ರಥಕ್ಕೆ ಗರುಡ ಪ್ರದಕ್ಷಿಣೆ

Contributed bysri.vknews@gmail.com|Vijaya Karnataka

ಲಕ್ಕೂರಿನ ಚಿಕ್ಕತಿರುಪತಿಯಲ್ಲಿ ನಡೆದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಎರಡು ಗರುಡ ಪಕ್ಷಿಗಳು ರಥಕ್ಕೆ ಪ್ರದಕ್ಷಿಣೆ ಹಾಕಿದವು. ಇದು ಭಕ್ತರಿಗೆ ವಿಶೇಷ ಅನುಭವ ನೀಡಿತು. ಈ ಹಿಂದೆ ಒಂದು ಗರುಡ ಪಕ್ಷಿ ಬರುತ್ತಿತ್ತು. ರಥೋತ್ಸವಕ್ಕೆ ಡೊಳ್ಳು ಕುಣಿತ, ವೀರಗಾಸೆ, ನಂದಿ ಧ್ವಜ, ಕೋಲಾಟ, ತಮಟೆ ವಾದನ ಸೇರಿದಂತೆ ಹಲವು ಕಲಾ ತಂಡಗಳು ಮೆರುಗು ನೀಡಿದವು.

garuda circumambulates delighting devotees

ಲಕ್ಕೂರು: ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದ ವೇಳೆ ಎರಡು ಗರುಡ ಪಕ್ಷಿಗಳು ರಥೋತ್ಸವಕ್ಕೆ ಹಲವು ಬಾರಿ ಪ್ರದಕ್ಷಿಣೆ ಹಾಕುವ ಮೂಲಕ ಭಕ್ತರನ್ನು ಪುಳಕಿತರನ್ನಾಗಿಸಿತು. ಈ ಹಿಂದಿನ ವರ್ಷಗಳಲ್ಲಿಒಂದು ಗರುಡ ಪಕ್ಷಿ ಮಾತ್ರ ಬರುತ್ತಿತ್ತು. ಆದರೆ 2 ವರ್ಷಗಳಿಂದ ಎರಡು ಗರುಡ ಪಕ್ಷಿಗಳು ಆಮಿಸಿದ್ದು ವಿಶೇಷವಾಗಿತ್ತು. ಅಪಾರ ಭಕ್ತ ಸಮೂಹದ ನಡುವೆ ನಡೆದ ಬ್ರಹ್ಮರಥೋತ್ಸವದಲ್ಲಿಪ್ರತಿವರ್ಷದಂತೆ ರಥೋತ್ಸವ ಪ್ರಾರಂಭಕ್ಕೂ ಮುನ್ನ ಗರುಡ ಪಕ್ಷಿ ರಥದ ಮೇಲೆ ಹಾರಾಟ ಮಾಡಿತು. ನಂತರ ಸರ್ಜಾಪುರ ಮುಖ್ಯರಸ್ತೆಯ ತಿರುವಿನಲ್ಲೂಸಹ ಮತ್ತೊಮ್ಮೆ ಆಗಮಿಸಿದ ಗರುಡ ಪಕ್ಷಿ ರಥದ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಿ ನಂತರ ಮಾಯವಾಯಿತು.

ರಥೋತ್ಸವಕ್ಕೆ ನಾನಾ ಕಲಾ ತಂಡಗಳು ಮೆರುಗು ನೀಡಿದವು. ಡೊಳ್ಳು ಕುಣಿತ, ವೀರಗಾಸೆ, ನಂದಿ ಧ್ವಜ, ಕೋಲಾಟ, ತಮಟೆ ವಾದನ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವು.

31 ಲಕ್ಕೂರು ಪೋಟೊ 3. ಚಿಕ್ಕತಿರುಪತಿಯ ಶ್ರೀಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಸಂದರ್ಭದಲ್ಲಿಗರುಡ ಪಕ್ಷಿ ಆಗಮಿಸಿ ಪ್ರದಕ್ಷಿಣೆ ಹಾಕುತ್ತಿರುವುದು.