ತಿಂಗಳಾಡಿ ದೇವಗಿರಿ ಜೀರ್ಣೋದ್ಧಾರಕ್ಕೆ ಅನುದಾನ: ಶಾಸಕ ಅಶೋಕ್ ರೈ ಭರವಸೆ

Contributed bysudhakara.kannadamoole@timesofindia.com|Vijaya Karnataka

ತಿಂಗಳಾಡಿ ದೇವಗಿರಿ ಭಜನಾ ಮಂದಿರದ ಜೀರ್ಣೋದ್ಧಾರಕ್ಕೆ ಶಾಸಕ ಅಶೋಕ್‌ ರೈ ಅವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಒದಗಿಸಲಾಗುವುದು. ತಡೆಗೋಡೆ ನಿರ್ಮಾಣಕ್ಕೂ ಪ್ರತ್ಯೇಕ ಅನುದಾನ ದೊರಕಲಿದೆ. ಶೀಘ್ರದಲ್ಲೇ ಶಾಸಕರು ದೇವಗಿರಿಗೆ ಭೇಟಿ ನೀಡಲಿದ್ದಾರೆ. ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ಅಂದಾಜು ಪಟ್ಟಿ ಸಿದ್ಧಪಡಿಸಲಿದ್ದಾರೆ.

funding for devagiri bhajana mandir renovation with assurance from mla ashok rai

ವಿಕ ಸುದ್ದಿಲೋಕ ಪುತ್ತೂರು

ತಾಲೂಕಿನ ತಿಂಗಳಾಡಿಯ ದೇವಗಿರಿ ಭಜನಾ ಮಂದಿರದ ಜೀರ್ಣೋದ್ಧಾರ ಕ್ಕೆ ಸಂಬಂಧಿಸಿದಂತೆ ದೇವತಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಶಾಸಕ ಅಶೋಕ್ ರೈ ಅವರನ್ನು ಭೇಟಿ ಮಾಡಿ ಪುನರುತ್ಥಾನ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕರನ್ನು ಗೌರವಿಸಿ ಅಭಿನಂದಿಸಲಾಯಿತು. ಪುನರುತ್ಥಾನ ಯೋಜನೆಗೆ ಗರಿಷ್ಠ ಪ್ರಮಾಣದ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ದೇವಗಿರಿಯ ಯೋಜನೆಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ ಶಾಸಕರು, ದೇವಗಿರಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿ ಪ್ರತ್ಯೇಕ ಅನುದಾನ ಸರಕಾರದಿಂದ ಒದಗಿಸಿ ಕೊಡುವುದಾಗಿ ಹೇಳಿದರು. ಶೀಘ್ರದಲ್ಲೇ ದೇವಗಿರಿಗೆ ಭೇಟಿ ನೀಡುವುದಾಗಿ ತಿಳಿಸಿದ ಶಾಸಕರು, ತಡೆಗೋಡೆ ಕಾಮಗಾರಿ ಸಂಬಂಧ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದರು.

ಶಾಸಕರನ್ನು ಭೇಟಿ ಮಾಡಿದ ನಿಯೋಗದಲ್ಲಿಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ಡೆಕ್ಕಳ ರಾಮಯ್ಯ ರೈ ತಿಂಗಳಾಡಿ, ಗೌರವಾಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಮಿತ್ರಂಪಾಡಿ ಜಯರಾಮ ರೈ ಅಬುದಾಭಿ, ದೇವತಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆದಂಬಾಡಿ ಬೀಡು ಭಾಸ್ಕರ ಬಳ್ಳಾಲ್ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿ ಗುತ್ತು, ಸಂಚಾಲಕ ಸುಧಾಕರ ಸುವರ್ಣ ತಿಂಗಳಾಡಿ, ಕಾರ್ಯದರ್ಶಿಗಳಾದ ಶರತ್ ಕುಮಾರ್ ಗುತ್ತು, ಸುರೇಶ್ ಕುಮಾರ್ ತಿಂಗಳಾಡಿ, ಜತೆ ಕಾರ್ಯದರ್ಶಿ ಮಿತ್ರಂಪಾಡಿ ಪ್ರಜ್ವತ್ ರೈ, ಕೋಶಾಧಿಕಾರಿ ಸೂರ್ಯಪ್ರಸನ್ನ ರೈ ಎಂಡೆಸಾಗು, ಉಪಾಧ್ಯಕ್ಷರಾದ ಬಾಳಾಯ ಜಯರಾಮ ರೈ, ಚಳ್ಳಂಗಾರು ಚಿದಾನಂದ ಗೌಡ ಕಜೆ, ಗೌರವ ಸಲಹೆಗಾರರಾದ ಮಾದೋಡಿ ಭಾಸ್ಕರ ರೈ ನಂಜೆ, ಎಸ್ . ಪ್ರಸನ್ನ ರೈ ಮಜಲುಗದ್ದೆ, ಸದಸ್ಯರಾದ ನಂದಕುಮಾರ್ ಕನ್ನಡಮೂಲೆ, ಚಂದ್ರಶೇಖರ ಗೌಡ ಎಂಡೆಸಾಗು ಉಪಸ್ಥಿತರಿದ್ದರು.

ಫೊಟೋ: 31ಪಿ- ದೇವಗಿರಿ

ಶಾಸಕ ಅಶೋಕ್ ರೈ ಅವರನ್ನು ದೇವಗಿರಿ ಭಜನಾ ಮಂದಿರದ ಪರವಾಗಿ ಗೌರವಿಸಲಾಯಿತು.

(ಗಮನಿಸಿ: ಈ ಸುದ್ದಿಯಲ್ಲಿಯಾವುದೇ ಕತ್ತರಿ ಪ್ರಯೋಗ ಮಾಡದೆ ಪ್ರಕಟಿಸಲು ಮನವಿ.)