ವಿಕ ಸುದ್ದಿಲೋಕ ಸುರತ್ಕಲ್
ಸೂರಿಂಜೆ ಬೊಳ್ಳಾರಗೋಳಿಯ ಬಾಕಿಮಾರುಗದ್ದೆಯಲ್ಲಿಏ.2ರಿಂದ 8ರ ವರೆಗೆ ಪಂಚದೈವಗಳ ನೇಮೋತ್ಸವ ನಡೆಯಲಿದೆ. ಇದೇ ನೇಮೋತ್ಸವ ಸುಮಾರು 65 ವರ್ಷ ಹಿಂದೆ ನಡೆದಿದ್ದು, ಪ್ರಶ್ನಾ ಚಿಂತನೆಯಲ್ಲಿಕಂಡು ಬಂದ ಪ್ರಕಾರ ಈಗ ನೇಮೋತ್ಸವ ನಡೆಸಲಾಗುತ್ತಿದೆ ಎಂದು ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ ಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.
ಮಿತ್ತೋಡಿ ಅರಸುಮನೆ ಪೈವ ಅಶೋಕ ಹೆಗ್ಡೆ (ಗಡಿ ಪ್ರಧಾನರು) ಕುತ್ತೆತ್ತೂರು, ಗ್ರಾಮಸ್ಥರು, ತಿಬಾರ್ ಗುತ್ತಿನಾರ್ ಉಮೇಶ್ ಎನ್ . ಶೆಟ್ಟಿ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಗುತ್ತು ಮನೆತನದವರು, ದೇಲಂತಬೆಟ್ಟು ಗ್ರಾಮದ ಹತ್ತು ಸಮಸ್ಥರು, ಪಂಜದಗುತ್ತು ಮನೆತನದವರು, ಎಲ್ಲವರ್ಗದ ಗುತ್ತು ಮನೆತನದವರು, ಬೊಳ್ಳಾರಗುತ್ತು ಕುಟುಂಬಸ್ಥರ ಸಹಕಾರದಲ್ಲಿನೇಮ ನಡೆಯುತ್ತಿದೆ ಎಂದರು.
ಏ.2ರಂದು ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಏ.3ರಂದು ಸಂಜೆ ಪಂಚ ದೈವಗಳ ಭಂಡಾರ ಆಗಮನ, ರಾತ್ರಿ 7ಕ್ಕೆ ಪಂಚ ದೈವಗಳ ದರ್ಶನ, ಏ.4ರಂದು ಬೆಳಗ್ಗೆ ಶಿಬರೂರು ಶ್ರೀ ಕೋಡ್ದಬ್ಬು ದೈವದ ನೇಮೋತ್ಸವ, ರಾತ್ರಿ ಶಿಬರೂರು ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ, ಏ.5ರಂದು ರಾತ್ರಿ ಜಂತಬೆಟ್ಟು ಶ್ರೀ ಬಂಟ ಸಾರಾಳ ಧೂಮಾವತಿ ದೈವಗಳ ನೇಮೋತ್ಸವ, ಶ್ರೀ ಕೊಡಪದ ಪಂಜುರ್ಲಿ ನೇಮೋತ್ಸವ, ಏ.6ರಂದು ಕಲ್ಲಂಜಬಾಳಿಕೆ ಕಾಂತೇರಿ ಧೂಮಾವತಿ ಬಂಟ ದೈವದ ನೇಮೋತ್ಸವ, ಏ.7ರಂದು ಪಂಜ ಪುಂಡು ಜಾರಿಗೆ ಶ್ರೀ ಜಾರಂದಾಯ ಬಂಟ ದೈವದ ನೇಮೋತ್ಸವ, ರಾತ್ರಿ 2 ಗಂಟೆಗೆ ಶ್ರೀ ಕೋಡ್ದಬ್ಬು, ಶ್ರೀ ಜಾರಂದಾಯ ದೈವದ ಭೇಟಿ ನಡೆಯಲಿದೆ. ಏ.8ರಂದು ಭಂಡಾರ ನಿರ್ಗಮನ, ಏ.4ರಂದು ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು, ಗೌರವಾಧ್ಯಕ್ಷ ಅನಿಲ್ ಶೆಟ್ಟಿ ತೇವು, ಯೋಗೀಶ್ ಮುಂಬಯಿ, ಕಾರ್ಯಾಧ್ಯಕ್ಷ ಮನೋಹರ್ ಶೆಟ್ಟಿ ಸೂರಿಂಜೆ, ಸ್ವಾಗತ ಸಮಿತಿ ಸಂಚಾಲಕ ಮೋಹನ್ ದಾಸ್ ಶೆಟ್ಟಿ ಬೊಳ್ಳಾರಗುತ್ತು, ಮಾಧ್ಯಮ ಸಮಿತಿಯ ಪುಷ್ಪರಾಜ್ ಶೆಟ್ಟಿ ಮಧ್ಯ ಉಪಸ್ಥಿತರಿದ್ದರು.

