ಚಿತ್ರದುರ್ಗ ಜಿಲ್ಲೆಯಲ್ಲಿ3.2 ಮಿ.ಮೀ. ಮಳೆ

Contributed byahobalapathy.narayanappa@timesofindia.com|Vijaya Karnataka

ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ 3.2 ಮಿ.ಮೀ. ಮಳೆಯಾಗಿದೆ. ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು ತಾಲೂಕುಗಳಲ್ಲಿ ಮಳೆ ದಾಖಲಾಗಿದೆ. ಡಾ.ಬಾಬು ಜಗಜೀವನರಾಂ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆ ಆಚರಣೆಗೆ ಪೂರ್ವಭಾವಿ ಸಭೆ ಮಾ.23ರಂದು ನಡೆಯಲಿದೆ. ನಿಷ್ಕಿ್ರೕಯಗೊಂಡ ಸಹಕಾರ ಸಂಘಗಳ ಸಮಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

heavy rainfall in chitradurga district recorded 32 mm

ಚಿತ್ರದುರ್ಗ ಜಿಲ್ಲೆಯಲ್ಲಿ3.2 ಮಿ.ಮೀ. ಮಳೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿಮಂಗಳವಾರ ಸುರಿದ ಮಳೆ ವಿವರದನ್ವಯ ಸರಾಸರಿ 3.2 ಮಿಮೀ ಮಳೆಯಾಗಿದೆ. ಚಳ್ಳಕೆರೆಯಲ್ಲಿ7, ಚಿತ್ರದುರ್ಗ ತಾಲೂಕಲ್ಲಿ1.6, ಹಿರಿಯೂರಲ್ಲಿ2.7, ಹೊಸದುರ್ಗದಲ್ಲಿ1.7 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ3.2 ಮಿಮೀ ಮಳೆಯಾಗಿದೆ.

**

23ಕ್ಕೆ ಪೂರ್ವಭಾವಿ ಸಭೆ

ಚಿತ್ರದುರ್ಗ: ಡಾ.ಬಾಬು ಜಗಜೀವನರಾಂ ಅವರ 119ನೇ ಜನ್ಮ ದಿನಾಚರಣೆ ಹಾಗೂ ಡಾ.ಬಿ.ಆರ್ .ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಆಚರಿಸುವ ಸಂಬಂಧ ಮಾ.23ರಂದು ಮಧ್ಯಾಹ್ನ 3ಕ್ಕೆ ಚಿತ್ರದುರ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿಪೂರ್ವಭಾವಿ ಸಭೆ ಕರೆಯಲಾಗಿದೆ.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯ ಅಧ್ಯಕ್ಷತೆ ವಹಿಸುವರು. ಪೂರ್ವಭಾವಿ ಸಭೆಗೆ ಜನಪ್ರತಿನಿಧಿಗಳು, ನಾನಾ ಸಂಘಟನೆಗಳ ಮುಖ್ಯಸ್ಥರು, ಸಾರ್ವಜನಿಕರು ಭಾಗವಹಿಸಿ, ಸಲಹೆ-ಸೂಚನೆ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.

**

ನಿಷ್ಕಿ್ರೕಯಗೊಂಡ ಸಹಕಾರ ಸಂಘಗಳ ಸಮಾಪನೆ

ಚಿತ್ರದುರ್ಗ: ಸಹಕಾರ ಸಂಘಗಳ ಕಾಯ್ದೆ, ನಿಯಮ ಮತ್ತು ಸಂಘಗಳ ಬೈಲಾ ಪ್ರಕಾರ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ಸಮಾಪನೆಗೊಳಿಸಲು ಕ್ರಮ ವಹಿಸಲಾಗಿದೆ. ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿಈ ಪ್ರಕಟಣೆಯ ಏಳು ದಿನಗಳೊಳಗಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಬಿ.ಎಲ್ .ಗೌಡ ಲೇಔಟ್ , ಚಿತ್ರದುರ್ಗಗೆ ಸಲ್ಲಿಸಲು ತಿಳಿಸಿದೆ.

ನಿಷ್ಕಿ್ರೕಯಗೊಂಡಿರುವ ಸಹಕಾರ ಸಂಘಗಳ ವಿವರ ಇಂತಿದೆ. ಚಿತ್ರದುರ್ಗ ತಾಲೂಕಿನ ಹಾಯ್ಕಲ್ , ಸಜ್ಜನಕೆರೆ, ಆಲಘಟ್ಟ ಅಂಚೆ ಚಿಕ್ಕೇನಹಳ್ಳಿ ಬೇವಿನಹಳ್ಳಿ ಕೋಳಿ ಸಾಕಾಣಿಕೆ ಮತ್ತು ಮಾರಾಟ ಸಹಕಾರ ಸಂಘ, ಭರಮಸಾಗರ ಹಿಂದುಳಿದ ಗಾಣಿದಾರರ ಕೋಳಿ ಸಾಕಾಣಿಕೆದಾರರ ಸಹಕಾರ ಸಂಘ, ಮಾಳಪ್ಪನಹಟ್ಟಿ ಉಣ್ಣೆ ಕೈಮಗ್ಗ ಮತ್ತು ಉತ್ಪಾದನಾ ಮಾರಾಟ ಸಹಕಾರ ಸಂಘ ಹಾಗೂ ಹಿರಿಯೂರು ತಾಲೂಕು ಸೊಂಡೆಕರೆ ಕನಕಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಮಾಪನೆಗೆ ಕ್ರಮವಹಿಸಲಾಗಿದೆ ಎಂದು ಚಿತ್ರದುರ್ಗ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

**