ಕೊಲೆ ಪ್ರಕರಣ : 48 ಗಂಟೆಯಲ್ಲಿಬಂಧನ
ವಿಕ ಸುದ್ದಿಲೋಕ ಗದಗ
ಜಿಲ್ಲೆಯ ಹುಯಿಲಗೋಳ ಗ್ರಾಮದ ಚಂದ್ರು ಕುರಿ ಎಂಬವರ ನಿಗೂಢ ಕೊಲೆ ಪ್ರಕರಣವನ್ನು ಗದಗ ಗ್ರಾಮೀಣ ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲಿಭೇದಿಸುವಲ್ಲಿಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿಈ ಕೊಲೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾ.28ರಂದು ಹೊಂಬಳ- -ಹುಯಿಲಗೋಳ ರಸ್ತೆಯ ಆಲಿ ಹಳ್ಳದ ಸೇತುವೆಯ ಕೆಳಗೆ, 25 ರಿಂದ 30ವರ್ಷದ ವಯಸ್ಸಿನ ಯುವಕನ ಶವ ಅರ್ಧ ಸುಟ್ಟ ಸ್ಥಿತಿಯಲ್ಲಿಪತ್ತೆಯಾಗಿತ್ತು. ಆರಂಭದಲ್ಲಿಅನಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ ತನಿಖೆ ವೇಳೆ ಮೃತನ ತಂದೆ ಬಸವರಾಜ ಸಂಗಪ್ಪ ಕುರಿ ಅವರು ಶವ ನೋಡಿ, ಕೊಲೆ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿಪೊಲೀಸ್ ತಂಡವು ತನಿಖೆ ಕೈಗೊಂಡಿತ್ತು. ತಾಂತ್ರಿಕ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಹೊಳಲಾಪುರ ಗ್ರಾಮದ ಈರಪ್ಪ ಹನಮಂತಪ್ಪ ಕುದರಿ (34), ಹುಯಿಲಗೋಳ ಗ್ರಾಮದ ಮಹಾಂತೇಶ ರಂಗಪ್ಪ ಹದ್ಲಿ(30) ಹಾಗೂ ಹೊಳಲಾಪುರ ಗ್ರಾಮದ ರತ್ನಾ ಈರಪ್ಪ ಕುದರಿ (27) ಎಂದು ಗುರುತಿಸಲಾಗಿದೆ.
ಕೊಲೆಗೆ ಕಾರಣ:
ಮೃತ ಚಂದ್ರು ಕುರಿ ಆರೋಪಿ ರತ್ನಾ ಎಂಬವರ ಜತೆ 4-5 ವರ್ಷಗಳಿಂದ ಪರಿಚಯ ಹೊಂದಿದ್ದನು. ಆಕೆಗೆ ಪದೇ ಪದೆ ಫೋನ್ ಮಾಡಿ ಸಲುಗೆ ಬೆಳೆಸಲು ಪೀಡಿಸುತ್ತಿದ್ದನು. ಈ ವಿಚಾರ ತಿಳಿದ ಆಕೆಯ ಪತಿ ಈರಪ್ಪ ಮತ್ತು ಅಣ್ಣ ಮಹಾಂತೇಶ, ಚಂದ್ರುವಿಗೆ ಎಚ್ಚರಿಕೆ ನೀಡಿದ್ದರೂ ಆತ ಕೇಳಿರಲಿಲ್ಲ.
ಇದರಿಂದ ಬೇಸತ್ತ ಆರೋಪಿಗಳು ಸಂಚು ರೂಪಿಸಿ, ಮಾ.24 ರಂದು ರಾತ್ರಿ ರತ್ನಾಳ ಮೂಲಕ ಫೋನ್ ಮಾಡಿಸಿ ಚಂದ್ರುವನ್ನು ಮನೆಗೆ ಕರೆಯಿಸಿಕೊಂಡಿದ್ದಾರೆ. ನಂತರ ಆತನನ್ನು ಬೈಕ್ ಮೇಲೆ ಆಲಿ ಹಳ್ಳದ ಸೇತುವೆ ಕೆಳಗೆ ಕರೆದೊಯ್ದು, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ತಾವು ಮೊದಲೇ ಬಾಟಲಿಯಲ್ಲಿತಂದಿದ್ದ ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿದ್ದರು.
ಆರೋಪಿಗಳಿಂದ ಕೊಲೆಗೆ ಬಳಸಿದ ಮೋಟಾರ್ ಸೈಕಲ್ ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಗದಗ ಗ್ರಾಮೀಣ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾಪೊಲೀಸ್ ಅಧೀಕ್ಷಕ ರೋಹನ ಜಗದೀಶ ಶ್ಲಾಘಿಘಿಸಿದ್ದಾರೆ.
ಫೋಟೋ
ಈರಪ್ಪ
ಮಹಾಂತೇಶ
ರತ್ನಾ

