ಮಹಾವೀರ ಜಯಂತಿ ಆಚರಣೆಯಲ್ಲಿಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಸಲಹೆ
ವಿಕ ಸುದ್ದಿಲೋಕ ಮಂಡ್ಯ
ವರ್ಧಮಾನ ಮಹಾವೀರರು ಜೈನ ಧರ್ಮದ 24ನೇ ಮತ್ತು ಕೊನೆಯ ತೀಥಂರ್ ಕರರಾಗಿದ್ದಾರೆ. ಇವರು ಕ್ರಿ.ಪೂ. 6ನೇ ಶತಮಾನದಲ್ಲಿಬಿಹಾರದ ಕುಂದಗ್ರಾಮದಲ್ಲಿಜನಿಸಿದವರು. ತ್ಯಾಗ ಮತ್ತು ಅಹಿಂಸೆಯ ಪ್ರತಿಪಾದಕರಾದ ಮಹಾವೀರರ ತತ್ವ ಸಿದ್ಧಾಂತಗಳನ್ನು ಯುವ ಪೀಳಿಗೆ ಜೀವನದಲ್ಲಿರೂಢಿಸಿಕೊಳ್ಳಬೇಕು ಎಂದು ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಸಲಹೆ ನೀಡಿದರು.
ನಗರದ ಮಹಾವೀರ ಭವನದಲ್ಲಿಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ ್ಯಕ್ರಮದಲ್ಲಿಮಹಾವೀರರ ಪ್ರತಿಮೆ ಪುಷ್ಪಾರ್ಚನೆ ನೆರವೇರಿಸಿ ಹಾಗೂ ಕಾರ ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿದ್ಧಾರ್ಥ ಮತ್ತು ತ್ರಿಶುಲಾ ದೇವಿಯ ಪುತ್ರರಾದ ಇವರು, 30ನೇ ವಯಸ್ಸಿನಲ್ಲಿಸನ್ಯಾಸ ಸ್ವೀಕರಿಸಿ, 12 ವರ್ಷಗಳ ತೀವ್ರ ತಪಸ್ಸಿನ ನಂತರ ಕೇವಲ ಜ್ಞಾನ(ಸರ್ವಜ್ಞತ್ವ) ಪಡೆದರು. ಅಹಿಂಸೆ , ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳನ್ನು ಬೋಧಿಸಿದರು. ಯುವ ಪೀಳಿಗೆಯ ಮಹಾವೀರರ ತತ್ತ$್ವಸಿದ್ಧಾಂತಗಳನ್ನು ಜೀವನದಲ್ಲಿಅಳವಡಿಸಿಕೊಂಡು ಅವರ ಹಾದಿಯಲ್ಲಿನಡೆದು ಸಮಾಜದ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿಬದುಕಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಹಾವೀರರ ಆದರ್ಶ, ಚಿಂತನೆ, ಬೋಧನೆಗಳನ್ನು ಸಮಾಜಕ್ಕೆ ಅತ್ಯವಶ್ಯಕವಾಗಿದೆ. ಮಕ್ಕಳು ಮಹಾವೀರರ ಆದರ್ಶ, ಚಿಂತನೆ, ಬೋಧನೆಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು. ಜೈನ ಧರ್ಮದ ಮೌಲ್ಯಗಳನ್ನು ಪಂಪ, ರನ್ನ, ಪೊನ್ನ ಅವರಂತಹ ಕವಿಗಳು ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿರುವಂತಹ ಕೊಡುಗೆಗಳು ಅಪಾರವಾಗಿದೆ. ಅವರ ಆದರ್ಶ ಚಿಂತನೆಗಳನ್ನು ಬೆಳಸಿಕೊಳ್ಳಬೇಕು ಎಂದರು.
ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜದಿಂದ 2024-25ನೇ ಸಾಲಿನ 7ನೇ ತರಗತಿ, ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಹಾಗೂ ಅಂತಿಮ ವರ್ಷದ ಪದವಿಯಲ್ಲಿಶೇ. 70 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ನರಸಿಂಹರಾಜಪುರ ಕ್ಷೇತ್ರದ ಪ.ಪೂ. ಸ್ವಸ್ತಿ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಕಂಬದಹಳ್ಳಿ ಕ್ಷೇತ್ರದ ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಆರತಿಪುರ ಕ್ಷೇತ್ರದ ಸಿದ್ಧಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ , ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ , ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಅಧಿಕಾರಿ ಮಧುಶ್ರೀ, ನಗರಸಭಾ ಮಾಜಿ ಸದಸ್ಯ ಎಂ.ಎನ್ .ಶ್ರೀಧರ್ , ಜೈನ ಸಮುದಾಯದ ಮುಖಂಡರಾದ ಎಂ.ಬಿ. ಶ್ರೀಧರ್ , ಶಾಂತಿ ಪ್ರಸಾದ್ , ವಿನಯ್ ಕುಮಾರ್ , ಮಹೇಂದ್ರ ಬಾಬು ಹಾಗೂ ಧರಣೇಂದ್ರಯ್ಯ ಇತರರು ಭಾಗವಹಿಸಿದ್ದರು.
ಕೋಟ್ ...
ಜೈನ ಧರ್ಮ ಪವಿತ್ರ ಧರ್ಮವಾಗಿದೆ. ಶಾಂತಿ ಮತ್ತು ಅಹಿಂಸೆ ಹಾಗೂ ಭಕ್ತಿ, ಶ್ರದ್ಧೆಯಿಂದ ಜಗತ್ತನ್ನು ಗೆಲ್ಲಬಹುದೆಂಬ ಸಂದೇಶವನ್ನು ಸೂಚಿಸುತ್ತದೆ.
-ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ
ಎಂಡಿವೈ31ಎನ್ 3
ಮಂಡ್ಯದ ಮಹಾವೀರ ಭವನದಲ್ಲಿಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ ್ಯಕ್ರಮದಲ್ಲಿಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಅವರು ಮಹಾವೀರರ ಪ್ರತಿಮೆ ಪುಷ್ಪಾರ್ಚನೆ ನೆರವೇರಿಸಿದರು.
ಎಂಡಿವೈ31ಎನ್ 4
ಮಂಡ್ಯದ ಮಹಾವೀರ ಭವನದಲ್ಲಿಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ ್ಯಕ್ರಮದಲ್ಲಿಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.

