ದುಪ್ಪಟ್ಟು ತೆರಿಗೆ ವಸೂಲಿಗೆ ವಿರೋಧ

Contributed bymallugoudra461987@gmali.com|Vijaya Karnataka

ಬೆಳಗಾವಿ ಮಹಾನಗರ ಪಾಲಿಕೆಯಿಂದ ಅನಧಿಕೃತ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ರಾಜ್ಯ ಸರಕಾರದ ಆದೇಶವನ್ನು ಪಾಲಿಕೆ ಉಲ್ಲಂಘಿಸಿದೆ ಎಂದು ನಗರಸೇವಕ ದಿನೇಶ ನಾಶಿಪುಡಿ ಆರೋಪಿಸಿದ್ದಾರೆ. ಮೊದಲ ವರ್ಷಕ್ಕೆ ಮಾತ್ರ ದುಪ್ಪಟ್ಟು ತೆರಿಗೆ ವಿಧಿಸಿ, ನಂತರ ಸಾಮಾನ್ಯ ತೆರಿಗೆ ವಸೂಲಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

opposition to controversially high double taxation

*ಪಾಲಿಕೆ ಎದುರು ನಗರಸೇವಕ ದಿನೇಶ ನಾಶಿಪುಡಿ ಪ್ರತಿಭಟನೆ

ವಿಕ ಸುದ್ದಿಲೋಕ ಬೆಳಗಾವಿ

ರಾಜ್ಯ ಸರಕಾರದ ಆದೇಶದಂತೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಅನಧಿಕೃತ ಕಟ್ಟಡಗಳಿಗೆ ಮೊದಲ ವರ್ಷಕ್ಕೆ ಮಾತ್ರ ದುಪ್ಪಟ್ಟು ದರ ವಿಧಿಸಿ, ನಂತರದ ವರ್ಷಗಳಲ್ಲಿಸಾಮಾನ್ಯ ಏಕ ತೆರಿಗೆ ವಿಧಿಸಬೇಕು ಎಂದು ಆಗ್ರಹಿಸಿ ನಗರಸೇವಕ ದಿನೇಶ ನಾಶಿಪುಡಿ ಅವರು ಮಂಗಳವಾರ ಇಲ್ಲಿನ ಪಾಲಿಕೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ‘‘2024ರ ಸೆಪ್ಟೆಂಬರ್ 10ರಂದು ಕರ್ನಾಟಕ ಸರಕಾರ ಹೊರಡಿಸಿದ ಆದೇಶದಲ್ಲಿಅನಧಿಕೃತ ಕಟ್ಟಡಗಳಿಗೆ ಮೊದಲ ವರ್ಷಕ್ಕೆ ಮಾತ್ರ ದುಪ್ಪಟ್ಟು ತೆರಿಗೆ ವಿಧಿಸಿ, ನಂತರ ವರ್ಷಗಳಲ್ಲಿಸಾಮಾನ್ಯ ಏಕ ತೆರಿಗೆ ವಿಧಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಬೆಳಗಾವಿ ಪಾಲಿಕೆಯಿಂದ ಸರಕಾರದ ಆದೇಶ ಉಲ್ಲಂಘಿಘಿಸಿ ದುಪ್ಪಟ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ. ಹಾಗಾಗಿ, ಸರಕಾರದ ನಿಯಮದಂತೆ ತೆರಿಗೆ ವಸೂಲಿ ಮಾಡಬೇಕು,’’ಎಂದು ಆಗ್ರಹಿಸಿದರು.

ಬಳಿಕ ಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಅವರಿಗೆ ಮನವಿ ಸಲ್ಲಿಸಿದರು.

ಫೋಟೋ: 31ಮಲ್ಲು2

ಬೆಳಗಾವಿ ಪಾಲಿಕೆ ಆಯುಕ್ತರ ಕಚೇರಿ ಎದುರು ದಿನೇಶ ನಾಶಿಪುಡಿ ಪ್ರತಿಭಟನೆ ನಡೆಸಿದರು.