18ನರೇಗಲ್ಲ2
ಫೋಟೊ ಮಾತ್ರ: 18 ನರೇಗಲ್ಲ2:
ನರೇಗಲ್ಲಪಟ್ಟಣದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿನರೇಗಲ್ಲರೈತ ಸಮೃದ್ಧಿ ತೋಟಗಾರಿಕೆ ಉತ್ಪಾದಕ ಕೇಂದ್ರದಿಂದ ಸರಕಾರದ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ರೈತರ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲಾಯಿತು. ತೂಕದ ಚಿಲಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ರೈತ ಸಮೃದ್ಧಿ ತೋಟಗಾರಿಕೆ ಉತ್ಪಾದಕ ಕೇಂದ್ರದ ನಿರ್ದೇಶಕ ಬಾಳಪ್ಪ ಸೋಮಗೊಂಡವರು ಚಾಲನೆ ನೀಡಿದರು. ನಿರ್ದೇಶಕ ಮಂಡಳಿಯ ಮಲ್ಲನಗೌಡ ಪಾಟೀಲ, ಚನಬಸಪ್ಪ ಕುಷ್ಟಗಿ, ರೈತರಾದ ರವಿಗೌಡ ಪಾಟೀಲ, ಶರಣಪ್ಪ ಕುರಿ, ರವಿ ಮ್ಯಾಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

