ಗಂಡಿಬಾಗಿಲು ಮಸೀದಿಯಲ್ಲಿಮಜ್ಲಿಸುನ್ನೂರು, ಇಫ್ತಾರ್ ಸಂಗಮ

Contributed bybkyashas2010@gmail.com|Vijaya Karnataka

ಗಂಡಿಬಾಗಿಲು ಹಿಮಾಯತುಲ್‌ ಇಸ್ಲಾಂ ಕಮಿಟಿ ಮತ್ತು ಕುತುಬಿಯ್ಯ ಜುಮಾ ಮಸೀದಿ ವತಿಯಿಂದ ಇಫ್ತಾರ್ ಸಂಗಮ ಹಾಗೂ ಮಜ್ಲಿಸುನ್ನೂರು ಕಾರ್ಯಕ್ರಮ ಶನಿವಾರ ಗಂಡಿಬಾಗಿಲು ಮಸೀದಿಯಲ್ಲಿ ನಡೆಯಿತು. ಸಮಸ್ತ ನೇತಾರ ಡಾ. ಕೆ.ಎಂ. ಶಾಹ್‌ ಉಸ್ತಾದ್‌ ಅವರ ಅನುಸ್ಮರಣೆ ನಡೆಯಿತು. ಸಯ್ಯದ್‌ ಜುನೈದ್‌ ಜಿಫ್ರಿ ತಂಙಳ್‌ ದುವಾಃ ನೆರವೇರಿಸಿದರು. ಅಬ್ದುಲ್‌ ರಜಾಕ್‌ ಸುಲ್ತಾನ್‌ ದಾರಿಮಿ ನೇತೃತ್ವದಲ್ಲಿ ಮಜ್ಲಿಸುನ್ನೂರು ನಡೆಯಿತು. ಹಲವು ಗಣ್ಯರು ಉಪಸ್ಥಿತರಿದ್ದರು.

iftar gathering and majlis in gandhibagilu mosque

ವಿಕ ಸುದ್ದಿಲೋಕ ಕಡಬ

ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಕಮಿಟಿ, ಕುತುಬಿಯ್ಯ ಜುಮಾ ಮಸೀದಿಯ ಆಶ್ರಯದಲ್ಲಿಸಮಸ್ತ ನೇತಾರ ಡಾ. ಕೆ.ಎಂ. ಶಾಹ್ ಉಸ್ತಾದ್ ಅವರ ಅನುಸ್ಮರಣೆ ಪ್ರಯುಕ್ತ ಇಫ್ತಾರ್ ಸಂಗಮ ಮತ್ತು ಮಜ್ಲಿಸುನ್ನೂರ್ ಕಾರ ್ಯಕ್ರಮ ಶನಿವಾರ ಗಂಡಿಬಾಗಿಲು ಮಸೀದಿಯಲ್ಲಿನಡೆಯಿತು.

ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಜುನೈದ್ ಜಿಫ್ರಿ ತಂಙಳ್ ದುವಾಃ, ಅನುಸ್ಮರಣೆ ಹಾಗೂ ತಹ್ ಲೀಲ್ ಸಮರ್ಪಣೆ ಮಾಡಿದರು. ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ರಜಾಕ್ ಸುಲ್ತಾನ್ ದಾರಿಮಿ ನೇತೃತ್ವದಲ್ಲಿಮಜ್ಲಿಸುನ್ನೂರು ನಿರ್ವಹಿಸಲಾಯಿತು.

ಗಂಡಿಬಾಗಿಲು ಮದ್ರಸದ ಸದರ್ ಮುಅಲ್ಲಿಂ ಶರೀಫ್ ದಾರಿಮಿ, ಕುತುಬಿಯ್ಯಾ ಜುಮಾ ಮಸೀದಿಯ ಸದರ್ ಅಮುಅದ್ದಿಂ ಬಶೀರ್ ದಾರಿಮಿ, ಕೆಮ್ಮಾರ ಹಿದಾಯತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಕೆ.ಕೆ. ಕಮಾಲ್ , ಉಪಾಧ್ಯಕ್ಷ ಎನ್ .ಎ. ಇಸಾಕ್ , ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಕಾರ ್ಯದರ್ಶಿ ಗಫಾರ್ ಹೇಂತಾರ್ , ಆತೂರು ಜಮಾಅತಿನ ಅಬ್ದುಲ್ ರಹಿಮಾನ್ ಮುಸ್ಲಿಯಾರ್ , ಪೊಡಿಕುಂಞಿ ನೀರಾಜೆ, ಕೆ.ಟಿ.ಸಿ. ಮಹಮ್ಮದ್ ಹಾಜಿ, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಎಸ್ . ಅಬ್ದುಲ್ ರಹಿಮಾನ್ , ಕಾರ ್ಯದರ್ಶಿ ನಝೀರ್ ಪೂರಿಂಗ, ಕೋಶಾಧಿಕಾರಿ ಹಸೈನಾರ್ ಹಾಜಿ, ಉಪಾಧ್ಯಕ್ಷ ಜಿ. ಮಹಮ್ಮದ್ ರಫೀಕ್ , ಪದಾಧಿಕಾರಿಗಳಾದ ಅಬ್ದುಲ್ ರಜಾಕ್ ಮರ್ವೇಲ್ , ಝಿಯಾದ್ , ಆದಂ ಹಾಜಿ ಎಸ್ ., ಇಸ್ಮಾಯಿಲ್ , ನೂಜೂಮುಲ್ ಇಸ್ಲಾಂ ಯಂಗ್ ಮೆನ್ಸ್ ಪದಾಧಿಕಾರಿಗಳಾದ ನಿಝಾರ್ , ಪಿ. ಲತೀಫ್ , ಶಾಕಿರ್ , ಝಕರಿಯಾ ನೇರೆಂಕಿ, ಎಸ್ ಕೆಎಸ್ ಎಸ್ ಎಫ್ ಪದಾಧಿಕಾರಿಗಳಾದ ಎಸ್ .ಪಿ. ಖಲಂದರ್ , ಇಸಾಕ್ ಬೊಲುಂಬುಡ, ಮಹಮ್ಮದ್ ಆಲಿ, ಆಶಿಫ್ ಉಪಸ್ಥಿತರಿದ್ದರು.

(ಗಂಡಿಬಾಗಿಲು ಮಸೀದಿಯಲ್ಲಿಇಫ್ತಾರ್ ಸಂಗಮ ಮತ್ತು ಮಜ್ಲಿಸುನ್ನೂರ್ ಕಾರ ್ಯಕ್ರಮ ನಡೆಯಿತು.ಫೋಟೋ........16ಕೆಡಿಬಿ ಜಿಬಿ)