ವಿಕ ಸುದ್ದಿಲೋಕ ನಂದೇಶ್ವರ
ತಂದೆ- ತಾಯಿಗಳೇ ನಮಗೆ ಕಣ್ಣಿಗೆ ಕಾಣುವ ನಿಜವಾದ ದೇವರು . ಪರಹಿತಕ್ಕಾಗಿ ಮತ್ತು ಪರೋಪಕಾರಕ್ಕಾಗಿ ಬದುಕುವುದೇ ಶ್ರೇಷ್ಠ ಜೀವನ ಎಂದು ಬೀಳೂರು ವಿರಕ್ತ ಮಠದ ಗುರು ಚನ್ನಬಸವ ಸ್ವಾಮೀಜಿ ಹೇಳಿದರು.
ಸಮೀಪದ ಸಂಕೋನಟ್ಟಿ- ಚಿಕ್ಕಟ್ಟಿ ರಸ್ತೆಯ ನಂದೀಶ ವನದಲ್ಲಿಭಾನುವಾರ ಆಯೋಜಿಸಲಾಗಿದ್ದ ಶಿವಾನುಭವ ಗೋಷ್ಠಿ ಹಾಗೂ ಲಿಂ. ನಂದೆಪ್ಪ ಟೋಪಗಿ ಅವರ 8ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು. ‘‘ಸಮಾಜ, ನಾಡು- ನುಡಿ ಹಾಗೂ ಧರ್ಮಕ್ಕಾಗಿ ಶ್ರಮಿಸುವ ವ್ಯಕ್ತಿಗಳು ಜನರ ಹೃದಯದಲ್ಲಿಶಾಶ್ವತವಾಗಿ ಅಚ್ಚಳಿಯದೆ ಉಳಿಯುತ್ತಾರೆ,’’ ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘‘ಜೀವನ ಶಾಶ್ವತವಲ್ಲ, ಆದರೆ ನಾವು ಮಾಡುವ ಸತ್ಕಾರ್ಯಗಳು ಎಂದಿಗೂ ಅಳಿಯುವುದಿಲ್ಲ. ಲಿಂ. ನಂದೆಪ್ಪ ಟೋಪಗಿ ಗುರುಗಳು ತೋರಿದ ಸನ್ಮಾರ್ಗದಲ್ಲಿಶಿಷ್ಯವೃಂದ ಮುನ್ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ,’’ ಎಂದರು. ನಂದಗಾಂವ ಭೂಕೈಲಾಸ ಮಂದಿರದ ಶ್ರೀ ಮಹಾದೇವ ಮಹಾರಾಜರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಮಹಾನಂದಾ ಪಾಟೀಲ ಹಾಗೂ ವಿವಿಧ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿದ ಕಲಾವಿದರನ್ನು ಆತ್ಮೀಯವಾಗಿ ಗೌರವಿಸಿ ಸತ್ಕರಿಸಲಾಯಿತು. ಹಿರಿಯ ಸಾಹಿತಿ ಡಾ. ವಿ.ಎಸ್ . ಮಾಳಿ, ಎಂಜಿನಿಯರ್ ರಾಜಶೇಖರ ಟೋಪಗಿ, ಶ್ರೀಶೈಲ ನಾರಗೊಂಡ, ಎ.ಎ. ಹುದ್ದಾರ, ಡಾ. ಪ್ರಕಾಶ ಕುಮಠಳ್ಳಿ, ಸಿದ್ದಾರೂಢ ಸವದಿ, ನಿಪ್ಪಾಣಿ ತಹಸೀಲ್ದಾರ್ ಸುರೇಶ ಮುಂಜೆ, ಸಿಪಿಐ ಸಂತೋಷ ಹಳ್ಳೂರ, ರಾಜಕುಮಾರ ಅಡಹಳ್ಳಿ, ರವಿ ಚೌಗಲಾ, ಸುಭಾಷ ನಾಯಿಕ, ಅಶೋಕ ಕೌಜಲಗಿ, ಶಂಕರ ಮಟ್ಟೆಪ್ಪನವರ, ಡಿ.ಸಿ. ನಾಯಿಕ, ಎಮ….ಜಿ. ಪಾಟೀಲ, ಅಣ್ಣಾಸಾಬ ಅಡಹಳ್ಳಿ, ಮಾಧವ ಟೋಪಗಿ, ಅಶೋಕ ಡಾಬಳ್ಳಿ, ವಿಜಯ ಹುದ್ದಾರ ಹಾಗೂ ಡಾ. ಸುರೇಶ ಹಾಲಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸವಿತಾ ಟೋಪಗಿ ಪ್ರಾರ್ಥಿಸಿದರು. ಸಂಗಮೇಶ ಹಚಡದ ನಿರೂಪಿಸಿದರು. ಕಲ್ಲೇಶ ಹಾಲಳ್ಳಿ ವಂದಿಸಿದರು. ವಿವಿಧ ಭಜನಾ ಮಂಡಳಿಗಳಿಂದ ಸಂಗೀತ ಸೇವೆ ನಡೆಯಿತು.
-16ನಂದಿ1
ಸಂಕೋನಟ್ಟಿ- ಚಿಕ್ಕಟ್ಟಿ ರಸ್ತೆಯ ನಂದೀಶ ವನದಲ್ಲಿಜರುಗಿದ ಶಿವಾನುಭವ ಗೋಷ್ಠಿ ಕಾರ್ಯಕ್ರಮದ ಆಯೋಜಕರಾದ ಅಭಿಯಂತರ ರಾಜಶೇಖರ ಟೋಪಗಿ ದಂಪತಿಗಳನ್ನು ಬೀಳೂರು ಮಠದ ಶ್ರೀ ಗುರು ಚನ್ನಬಸವ ಸ್ವಾಮೀಜಿ ಅವರು ಗೌರವಿಸಿ ಸತ್ಕರಿಸಿದರು.

