ಬೈಕ್ ಅಪಘಾತ : ಪತ್ರಿಕೆ ವಿತರಕ ಸಾವು
ವಿಕ ಸುದ್ದಿಲೋಕ ಹೊಸನಗರ
ತಾಲೂಕಿನ ಕಚ್ಚಿಗೆಬೈಲು ನಿವಾಸಿ ಪತ್ರಿಕಾ ವಿತರಕ ಶಂಕರಶೆಟ್ಟಿ (65) ಬೈಕ್ ಅಪಘಾತದಲ್ಲಿಮೃತಪಟ್ಟಿದ್ದಾರೆ. ಗುರುವಾರ ತಮ್ಮ ಮನೆಯಿಂದ ದೇವಸ್ಥಾನಕ್ಕೆ ಮೊಪೆಡ್ ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶಂಕರಶೆಟ್ಟಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟರು.
ಅವರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ.
ಕಡು ಬಡತನದ ಹಿನ್ನೆಲೆಯ ಶಂಕರಶೆಟ್ಟಿ, ಹಿಂದೆ ಮಾಸ್ತಿಕಟ್ಟೆ, ಹೊಸನಗರ ಪಟ್ಟಣ ಸೇರಿದಂತೆ ಹಲವು ಕಡೆಗಳಲ್ಲಿಹೋಟೆಲ್ ಗಳಲ್ಲಿಅಡುಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಕಚ್ಚಿಗೆಬೈಲಿನಲ್ಲಿನೆಲೆಸಿದ ಬಳಿಕ ಕ್ಯಾಂಟೀನ್ ನಡೆಸುತ್ತಾ, ವಿವಿಧ ದಿನ ಪತ್ರಿಕೆಗಳ ವಿತರಣೆ ಮಾಡುತಿದ್ದರು. ಕಳೆದ ಅವಧಿಯಲ್ಲಿಮಾರುತಿಪುರ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಒಂದು ವರ್ಷದ ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ಥಳೀಯ ಶಾಲಾಭಿವೃದ್ಧಿಗೂ ಶ್ರಮಿಸಿದ್ದರು. ನೇರ ನಿಷ್ಠುರ ನಡೆ ನುಡಿ ಹೊಂದಿದ್ದ ಅವರು ಸ್ಥಳೀಯ ಜನರ ಸಂಕಷ್ಟಕ್ಕೆ ಸದಾ ಮುಂದಿರುತ್ತಿದ್ದರು. ಸಾಮಾಜಿಕ ಕಾಳಜಿಯಿಂದಾಗಿ ಅಪಾರ ಜನಮನ್ನಣೆ ಗಳಿಸಿದ್ದರು.
ಸಂತಾಪ:
ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಹರತಾಳು ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಎಚ್ .ಬಿ.ಚಿದಂಬರ, ಭಂಟರ ಸಂಘದ ಅಧ್ಯಕ್ಷ ದೇವಾಕರ್ ಶೆಟ್ಟಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಫೋಟೋ:
1ಎಚ್ ಒಎಸ್ ಪಿ6: ಶಂಕರಶೆಟ್ಟಿ

