ಅಭಿವೃದ್ಧಿ ಹೊಂದಿದ ಕೇರಳ ಸೃಷ್ಟಿಸಲು ಬಿಜೆಪಿ ಸಿದ್ಧ: ಎಂ.ಎಲ್ .ಅಶ್ವಿನಿ

Contributed bygangadhar.korekkana@gmail.com|Vijaya Karnataka

ಕಾಸರಗೋಡು ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್‌. ಅಶ್ವಿನಿ ಕುಂಬ್ಡಾಜೆ ಅವರು ಬಿಜೆಪಿ ಅಭಿವೃದ್ಧಿ ಹೊಂದಿದ ಕೇರಳವನ್ನು ಸೃಷ್ಟಿಸಲು ಸಿದ್ಧ ಎಂದು ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ್‌ ಬಿಡುಗಡೆ ಮಾಡಿದ ಮಾರ್ಗಸೂಚಿಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳಾಗಿವೆ. ಕಲ್ಯಾಣ ಪಿಂಚಣಿ ಹೆಚ್ಚಳ, ಆರೋಗ್ಯ ಮತ್ತು ಆಹಾರ ಭದ್ರತಾ ಕಾರ್ಡ್‌ ಹಾಗೂ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಯ ಖಾತರಿ ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸಲಿದೆ.

bjps promise of development in kumbdaje ml ashwini

ಕುಂಬ್ಡಾಜೆ : ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಬಿಡುಗಡೆ ಮಾಡಿದ ಮಾರ್ಗಸೂಚಿಗಳು ಅಭಿವೃದ್ಧಿ ಹೊಂದಿದ ಕೇರಳವನ್ನು ಸೃಷ್ಟಿಸಲು ಬಿಜೆಪಿ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ತೋರಿಸುತ್ತದೆ ಎಂದು ಕಾಸರಗೋಡು ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಎಂ.ಎಲ್ . ಅಶ್ವಿನಿ ಹೇಳಿದ್ದಾರೆ.

ಕುಂಬ್ಡಾಜೆ ಪಂಚಾಯಿತಿಯ ಗಾಡಿಗುಡ್ಡೆಯಲ್ಲಿನಡೆದ ಕುಟುಂಬ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಎನ್ ಡಿಎ ಮಾರ್ಗಸೂಚಿಯಂತೆ ಕಲ್ಯಾಣ ಪಿಂಚಣಿಯನ್ನು 3,000 ರೂ.ಗಳಿಗೆ ಹೆಚ್ಚಿಸುವುದು, ಮಾಸಿಕ 2,500 ರೂ.ಗಳ ಆರೋಗ್ಯ ಮತ್ತು ಆಹಾರ ಭದ್ರತಾ ಕಾರ್ಡ್ ಒದಗಿಸುವುದು ಮತ್ತು ಎಲ್ಲಕೇರಳಿಗರಿಗೆ ಆಯುಷ್ಮಾನ್ ಭಾರತ್ ವ್ಯಾಪ್ತಿಯನ್ನು ಖಾತರಿಪಡಿಸುವುದು ಸೇರಿದಂತೆ ಅಭಿವೃದ್ಧಿ ಹೊಂದಿದ ಕೇರಳ ಮಾರ್ಗಸೂಚಿಗಳಲ್ಲಿನೀಡಲಾದ ಭರವಸೆಗಳು ಬಡ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವನ್ನು ಕಲ್ಪಿಸಲಿದೆ ಎಂದು ಅವರು ಹೇಳಿದರು.

ಬೂತ್ ಅಧ್ಯಕ್ಷ ದಯಾನಂದ ರೈ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್ . ಯಶೋದಾ, ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಜನನಿ, ಸುಕುಮಾರ ಕುದ್ರೆಪ್ಪಾಡಿ, ವಾರ್ಡ್ ಸದಸ್ಯ ಕೊರಗಪ್ಪ, ಇತರರಾದ ಚಿದಾನಂದ ರೈ, ರಾಜೇಶ್ ಶೆಟ್ಟಿ ಮತ್ತು ಹಿರಿಯ ಕಾರ್ಯಕರ್ತರು ಮಾತನಾಡಿದರು.

ಚಿತ್ರ:31ಕೆಎಸ್ ಕುಂಬ್ಡಾಜೆ- ಕುಂಬ್ಡಾಜೆಯಲ್ಲಿಎಂ.ಎಲ್ . ಅಶ್ವಿನಿ ಕುಟುಂಬ ಸಭೆಯಲ್ಲಿಮಾತನಾಡಿದರು.