ಚತುರತೆಯ ನಾಯಕ ಜ.ತಿಮ್ಮಯ್ಯ

Contributed bynasirmnkodagu@gmail.com|Vijaya Karnataka

ಮಡಿಕೇರಿಯಲ್ಲಿ ಪದ್ಮಭೂಷಣ ಜನರಲ್‌ ಕೆ.ಎಸ್‌.ತಿಮ್ಮಯ್ಯ ಅವರ ಜನ್ಮದಿನ ಆಚರಿಸಲಾಯಿತು. ಶಾಸಕ ಎ.ಎಸ್‌.ಪೊನ್ನಣ್ಣ ಅವರು ಜನರಲ್‌ ತಿಮ್ಮಯ್ಯ ಅವರನ್ನು 2ನೇ ಮಹಾಯುದ್ಧ ಮತ್ತು 1948ರ ಕಾಶ್ಮೀರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚತುರ ನಾಯಕ ಎಂದು ಬಣ್ಣಿಸಿದರು. ಅವರ ಸೇವಾ ಸಾಧನೆ ಸ್ಮರಿಸಲಾಯಿತು. ಪೊಲೀಸ್ ಇಲಾಖೆಗೂ ಅವರ ಕೊಡುಗೆ ಮಾದರಿಯಾಗಿದೆ. ದೇಶದ ರಕ್ಷಣೆಗಾಗಿ ಅವರು ಸೇನೆಯನ್ನು ಕಟ್ಟಿದ್ದರು.

j timmayya the intelligent leader of the indian army

2ನೇ ಮಹಾಯುದ್ಧ , 1948ರ ಕಾಶ್ಮೀರ ಯುದ್ಧದಲ್ಲಿಪ್ರಮುಖ ಪಾತ್ರ ವಹಿಸಿದ್ದ ವೀರ ಸೇನಾನಿ: ಎ.ಎಸ್ .ಪೊನ್ನಣ್ಣ ಬಣ್ಣನೆ

ವಿಕ ಸುದ್ದಿಲೋಕ ಮಡಿಕೇರಿ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪದ್ಮಭೂಷಣ ಜನರಲ್ ಕೆ.ಎಸ್ .ತಿಮ್ಮಯ್ಯ ಅವರ ಜನ್ಮದಿನವನ್ನು ನಗರದ ಜನರಲ್ ಕೆ.ಎಸ್ .ತಿಮ್ಮಯ್ಯ ಸ್ಮಾರಕ ಭವನ (ಸನ್ನಿಸೈಡ್ )ದಲ್ಲಿಆಚರಿಸಲಾಯಿತು.

ವಿರಾಜಪೇಟೆ ಶಾಸಕ ಎ.ಎಸ್ .ಪೊನ್ನಣ್ಣ ಅವರು ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿದೀಪ ಬೆಳಗಿ, ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ‘‘ಜನರಲ್ ಕೋಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರು ಭಾರತೀಯ ಸೇನಾ ಕ್ಷೇತ್ರದಲ್ಲಿಅತ್ಯಂತ ಧೈರ್ಯಶಾಲಿ, ತಂತ್ರಗಾರಿಕೆ ಹಾಗೂ ಚತುರತೆಯ ನಾಯಕರಾಗಿದ್ದರು. 1957 ರಿಂದ 1961 ರವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಕೆ.ಎಸ್ .ತಿಮ್ಮಯ್ಯ ಅವರು ಎರಡನೇ ಮಹಾಯುದ್ಧ ಮತ್ತು 1948 ರ ಕಾಶ್ಮೀರ ಯುದ್ಧದಲ್ಲಿಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ‘‘ಜನರಲ್ ತಿಮ್ಮಯ್ಯ ಅವರ ಸೇನಾ ಕ್ಷೇತ್ರದಲ್ಲಿನ ಸಾಧನೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಅವರ ಮೌಲ್ಯಯುತ ಜೀವನ ಮತ್ತು ಬದುಕು ಸೇನಾ ಕ್ಷೇತ್ರದಲ್ಲಿಇಂದಿಗೂ ಸಹ ಮಾದರಿಯಾಗಿದೆ ಎಂದರು.

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಪದ್ಮಭೂಷಣ ಜನರಲ್ ಕೆ.ಎಸ್ .ತಿಮ್ಮಯ್ಯ ಅವರು ಭಾರತೀಯ ಸೇನೆಯಲ್ಲಿನೀಡಿರುವ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿಇದು ಪೊಲೀಸ್ ಇಲಾಖೆಗಳಲ್ಲಿಯೂ ಅಳವಡಿಸಿಕೊಳ್ಳಬೇಕಿದೆ. ಇಂತಹ ಮಹಾನ್ ಸೇನಾನಿಯ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದು ಶ್ಲಾಘನೀಯ,’’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್ .ಐಶ್ವರ್ಯಾ ಮಾತನಾಡಿ, ‘‘ರಾಷ್ಟ್ರಕಂಡ ಮೇರುಶಿಖರ ಜನರಲ್ ತಿಮ್ಮಯ್ಯ ಅವರಾಗಿದ್ದು, ಇಂಡೋ-ಚೈನಾ ಯುದ್ಧ ಸಂದರ್ಭದಲ್ಲಿದೇಶದ ರಕ್ಷಣೆ ಮತ್ತು ಸುರಕ್ಷತೆಗಾಗಿ ಚತುರತೆಯಿಂದ ಸೇನೆಯನ್ನು ಕಟ್ಟಿದ್ದಾರೆ,’’ ಎಂದು ಹೇಳಿದರು.

ನಿವೃತ್ತ ಸೇನಾನಿ ಗೌಡಂಡ ತಿಮ್ಮಯ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಸೀಲ್ದಾರ್ ಶ್ರೀಧರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ನಗರಸಭೆ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಪಪ್ಪು ತಿಮ್ಮಯ್ಯ, ಸಂಜು ಕಾವೇರಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಪೌಂಡೇಶನ್ ನ ಗೌರವ ಸಂಚಾಲಕ ತಮ್ಮು ಪೂವಯ್ಯ, ವೃತ್ತ ನಿರೀಕ್ಷಕ ಪಿ.ಆರ್ .ರಾಜು ಮತ್ತಿತರರು ಇದ್ದರು.

ವಿದ್ಯಾರ್ಥಿನಿಯರಾದ ಎ.ಎಸ್ .ರಿಷಿತಾ ಮುತ್ತಮ್ಮ, ಯಶ್ಮಿತಾ ಎ.ಎಚ್ ., ಎ.ಆರ್ .ದೇಚಮ್ಮ, ಚಿನ್ಮಯಿ ಎ.ಆರ್ . ಅವರು ದೇಶಭಕ್ತಿಗೀತೆ ಹಾಡಿ ಗಮನ ಸೆಳೆದರು.

ಫೋಟೊ: ಒಆಏ31ಓ- ಎಖಿ ಃಋಖಿಊಆಂಙ TWಓಓಋ Tಋಆಇ 2

ಕ್ಯಾಪ್ಷನ್ : ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿಜ.ತಿಮ್ಮಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎ.ಎಸ್ .ಪೊನ್ನಣ್ಣ ಜನರಲ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಫೋಟೊ: ಒಆಏ31ಓ- ಎಖಿ ಃಋಖಿಊಆಂಙ TWಓಓಋ Tಋಆಇ

ಕ್ಯಾಪ್ಷನ್ : ಕಾರ್ಯಕ್ರಮದಲ್ಲಿಗಣ್ಯರು ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.