ಕಿಕ್ಕರ್ : ಮಾಯಕೊಂಡದಲ್ಲಿಮಳೆ, ರೈತರು ಮಂದಹಾಸ
---
ಯುಗಾದಿಗೆ ವರುಣದೇವನ ಕೃಪೆ
ಮಾಯಕೊಂಡ: ದಾವಣಗೆರೆ ತಾಲೂಕು ಮಾಯಕೊಂಡ ಸುತ್ತಲು ಬುಧವಾರ ಯುಗಾದಿ ಆರಂಭದಲ್ಲೆ ಬಿರುಗಾಳಿ, ಗುಡುಗು, ಮಿಂಚು, ಆಲಿಕಲ್ಲುಸಹಿತ ಬಿರುಸಿನ ಮಳೆಯಾಗಿದೆ. ರೈತರ ಮೊಗದಲ್ಲಿಮಂದಹಾಸ ಮೂಡಿಸಿದೆ.
‘ಬಿಸಿಲಿನಿಂದ ತಾಪದಿಂದ ತತ್ತರಿಸಿದ್ದ ಜನತೆ ಕೊಂಚ ನಿರಾಳರಾದರು. ತಮ್ಮ ತೋಟಗಾರಿಕೆ ಬೆಳೆಗಳಿಗೆ ಈ ಮಳೆಯಿಂದ ಅನುಕೂಲವಾಗಿದೆ. ಹಬ್ಬವನ್ನು ಮಾಡುವುದು ಬಿಟ್ಟು ಈ ಅಧ್ವಾನದ ಕರೆಂಟ್ ನಲ್ಲಿನೀರು ಹಾಯಿಸಲು ಜಮೀನಿಗೆ ತೆರಳುವುದು ತಪ್ಪಿ ಖುಷಿಯಿಂದ ಹಬ್ಬ ಆಚರಿಸುತ್ತೇವೆ’ ಎನ್ನುತ್ತಾರೆ ರೈತರಾದ ಶ್ರೀನಿವಾಸ್ , ಹನುಮಂತ, ಅಂಜಿನಪ್ಪ, ಬಸವರಾಜ, ನಾಗರಾಜ.
ಪಾತಾಳ ಸೇರಿದ್ದ ಅಂತರ್ಜಲ:
ಕಳೆದ ವರ್ಷದ ಮಳೆ ರೈತರ ಬೆಳೆ ಬೆಳೆಯಲು ಮಾತ್ರ ಅನುಕೂಲವಾಗಿದ್ದು, ಯಾವುದೇ ಕೆರೆ ಕಟ್ಟೆಗಳು ತುಂಬದೆ ರೈತರ ಜಮೀನುಗಳ ಬೋರ್ ವೆಲ್ ಗಳಲ್ಲಿಅಂತರ್ಜಲ ಪಾತಾಳ ಸೇರಿ ಇನ್ನೇನು ಬಿಸಿಲ ಜಳಕ್ಕೆ ತಮ್ಮ ಅಡಕೆ ತೋಟಗಳು ಒಣಗುವ ಅಂಚಿಗೆ ತಲುಪುವಂತಾಗಿದೆ. ಮಳೆ ಬಂದಿದ್ದರಿಂದ ತಮ್ಮ ತೋಟಗಳಿಗೆ ಮರುಜನ್ಮ ನೀಡಿದಂತಾಗಿದೆ.
ಖಾಲಿಯಾಗದ ಮೆಕ್ಕೆಜೋಳ:
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿಅಧಿಕವಾಗಿ ಬಿತ್ತನೆ ನಡೆದಿತ್ತು. ಈ ಬಾರಿ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೆ ರೈತರ ಜಮೀನಿನಲ್ಲಿಹಾಗೆಯೇ ಉಳಿದಿರುವುದು ವಿಪರ್ಯಾಸ.
---
18 ಎಂವೈಕೆ 1
ಮಾಯಕೊಂಡದಲ್ಲಿಬುಧವಾರ ಸಂಜೆ ಉತ್ತಮ ಮಳೆಯಾಯಿತು.

