ಬೈಕ್ ಕಳ್ಳತನ : ಆರೋಪಿ ಬಂಧನ
ವಿಕ ಸುದ್ದಿಲೋಕ ಗದಗ
ನಗರದಲ್ಲಿಸರಣಿ ಬೈಕ್ ಕಳ್ಳತನ ಹಾಗೂ ದರೋಡೆ ಕೃತ್ಯ ಎಸಗುತ್ತಿದ್ದ ಕಳ್ಳನೊಬ್ಬನನ್ನು ಬಂಧಿಸುವಲ್ಲಿಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯವರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಅಂದಾಜು 1.35 ಲಕ್ಷ ರೂ.ಮೌಲ್ಯದ ನಾಲ್ಕು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮಧುಸೂದನ ತಂದೆ ಷಣ್ಮುಕಪ್ಪ ಕುಂತಿಕಲ (25) ಎಂದು ಗುರುತಿಸಲಾಗಿದೆ.
2025 ನವೆಂಬರ್ 5ರಂದು ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಹಿರೋ ಆಕ್ಟಿವಾ ಬೈಕ್ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು , ಮಾ. 30ರಂದು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ.
ಆರೋಪಿಯು ಗದಗನಲ್ಲಿ1, ಸಿಂಧಗಿಯಲ್ಲಿ2 ಹಾಗೂ ಗಂಗಾವತಿಯಲ್ಲಿ1 ಸೇರಿದಂತೆ ಒಟ್ಟು ನಾಲ್ಕು ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಈತ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆದಿದ್ದ ಮಹಿಳೆಯೊಬ್ಬರ ತಾಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣದಲ್ಲೂಭಾಗಿಯಾಗಿರುವುದು ಪತ್ತೆಯಾಗಿದೆ. ಬಂಧಿತನಿಂದ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಪೊಲೀಸ್ ಅಧೀಕ್ಷಕ ರೋಹನ ಜಗದೀಶ ಅವರು ಪ್ರಶಂಸೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿದ್ದಾರೆ.
31ಸಲೀಮ9-
ಗದಗನಲ್ಲಿಬೈಕ್ ವಶಪಡಿಸಿಕೊಂಡ ಬೆಟಗೇರಿ ಬಡಾವಣೆ ಠಾಣೆ ಪೊಲೀಸರು.

