಷಗಳಿಂದ ಜಿಲ್ಲೆಯ ವಿವಿಧ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಹಕಾರ ನೀಡುತ್ತಾ ಬಂದಿದೆ. ಮಕ್ಕಳ ವಿದ್ಯಾಭ್ಯಾಸವೇ ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ. ವಿದ್ಯಾಭ್ಯಾಸಕ್ಕೆ ಪೂರಕವಾದ ಸಹಕಾರವನ್ನು ಇಂದು ಈ ಶಾಲೆಗಳಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.

ಬ್ಯಾಂಕ್ ನ ರೀಜನಲ್ ಮ್ಯಾನೇಜರ್ ಕಿಶನ್ , ಡಾ.ಬಿ.ಆರ್ .ಅಂಬೇಡ್ಕರ್ ಆದಿ ಜಾಂಬವ ರಾಜ್ಯ ಸಮಿತಿ ಗೌರವಾಧ್ಯಕ್ಷ ದೇವೇಂದ್ರಪ್ಪ, ನಗರಾಧ್ಯಕ್ಷರಾದ ಪ್ರವೀಣ್ ಕುಮಾರ್ , ಜಿಲ್ಲೆಸಂಘಟನಾ ಸಂಚಾಲಕ ಸಂಪತ್ ಕುಮಾರ್ , ಗೌತಮಪುರ ಮಹಿಳಾ ಘಟಕ ಅಧ್ಯಕ್ಷರಾದ ತುಂಗಮ್ಮ, ಮುಖ್ಯ ಶಿಕ್ಷಕ ಸೋಮಪ್ಪ, ಸಿಆರ್ ಪಿ ಬರಮಗೌಡ, ಎಸ್ ಡಿಎಂಸಿ ಅಧ್ಯಕ್ಷ ಪ್ರಶಾಂತ್ , ಉಪಾಧ್ಯಕ್ಷರಾದ ಮೇನಕಾ ಮತ್ತಿತರರಿದ್ದರು.

ಫೋಟೋ;-12ಟಿಜಿಟಿ1;-

ಸಾಗರ ತಾಲೂಕು ಗೌತಮಪುರದ ಬನಶಂಕರಿ ಬಡಾವಣೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು.