ಪ್ರೇಮದ ಊರಲ್ಲಿಶ್ರೀರಾಮ್ ಪಿಕಬೂ
ಇಂಟ್ರೊ
ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಕ್ಲಾಸ್ ಪಾತ್ರಗಳ ಮೂಲಕ ಮಹಿಳೆಯರ ಫೇವರಿಟ್ ಚಾಕೊಲೇಟ್ ಹೀರೊ ಆಗಿರುವ ಶ್ರೀರಾಮ್ ಈಗ ‘ಪ್ರೇಮದ ಊರಲ್ಲಿ’ ಮತ್ತು ‘ಪಿಕಬೂ’ ಸಿನಿಮಾಗಳಲ್ಲಿನಟಿಸುತ್ತಿದ್ದಾರೆ.
ಕಿರಣ್ ಚಂದ್ರ
ಸ್ಯಾಂಡಲ್ ವುಡ್ ನಲ್ಲಿ‘ಇರುವುದೆಲ್ಲವ ಬಿಟ್ಟು’, ‘ಹೊಂದಿಸಿ ಬರೆಯಿರಿ’, ‘ಗಜಾನನ ಗ್ಯಾಂಗ್ ’ ನಂತರ ಸ್ವಲ್ಪ ಬಿಡುವು ಪಡೆದುಕೊಂಡಿದ್ದ ನಟ ಶ್ರೀರಾಮ… ಈಗ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. 2023ರಲ್ಲಿ‘ಜಸ್ಟ್ ಪಾಸ್ ’ ಎಂಬ ಚಿತ್ರ ಮಾಡಿದ ಬಳಿಕ ಅವರು ಒಳ್ಳೆಯ ಕಥೆಗಳಿಗೆ ಕಾದು ತಮ್ಮ ಇಮೇಜ್ ಗೆ ಸೂಕ್ತವಾಗುವ ಎರಡು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ರೈತ ಸಂತು
ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲಎಂದು ದೂರುವ ಮುನ್ನ ನಮ್ಮ ಸಿನಿಮಾ ಅವರಿಗೆ ತಲುಪಿದೆಯೇ ಎಂದು ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿರುವ ಶ್ರೀರಾಮ್ , ‘ನನಗೆ ಬರುತ್ತಿದ್ದ ಕಾಲೇಜು ಹುಡುಗನ ಪಾತ್ರಗಳಿಂದಾಚೆಗೆ ಹೊಸದೇನಾದರು ಮಾಡಬೇಕೆಂದು ‘ಪ್ರೇಮದ ಊರಲ್ಲಿ’ ಸಿನಿಮಾ ಆಯ್ಕೆ ಮಾಡಿದೆ. ಒಂದೇ ಬಾರಿಗೆ ಅದನ್ನು ಒಪ್ಪದೆ ಚಿತ್ರಕಥೆಯಲ್ಲಿಬದಲಾವಣೆ ಬಯಸಿದೆ. ನಿರ್ದೇಶಕ ಮನೋಜ್ ಜತೆಗೆ ಸೇರಿ ಸುಮಾರು 14 ವರ್ಷನ್ ಗಳನ್ನು ಬರೆದ ನಂತರ ಈ ಕಥೆ ಲಾಕ್ ಆಯಿತು. ನಾನು ಹೇಳಿದೆಲ್ಲವನ್ನೂ ಅವರು ಬದಲಾಯಿಸಿಲ್ಲ, ಆದರೆ ನನ್ನ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಸರಿಯಾಗಿ ಪಂಚೆ ಉಡಲು ಬರದವನು ಹಳ್ಳಿಯಲ್ಲೇ ಇದ್ದು ಎಲ್ಲವನ್ನೂ ಕಲಿತೆ. ಜನರು ನನ್ನನ್ನು ಇಷ್ಟ ಪಡುವುದಕ್ಕಿಂತ ಹೆಚ್ಚಾಗಿ ಪಾತ್ರವಾಗಿ ನನ್ನನ್ನು ಒಪ್ಪಿಕೊಳ್ಳಬೇಕು. ಬರೀ ಸ್ಟಂಟ್ , ಡಾನ್ಸ್ ಮಾಡಿದ ಮಾತ್ರಕ್ಕೆ ನಾನು ಹೀರೊ ಆದರೆ ಜನರು ನನ್ನ ಸಿನಿಮಾವನ್ನು ಬ್ಲಾಕ್ ಬಸ್ಟರ್ ಮಾಡಲ್ಲ. ಈ ಸಿನಿಮಾದಲ್ಲಿಶ್ರೀರಾಮ್ ಗಿಂತ ಯುವ ರೈತ ಸಂತುವಾಗಿ ಕಾಣಬೇಕು ಎಂದು ಶ್ರಮಪಟ್ಟೆ. ಸದ್ಯಕ್ಕೆ ನನಗಿರುವ ಮುಖ್ಯ ಗುರಿಯೂ ಅದೇ’ ಎಂದಿದ್ದಾರೆ.
