ವಿಕ ಸುದ್ದಿಲೋಕ ಉಡುಪಿ
ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಹಾಗೂ ನಕ್ಸಲ್ ನಿಗ್ರಹ ಪಡೆ ಕಾರ್ಕಳ, ಅಲೋಕ ವಿಷನ್ ಫೌಂಡೇಶನ್ ಬೆಂಗಳೂರು ಅವರ ಸಹಭಾಗಿತ್ವದಲ್ಲಿಇತ್ತೀಚಿಗೆ ಕಾರ್ಕಳ ಕುಕ್ಕುಂದೂರಿನ ನಕ್ಸಲ್ ನಿಗ್ರಹ ಪಡೆ ತರಬೇತಿ ಕೇಂದ್ರದಲ್ಲಿಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆದಿದ್ದು, ಇದರಲ್ಲಿಉಚಿತ ಕನ್ನಡಕ್ಕೆ ಆಯ್ಕೆಯಾದ 60 ಜನರಿಗೆ ಮಾ.26ರಂದು ಕನ್ನಡಕ ವಿತರಿಸಲಾಯಿತು.
ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು, ಎಂಡಿ ರಶ್ಮಿ ಕೃಷ್ಣಪ್ರಸಾದ್ , ಪೊಲೀಸ್ ಉಪ ಅಧಿಕ್ಷಕ ಬೆಳ್ಳಿಯಪ್ಪ ಹಾಗೂ ಎಸಿಎಫ್ ಸುಮಾ ಉಪಸ್ಥಿತರಿದ್ದರು. ಮಧು ಕುಮಾರ್ ಕಾರ್ಯಕ್ರಮ ನಿರೂಪಿಸಿ, ರಾಘವೇಂದ್ರ ವಂದಿಸಿದರು.
ಫೋಟೊ 31ಯುಕೆ ಕೃಷ್ಣ : ಕನ್ನಡಕ ವಿತರಣೆ

