ಭಾಸ್ಕರನ ಪ್ರಖರ ಛಾಯೆ ಮಂಕಾದ ಮಲಪ್ರಭೆ

Contributed bylingrajvc@gmail.com|Vijaya Karnataka

ಬೇಸಿಗೆಯ ತಾಪಕ್ಕೆ ಮಲಪ್ರಭಾ ನದಿ ಬತ್ತಿ ಹೋಗಿದೆ. ಇದರಿಂದಾಗಿ ಬಾದಾಮಿ ತಾಲೂಕಿನ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಹಾಗೂ 24*7 ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಗಳು ಕೂಡ ಮಲಪ್ರಭಾ ನದಿಯ ನೀರಿನ ಮೇಲೆ ಅವಲಂಬಿತವಾಗಿವೆ. ಕೆಂದೂರ ಕೆರೆ ಅಭಿವೃದ್ಧಿ ಕಾಣದೆ ನೀರಿಲ್ಲದೆ ಬಣಗುಡುತ್ತಿದೆ. ನವಿಲುತೀರ್ಥ ಜಲಾಶಯದಿಂದ ನೀರು ಹರಿಸಿದರೆ ಮಾತ್ರ ಈ ಸಮಸ್ಯೆ ಬಗೆಹರಿಯಲಿದೆ.

the long path is filled with floods

ಚಾಲುಕ್ಯರ ನಾಡಿಗೂ ತಟ್ಟಿದ ಸಮಸ್ಯೆ | ನವಿಲುತೀರ್ಥದಿಂದ ನೀರು ಹರಿದರೆ ಮಾತ್ರ ಪರಿಹಾರ

ಭಾಸ್ಕರನ ಪ್ರಖರ ಛಾಯೆ ಮಂಕಾದ ಮಲಪ್ರಭೆ

ಲಿಂಗರಾಜ ಚಿನಿವಾಲರ ಬಾದಾಮಿ

ಬೇಸಿಗೆಯಲ್ಲಿಭಾಸ್ಕರನ ಪ್ರಖರಕ್ಕೆ ಮಲಪ್ರಭೆಯೂ ಮಂಕಾಗಿ ಜೀವಜಲಕ್ಕಾಗಿ ಚಾಲುಕ್ಯರ ನಾಡೂ ಪ್ರತಿವರ್ಷ ಪರಿತಪಿಸುತ್ತಿದೆ. ಒಂದು ಕಾಲದಲ್ಲಿಉತ್ತರ ಭಾರತದವರೆಗೆ ಸಾಮ್ರಾಜ್ಯ ವಿಸ್ತರಿಸಿದ್ದ ಚಾಲುಕ್ಯರ ಆಡಳಿತದ ಮೇಲೂ ಪ್ರಭಾವ ಬೀರಿದ್ದ ಮಲಪ್ರಭೆಯ ಸದ್ಬಳಕೆ ಮತ್ತು ರಕ್ಷಣೆಯಲ್ಲಿಸರಕಾರಗಳು ಎಡವಿದ ಪರಿಣಾಮ ಬಾದಾಮಿ ತಾಲೂಕಿನ ಜನರು ಬೇಸಿಗೆಯಲ್ಲಿನೀರಿಗಾಗಿ ಸಮಸ್ಯೆ ಎದುರಿಸುವುದು ತಪ್ಪುತ್ತಿಲ್ಲ.

ತಾಲೂಕಿನಲ್ಲಿಎಲ್ಲೆಲ್ಲಿದೆ ಸಮಸ್ಯೆ? :

ತಾಲೂಕಿನ ಅನಂತಗಿರಿ ಗ್ರಾಮದ ಜನರು ಪ್ರತಿ ವರ್ಷವೂ ಹರಸಾಹಸ ಮಾಡಿಯೇ ನೀರು ಪಡೆಯುತ್ತಿದ್ದಾರೆ. ಜಾಲಿಹಾಳ ಸೇರಿ ಏಳು ಊರುಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ಏಳೂ ಊರುಗಳಿಗೆ ಮಲಪ್ರಭಾ ನದಿ ಯೇ ನೀರಿನ ಮೂಲವಾಗಿದೆ. ಸದ್ಯ ಮಲಪ್ರಭಾ ನದಿ ಖಾಲಿಯಾಗಿ ನೀರು ಸರಬರಾಜಿಗೆ ಸಮಸ್ಯೆ ಎದುರಾಗಿದೆ. ಇದರಿಂದ ಸಾರ್ವಜನಿಕರು ಮತ್ತು ಜಾನುವಾರು ತೊಂದರೆಗೆ ಸಿಲುಕಿವೆ.

