ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತನಾಯಕ್ ಹೇಳಿಕೆ
ವಿಕ ಸುದ್ದಿಲೋಕ ಹಾಸನ
ಸರಕಾರ ಕೌಶಲ್ಯದಲ್ಲಿಆಸಕ್ತಿ ಹೊಂದಿರುವ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುತ್ತಿದೆ ಎಂದು ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತನಾಯಕ್ ತಿಳಿಸಿದರು.
ಆಲೂರು ಪಟ್ಟಣದಲ್ಲಿಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ90 ನಿರುದ್ಯೋಗಿ ಅಭ್ಯರ್ಥಿಗಳಿಗೆ ಪಾರಂಪರಿಕ ಕೌಶಲ್ಯ ತರಬೇತಿ ಕಾರ ್ಯಕ್ರಮದಲ್ಲಿಹ್ಯಾಂಡ್ ಎಂಬ್ರಾಯ್ಡರಿ ತರಬೇತಿ ಕಾರ ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘‘ಕೌಶಲ್ಯ ಹೊಂದಿದವರು ಬಟ್ಟೆ ಮತ್ತು ನೂಲಿನ ಮೂಲಕ ಅನೇಕ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಆರ್ಥಿಕ ಅನುಕೂಲ ಪಡೆದುಕೊಳ್ಳಲು ಅವಕಾಶವಿದೆ. ಯುವಜನರು ಕೌಶಲ್ಯ ತರಬೇತಿ ಪಡೆಯುವುದರಿಂದ ಸ್ವಯಂ ಉದ್ಯೋಗಕ್ಕೆ ಅವಕಾಶ ದೊರಕಲಿದೆ,’’ಎಂದು ತಿಳಿಸಿದರು.
‘‘ಮಹಿಳೆಯರು ಮನೆಯಲ್ಲಿದೈನಂದಿನ ಚಟುವಟಿಕೆ ಜತೆಯಲ್ಲಿವಿರಾಮದ ಸಂದರ್ಭದಲ್ಲಿಎಂಬ್ರಾಯಿಡರಿ ಮಾಡುವುದರಿಂದ ಉತ್ತಮ ಕಲೆ ರೂಪಿಸಬಹುದು. ಅಲ್ಲದೆ ಉತ್ತಮ ಆಲೋಚನೆಗಳಿಂದ ತಮ್ಮ ಜೀವನ ಸಾಗಿಸಬಹುದು. ಕೌಶಲ್ಯ ತರಬೇತಿಯ ಮೂಲಕ ನಿರುದ್ಯೋಗಿ ಯುವಕ-ಯುವತಿಯರು ಆತ್ಮನಿರ್ಭರ್ ಯೋಜನೆ ಅನ್ವಯ ಸರಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ,’’ಎಂದರು.
ಜಿಲ್ಲಾಕೌಶಲ್ಯಾಧಿಕಾರಿ ವಿಜಯಲಕ್ಷ್ಮಿ ಯಶಸ್ವಿ ಆಯೋಜನೆಗೆ ಶುಭಾಶಯ ಕೋರಿದರು. ನಂತರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿ, ಉತ್ತೇಜನ ನೀಡಿದರು.
ಹರ್ಷಿತ ಸಂಸ್ಥೆಯ ಅಧ್ಯಕ್ಷ ನಂಜಪ್ಪಶೆಟ್ಟಿ, ಕಾರ್ಯದರ್ಶಿ ಶೈಲಜಾ, ಸಂಪನ್ಮೂಲ ವ್ಯಕ್ತಿ ಹೇಮ, ಸಂಯೋಜಕ ನವೀನ್ , ನವ್ಯ, ಗೀತಾ ಹಾಜರಿದ್ದರು.
ಫೋಟೊ
ಆಲೂರಿನಲ್ಲಿಮಹಿಳೆಯರಿಗೆ ಕೌಶಲ್ಯ ತರಬೇತಿ ಶಿಬಿರಕ್ಕೆ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತನಾಯಕ್ ಚಾಲನೆ ನೀಡಿದರು.

