31ಮಹೇಶ5
ಇಂದು ಅನುಪಮ ಸಹಕಾರಿ ಪ್ರಶಸ್ತಿ ಪ್ರದಾನ
ವಿಕ ಸುದ್ದಿಲೋಕ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಏ.1ರಂದು ಸಂಜೆ 6ಕ್ಕೆ ಪ್ರೊ.ಎಸ್ .ಎಸ್ .ದೇಸಾಯಿ ದತ್ತಿ ಅಂಗವಾಗಿ ಅನುಪಮ ಸಹಕಾರಿ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಆಯೋಜಿಸಲಾಗಿದೆ. ಕವಿವಿ ಇಂಗ್ಲೀಷ ವಿಭಾಗದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷತೆ ವಹಿಸುವರು. ಧಾರವಾಡ ಕೆ.ಸಿ.ಸಿ. ಬ್ಯಾಂಕ್ ವಿಶ್ರಾಂತ ಪ್ರಧಾನ ವ್ಯವಸ್ಥಾಪಕ ಎಸ್ .ಜಿ.ಪಾಟೀಲ ಉತ್ತರ ಕರ್ನಾಟಕದ ಆರ್ಥಿಕ ಅಭಿವೃದ್ಧಿಯಲ್ಲಿಕೆ.ಸಿ.ಸಿ. ಬ್ಯಾಂಕಿನ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡುವರು. ಧಾರವಾಡ ಶ್ರೀ ಮೃತ್ಯುಂಜಯ ಅರ್ಬನ್ ಕೋ. ಆಪ್ ಸೊಸೈಟಿ ಲಿ. ಮಾಜಿ ಅಧ್ಯಕ್ಷ ಸಿ.ಎಸ್ .ಪಾಟೀಲ ಅವರಿಗೆ ಅನುಪಮ ಸಹಕಾರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಧಾರವಾಡದ ಶೋಭಾ ಎಸ್ . ದೇಸಾಯಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