ಸಿಎಂ ಸಿದ್ದರಾಮಯ್ಯ ಅವರು ಕಳೆದ ಬಾರಿ ಬಾದಾಮಿ ಶಾಸಕರಿದ್ದಾಗ 24*7 ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೆ ತಂದರು. ಬಾದಾಮಿ ಪಟ್ಟಣ ಹಾಗೂ 18 ಹಳ್ಳಿಗಳಿಗೆ ಈ ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ಮಲಪ್ರಭೆ ಒಡಲು ಖಾಲಿಯಾಗಿದ್ದರಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲಎಂಬ ದೂರುಗಳು ಕೇಳಿ ಬಂದಿವೆ. ಬಾದಾಮಿ ಪಟ್ಟಣದಲ್ಲಿನೀರಿನ ಸಮಸ್ಯೆ ಇಲ್ಲವೆಂದರೂ ಗುಡ್ಡದ ಪ್ರದೇಶ ಹಾಗೂ ನೂತನ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಹಂಚಿಕೆಯಾಗುತ್ತಿಲ್ಲ. ಹಳೆ ಬಾದಾಮಿಯಲ್ಲೂನೀರು ಹಂಚಿಕೆಯಲ್ಲಿವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರು ಮುಖ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬಾದಾಮಿ ತಾಲೂಕಿನ ದಕ್ಷಿಣ ಭಾಗದ ಹಾಗನೂರು ಬಳಿ ಹರಿವು ಆರಂಭಿಸುವ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ 40 ಹಳ್ಳಿಗಳಿವೆ. ಎಲ್ಲಹಳ್ಳಿಗಳೂ ಮಲಪ್ರಭಾ ನೀರೇ ಜೀವಜಲ. ಬೇಸಿಗೆಯಲ್ಲಿನದಿ ಬತ್ತಿದರೆ ಬೋರವೆಲ್ ಮತ್ತು ತೆರೆದ ಬಾವಿಗಳತ್ತ ಜನರು ಮುಖ ಮಾಡುತ್ತಾರೆ. ‘‘ಗ್ರಾಪಂಗಳು ಅನುಸರಿಸುವ ಸಮರ್ಪಕ ನಿರ್ವಹಣೆಯಿಂದ ಮಾತ್ರ ನೀರಿನ ಸಮಸ್ಯೆ ನಿವಾರಿಸಲು ಸಾಧ್ಯ,’’ ಎಂದು ನದಿ ತೀರದ ಜನರು ಹೇಳುತ್ತಾರೆ.

ಉತ್ತರ ಭಾಗಕ್ಕೂ ಉಲ್ಬಣ ಸಾಧ್ಯತೆ:

ತಾಲೂಕಿನ ಉತ್ತರ ಭಾಗದ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀರು ಪೂರೈಸುವ ವ್ಯವಸ್ಥೆ ಇದ್ದರೂ ಬಿರು ಬೇಸಿಗೆ ಅಂಥ ಗ್ರಾಮಗಳಿಗೂ ಸಮಸ್ಯೆ ತಂದೊಡ್ಡುತ್ತಿದೆ. ಗ್ರಾಮೀಣ ಭಾಗಗಳಲ್ಲಿಶುದ್ಧ ಕುಡಿಯುವ ನೀರಿನ ಘಟಕಗಳು ನಿರುಪಯುಕ್ತವಾಗಿವೆ. ಸದ್ಬಳಕೆಯಾಗದೆ ಘಟಕಗಳ ಮಷಿನ್ ಗಳು ಕಳ್ಳತನವಾಗಿದ್ದು, ಕೆಲವೆಡೆ ಹಾಳಾಗಿ ಗ್ರಾಮೀಣ ಜನರು ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ.

---------

ಅಭಿವೃದ್ಧಿ ಕಾಣದ ಕೆಂದೂರ ಕೆರೆ

ಬಾಗಲಕೋಟೆ ಜಿಲ್ಲೆಯ ಅತಿ ವಿಸ್ತಾರವುಳ್ಳ ಬಾದಾಮಿ ತಾಲೂಕಿನ ಕೆಂದೂರ ಕೆರೆ ನೀರಿಲ್ಲದೆ ಜಾಲಿಕಂಟಿಗಳಲ್ಲಿಮುಳುಗಿದೆ. ಕೆರೆ ಹೂಳು ತೆಗೆಯಲು ಹಣ ಮಂಜೂರಾದರೂ ಅಭಿವೃದ್ಧಿ ಕಂಡಿಲ್ಲಎನ್ನುವುದಕ್ಕೆ ಕೆರೆಯ ಈಗಿನ ಭೌಗೋಳಿಕ ದೃಶ್ಯವೇ ಸಾಕ್ಷಿಯಾಗಿದೆ. ಈ ಕೆರೆ ಅಭಿವೃದ್ಧಿಪಡಿಸಿ ಮಲಪ್ರಭಾ ನದಿಯಿಂದ ನೀರು ಹರಿಸಿದಲ್ಲಿಸುತ್ತಲಿನ ನಾಲ್ಕು ಹಳ್ಳಿ ಸೇರಿ 300ಕ್ಕೂ ಅಧಿಕ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಈ ನಿಟ್ಟಿನಲ್ಲಿಸ್ಥಳೀಯ ಶಾಸಕರು ಇಚ್ಛಾಶಕ್ತಿ ತೋರಿಸಬೇಕಿದೆ.

-------

ಬಾದಾಮಿ ತಾಲೂಕಿನ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಈಗ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಸಮಸ್ಯೆ ಕಂಡು ಬಂದರೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಹರಿಸಲು ಪ್ರಾದೇಶಿಕ ಆಯುಕ್ತರಿಗೆ ಪತ್ರ ಸಲ್ಲಿಸಲಾಗಿದೆ.

- ಎಸ್ .ಎಫ್ .ಬೊಮ್ಮನ್ನವರ ಪ್ರಭಾರ ತಹಸೀಲ್ದಾರ್ ಬಾದಾಮಿ, ಗುಳೇದಗುಡ್ಡ

ಫೋಟೋ

ಮುಳ್ಳುಕಂಟಿಯಲ್ಲಿಮುಳುಗಿರುವ ಬಾದಾಮಿ ತಾಲೂಕಿನ ಕೆಂದೂರ ಕೆರೆ.

ಫೋಟೋ

ಬಾದಾಮಿ ತಾಲೂಕಿನ ವ್ಯಾಪ್ತಿಯಲ್ಲಿಖಾಲಿಯಾಗಿರುವ ಮಲಪ್ರಭೆ ಒಡಲು.