ನಾಟಕಗಳಿಂದ ಬದಲಾವಣೆಗೆ ಪ್ರೇರಣೆ

Contributed byphanumanthu14@gmail.com|Vijaya Karnataka

ಯಾದಗಿರಿಯಲ್ಲಿ ಮೂರು ದಿನಗಳ ಶಿವಸಂಚಾರ ನಾಟಕೋತ್ಸವ ಉದ್ಘಾಟನೆಗೊಂಡಿತು. ಸಾಮಾಜಿಕ ಬದಲಾವಣೆಯ ಸಂದೇಶ ಸಾರುವ ನಾಟಕಗಳು ಪ್ರೇರಣೆ ನೀಡುತ್ತವೆ ಎಂದು ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಚಿತ್ರದುರ್ಗದ ಸಾಣೆಹಳ್ಳಿ ಶಿವಕುಮಾರ ಶ್ರೀಗಳ ತಂಡ ನಾಟಕಗಳ ಮೂಲಕ ಬದಲಾವಣೆ ತರುವಲ್ಲಿ ಕೊಡುಗೆ ನೀಡುತ್ತಿದೆ. ವೀರಶೈವ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಸವರಾಜಪ್ಪ ಜೈನ್‌ ತಿಳಿಸಿದರು. ಹಾಸ್ಯ ಕಲಾವಿದ ಬಸವರಾಜ ಮಹಾಮನಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

inspiration for change and society building through theatre

31ವೈಡಿಆರ್ 4

ಯಾದಗಿರಿಯಲ್ಲಿ3 ದಿನಗಳ ಶಿವಸಂಚಾರ ನಾಟಕೋತ್ಸವ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು.

3 ದಿನಗಳ ಶಿವಸಂಚಾರ ನಾಟಕೋತ್ಸವ ಉದ್ಘಾಟನೆ

ನಾಟಕಗಳಿಂದ ಬದಲಾವಣೆಗೆ ಪ್ರೇರಣೆ

ವಿಕ ಸುದ್ದಿಲೋಕ ಯಾದಗಿರಿ

ಸಾಮಾಜಿಕ ಬದಲಾವಣೆಯ ಸಂದೇಶ ಸಾರುವ ನಾಟಕಗಳು ಬದಲಾವಣೆಗೆ ಕೂಡ ಪ್ರೇರಣೆ ನೀಡುತ್ತವೆ ಎಂದು ಗುರುಮಠಕಲ್ ಖಾಸಾಮಠದ ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಶಹಾಪುರ ಪೇಟೆ (ಶರಣ ನಗರ) ಸಿನ್ನೂರ ಜಿನ್ ಆವರಣದಲ್ಲಿಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಾಗೂ ವೀರಶೈವ ಲಿಂಗಾಯತ ಸಮಾಜದ ಜಂಟಿ ಆಶ್ರಯದಲ್ಲಿಆಯೋಜಿಸಲಾಗಿರುವ 3 ದಿನಗಳ ಶಿವಸಂಚಾರ ನಾಟಕೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿದರು.

ಚಿತ್ರದುರ್ಗದ ಸಾಣೆಹಳ್ಳಿ ಶಿವಕುಮಾರ ಶ್ರೀಗಳ ನೇತೃತ್ವದ ಶಿವಸಂಚಾರ ನಾಟಕ ತಂಡ ಬದಲಾವಣೆ ತರುವ ನಿಟ್ಟಿನಲ್ಲಿತನ್ನ ಕೊಡುಗೆ ನೀಡುತ್ತಿದೆ ಎಂದು ನುಡಿದರು.

ವೀರಶೈವ ಮಹಾಸಭೆ ಮಾಜಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ಜೈನ್ ಮಾತನಾಡಿ, ವೀರಶೈವ ಸಮಾಜ ಜಿಲ್ಲೆಯ ವಿವಿಧೆಡೆಯಲ್ಲಿಕ್ರಿಯಾಶೀಲವಾಗಿದ್ದರೂ ಯಾದಗಿರಿಯಲ್ಲಿಒಣಪ್ರತಿಷ್ಠೆಯ ಕಾರಣದಿಂದ ಕ್ಷೀಣವಾಗಿದೆ. ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು. ತೀರ ಕನಿಷ್ಟ ಮಟ್ಟಕ್ಕೆ ಹೋಗಿರುವುದಕ್ಕೆ ಅವಲೋಕನ ಮಾಡಿಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದರು.

ವೈಜ್ಞಾನಿಕ ಪರಿಷತ್ತು ಹಾಗೂ ಸಮಾಜ ಜಂಟಿಯಾಗಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಲಿ ಎಂದರು. ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಹಿಂದೆ ನೋಡೋರು ಜೆಗ್ಗಿ (ಬಹಳ) ಇದ್ದರು, ಮಾಡೋರು (ಅಭಿನಯಿಸುವರು) ಕಮ್ಮಿ ಇದ್ದರು. ಈಗ ಮಾಡೋರು ಜಾಸ್ತಿ ಆಗಿ ನೋಡೋರು ಕಮ್ಮಿ ಆಗಿದ್ದಾರೆ ಎಂದು ಹಾಸ್ಯ ಮಿಶ್ರಿತ ಸತ್ಯ ಸಂಗತಿ ಬಿಚ್ಚಿಟ್ಟರು.

ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ ಉದ್ಘಾಟಿಸಿದರು. ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿದರು. ವೇದಿಕೆ ಮೇಲೆ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಹೇಶಚಂದ್ರ ವಾಲಿ, ರವಿಶಂಕರ್ ಸಿನ್ನೂರ್ ಸಂಗಪ್ಪ ಲಾಳಸಂಗಿ, ಹಿರಿಯ ಚಿಂತಕ ವೆಂಕಪ್ಪ ದು ಅಲೆಮನಿ, ಪತ್ರಕರ್ತರ ಧ್ವನಿ ಸಂಘದ ಜಿಲ್ಲಾಧ್ಯಕ್ಷ ಇಂದುಧರ ಸಿನ್ನೂರ ಇದ್ದರು. ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ ಅಧ್ಯಕ್ಷತೆ ವಹಿಸಿದ್ದರು. ಜಗದೀಶ್ ನೂಲಿನವರ್ ನಿರೂಪಿಸಿದರು. ಶಿಕ್ಷಕಿ ಭಾಗ್ಯವಂತಿ ಕೆಂಭಾವಿ ವಂದಿಸಿದರು.