ಸ್ಮಾರ್ಟ್ ಐಟಿ
‘ಮಂಜು ಸ್ವರಾಜ್ ನಿರ್ದೇಶನದ ‘ಪಿಕಬೂ’ ಸಿನಿಮಾದಲ್ಲಿನನ್ನ ಪಾತ್ರ ರೈತ ಸಂತುಗಿಂತ ತದ್ವಿರುದ್ಧ. ಇದರಲ್ಲಿಐಟಿ ಉದ್ಯಮದಲ್ಲಿರುವ ಒಬ್ಬ ಸಭ್ಯ ಮತ್ತು ಸ್ಮಾರ್ಟ್ ಹುಡುಗನಾಗಿದ್ದೇನೆ. ಫಾರ್ಮಲ್ ತೊಡುವ ಕ್ಲೀನ್ ಶೇವ್ ಹ್ಯಾಂಡ್ ಸಮ್ ಪಾತ್ರವಿದು. ಮಾತು ಕಡಿಮೆ, ಕಣ್ಣಿನಲ್ಲೇ ಎಲ್ಲವನ್ನೂ ಹೇಳುವ ಹಾಗೂ ನಟಿ ಅಮೂಲ್ಯ ಕಮ…ಬ್ಯಾಕ್ ಸಿನಿಮಾದಲ್ಲಿಒಂದು ಚಾಲೆಂಜಿಂಗ್ ಪಾತ್ರ ಎಂದು ಒಪ್ಪಿದೆ. ಇವೆರಡೂ ಸಿನಿಮಾಗಳ ಪಾತ್ರಗಳಲ್ಲಿನನ್ನನ್ನು ನೋಡಿದ ಮೇಲೆ ನಾನು ಎಲ್ಲಾಥರದ ಜನರಿಗೆ ಇಷ್ಟವಾಗುತ್ತೇನೆ. ಮಾತ್ರವಲ್ಲದೆ, ನಾನು ವಿಭಿನ್ನ ಪಾತ್ರಗಳನ್ನು ಮಾಡಬಲ್ಲೆಎಂದು ನಿರ್ದೇಶಕರು ನನಗಾಗಿಯೇ ಸ್ಪೆಷಲ್ ಪಾತ್ರಗಳನ್ನು ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಇದೇ ಕಾರಣಕ್ಕೆ ಈ ಸಿನಿಮಾಗಳ ಬಿಡುಗಡೆಗೆ ಮೊದಲು ಮತ್ಯಾವುದೇ ಸಿನಿಮಾಗೆ ಡೇಟ್ಸ್ ನೀಡುವ ಬಗ್ಗೆ ಯೋಚಿಸಿಲ್ಲ’ ಎಂದು ವಿವರಿಸಿದ್ದಾರೆ ನಟ ಶ್ರೀರಾಮ್ .
ಕೋಟ್
ನಟನಾಗಿ ನನಗೂ ಪ್ರತಿದಿನ ಸಿನಿಮಾ ಕೆಲಸಗಳಲ್ಲಿಬಿಝಿ ಆಗಿರಬೇಕು, ವಿಭಿನ್ನ ಪಾತ್ರಗಳಲ್ಲಿಕಾಣಿಸಬೇಕು ಎಂಬ ಹಂಬಲವಿದೆ. ಆದರೆ ನಾನೇ ಹೀರೊ ಆಗಿರುವುದರಿಂದ ಚಿತ್ರದ ಎಲ್ಲಾಹಂತಗಳಲ್ಲೂಜತೆಯಲ್ಲಿರುತ್ತೇನೆ. ಇದೇ ಕಾರಣಕ್ಕೆ ಸಾಕಷ್ಟು ಕಥೆ ಕೇಳುತ್ತಿದ್ದರೂ ಡೇಟ್ಸ್ ನೀಡಲಾಗುತ್ತಿಲ್ಲ. ಯಾರೇ ಸಿನಿಮಾ ಮೇಕರ್ಸ್ ನನಗಾಗಿ ಕಾಯುವುದು ನನಗೂ ಇಷ್ಟವಿಲ್ಲ.
-ಶ್ರೀರಾಮ್ | ನಟ

